ಬಿಹಾರದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಮಾಜಿ ಶಾಸಕ ಆನಂದ ಮೋಹನ ಬಿಡುಗಡೆಯ ಸಾಧ್ಯತೆ

ಬಿಹಾರ ಸಂಯುಕ್ತ ಜನತಾದಳ, ಕಾಂಗ್ರೆಸ್, ಕಮ್ಯುನಿಸ್ಟ ಮತ್ತು ರಾಷ್ಟ್ರೀಯ ಜನತಾದಳ ಪಕ್ಷದ ಸರಕಾರವು ಜೈಲಿನ ನಿಯಮಗಳಲ್ಲಿ ಬದಲಾವಣೆ ಮಾಡಿದ ದುಷ್ಪರಿಣಾಮ !

ಮಾಜಿ ಶಾಸಕ ಆನಂದ ಮೋಹನ

ನವದೆಹಲಿ – 1994 ರಲ್ಲಿ ನಡೆದ ಬಿಹಾರ ಗೋಪಾಲಗಂಜ ಜಿಲ್ಲಾಧಿಕಾರಿ ಜಿ. ಕೃಷ್ಣಯ್ಯಾ ಇವರ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಶಾಸಕ ಆನಂದ ಮೋಹನನನ್ನು ಬಿಡುಗಡೆಗೊಳಿಸಲಿದೆ. ಬಿಹಾರದ ಸಂಯುಕ್ತ ಜನತಾ ದಳ, ಕಾಂಗ್ರೆಸ್, ಕಮ್ಯುನಿಸ್ಟ ಮತ್ತು ರಾಷ್ಟ್ರೀಯ ಜನತಾ ದಳ ಪಕ್ಷದ ಸಂಯುಕ್ತ ಸರಕಾರವು ಎಪ್ರಿಲ್ 10 ರಂದು ಜೈಲಿನ ನಿಯಮಗಳಲ್ಲಿ ಬದಲಾವಣೆ ಮಾಡಿದ್ದರಿಂದ ಆನಂದ ಮೋಹನ ಇವನ ಬಿಡುಗಡೆಯ ಹಾದಿ ಸುಲಭವಾಗಿದೆ. ಆನಂದ ಮೋಹನನ ಮಗ ಚೇತನ ಇವನು ಸರಕಾರದ ರಾಷ್ಟ್ರೀಯ ಜನತಾ ದಳದ ಶಾಸಕನಾಗಿದ್ದಾನೆ. ಜೈಲಿನ ನಿಯಮಗಳನ್ನು ಬದಲಾಯಿಸಿರುವುದರಿಂದ ಇತರೆ 26 ಆರೋಪಿಗಳೂ ಬಿಡುಗಡೆ ಹೊಂದಲಿದ್ದಾರೆ.

1. ಆನಂದ ಮೋಹನನ ಬಿಡುಗಡೆಯ ಬಗ್ಗೆ ಭಾಜಪ, ಒಂದು ವೇಳೆ ಆನಂದ ಮೋಹನ ಬಿಡುಗಡೆಗೊಳ್ಳಲಿದ್ದರೆ, ಸರಾಯಿ ಕುಡಿದಿದ್ದರಿಂದ ಜೈಲುವಾಸ ಅನುಭವಿಸುತ್ತಿರುವ ಸಾವಿರಾರು ಜನರನ್ನೂ ಸರಕಾರ ಬಿಡುಗಡೆಗೊಳಿಸಬೇಕು.

2. ಆನಂದ ಮೋಹನ ತನ್ನ ಬಿಡುಗಡೆಯ ವಿಷಯದಲ್ಲಿ, ನಾನು ನನ್ನ ಶಿಕ್ಷೆಯನ್ನು ಅನುಭವಿಸಿದ್ದೇನೆ. ಈಗ ಯಾವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೋ ಅದು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.ಎಂದು ಹೇಳಿದ್ದಾನೆ.

3. ದಿವಂಗತ ಕೃಷ್ಣಯ್ಯಾ ಇವರ ಪತ್ನಿ ಉಮಾ ದೇವಿಯವರು ಆನಂದ ಮೋಹನನ ಬಿಡುಗಡೆಯ ಕುರಿತು ಟೀಕಿಸಿದ್ದಾರೆ. ಆನಂದ ಮೋಹನನ ಬಿಡುಗಡೆಯನ್ನು ವಿರೋಧಿಸಬೇಕೆಂದು ಅವರು ಕೋರಿದ್ದಾರೆ.

ಸಂಪಾದಕೀಯ ನಿಲುವು

ಆರೋಪಿಗಳ ಬಿಡುಗಡೆಗಾಗಿ ನಿಯಮಗಳನ್ನು ಬದಲಾಯಿಸುವ ರಾಜಕಾರಣಿಗಳು ಬಿಹಾರದಲ್ಲಿ ಪುನಃ ಜಂಗಲ್ ರಾಜ ನಿರ್ಮಾಣ ಮಾಡುತ್ತಿದ್ದಾರೆ. `ಇದು ಪ್ರಜಾಪ್ರಭುತ್ವಕ್ಕೆ ಅಪಮಾನಕಾರಕವಾಗಿದೆ’, ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !