ಭದ್ರತಾ ಪಡೆಯ ಮೇಲಿನ ಭಯೋತ್ಪಾದಕರ ದಾಳಿಯ ವಿರುದ್ಧ ನಿರ್ಣಾಯಕ ಪ್ರತ್ಯುತ್ತರದ ನಿರೀಕ್ಷೆ ! – ಪನೂನ ಕಾಶ್ಮೀರ

ಪೂಂಛನಲ್ಲಿ ಜಿಹಾದಿ ಭಯೋತ್ಪಾದಕರು ಭಾರತೀಯ ಸೈನಿಕರ ವಾಹನದ ಮೇಲೆ ಬಾಂಬ್ ಎಸೆದ ಪ್ರಕರಣ

ಜಮ್ಮೂ – ಜಮ್ಮೂ-ಕಾಶ್ಮೀರದ ರಾಜೋರಿ-ಪೂಂಛನಲ್ಲಿ ಇತ್ತೀಚೆಗೆ ಭದ್ರತಾ ಪಡೆಯ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಸಂಪೂರ್ಣ ದೇಶ ವಿಚಲಿತಗೊಂಡಿದೆ. ಈ ಭಯೋತ್ಪಾದಕ ದಾಳಿಯ ವಿರುದ್ಧ ಜನತೆ ಭಾರತ ಸರಕಾರದಿಂದ ನಿರ್ಣಾಯಕ ಪ್ರತ್ಯುತ್ತರದ ಎದುರು ನೋಡುತ್ತಿದೆಯೆಂದು `ಪನೂನ ಕಶ್ಮೀರ’ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪೂಂಛನಲ್ಲಿ ಜಿಹಾದಿ ಭಯೋತ್ಪಾದಕರು ಭಾರತೀಯ ಸೈನಿಕರ ವಾಹನದ ಮೇಲೆ ಬಾಂಬ್ ಎಸೆದಿದ್ದರಿಂದ 5 ಸೈನಿಕರ ವೀರಮರಣವನ್ನು ಹೊಂದಿದ್ದರು ಈ ಹಿನ್ನೆಲೆಯಲ್ಲಿ `ಪನೂನ ಕಶ್ಮೀರ’ ಈ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.

ಪನೂನ ಕಶ್ಮೀರವು, ಜಮ್ಮೂ-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಇದಲ್ಲದೇ ಆಂತರಿಕ ಭಯೋತ್ಪಾದಕ ಶಕ್ತಿಯಿಂದಲೂ ಈ ಚಟುವಟಿಕೆಗಳು ನಡೆದಿವೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಆವಶ್ಯಕತೆಯಿದೆ. ಪೂಂಛನಲ್ಲಿ ನಡೆದ ಬಾಂಬ್ ಸ್ಫೋಟವೆಂದರೆ ಗ್ಯಾಸ ಸಿಲಿಂಡರ ಸ್ಫೋಟಿಸಿರುವ ಘಟನೆ, ಯುರಿಯಾದಂತಹ ರಾಸಾಯನಿಕ ಪದಾರ್ಥದ ಸ್ಫೋಟ ಅಥವಾ ಶಾರ್ಟ ಸರ್ಕಿಟ್ ಎಂದು ತೋರಿಸುವ ಪ್ರಯತ್ನಗಳಾಗುತ್ತಿವೆ. `ಪಾಕಿಸ್ತಾನಕ್ಕೆ ಹತ್ತಿರವಿರುವ ರಾಜೊರಿ–ಪೂಂಛ ಪ್ರದೇಶದ ಅರಣ್ಯ ಭಾರತದ ನಿಯಂತ್ರಣದಲ್ಲಿದೆಯೇ ?’ ಹಾಗೆಯೇ `ರಾಜೊರಿ-ಪೂಂಛನ ಭಯೋತ್ಪಾದಕ ವಿಷಯದಲ್ಲಿ ಭಾರತ ಸರಕಾರ ಜಾಗರೂಕವಾಗಿದೆಯೇ ?’, ಎಂದೂ `ಪನೂನ ಕಶ್ಮೀರ’ ಭಾರತ ಸರಕಾರವನ್ನು ಪ್ರಶ್ನಿಸಿದೆ.

ಜಿಹಾದಿಗಳನ್ನು ನಾಶಪಡಿಸಿದರೆ ಮಾತ್ರ ಕಾಶ್ಮೀರದ ಸ್ಥಿತಿ ಸಾಮಾನ್ಯಗೊಳ್ಳಲಿದೆ !

`ಪನೂನ ಕಶ್ಮೀರ’ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಜಿಹಾದಿಗಳನ್ನು ನಷ್ಟಗೊಳಿಸಿದರೆ ಮಾತ್ರ ಜಮ್ಮೂ-ಕಾಶ್ಮೀರದಲ್ಲಿ ಸ್ಥಿತಿ ಸಾಮಾನ್ಯವಾಗಬಹುದು. ಜಮ್ಮೂ-ಕಾಶ್ಮೀರ ಪಂಜಾಬನ್ನು ಹಿಂದಿಕ್ಕಿ ಮಾದಕ ವಸ್ತುಗಳ ಎರಡನೇ ಅತ್ಯಧಿಕ ದೊಡ್ಡ ಕೇಂದ್ರವಾಗಿದೆ. ಮಾದಕ ವಸ್ತುಗಳು ಮತ್ತು ಜಿಹಾದಿ ಭಯೋತ್ಪಾದನೆ ಇವೆರಡು ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎನ್ನುವುದು ಜಗಜ್ಜಾಹೀರವಾಗಿದೆ. ನಾವು ಪ್ರಧಾನಮಂತ್ರಿ ಮತ್ತು ಕೇಂದ್ರೀಯ ಗೃಹಸಚಿವರಿಗೆ ಅವರು ಕಾಶ್ಮೀರದ ಭೀಕರತೆಯ ವಾಸ್ತವವನ್ನು ಗುರುತಿಸಬೇಕು ಎಂದು ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನವನ್ನು ನಷ್ಟಗೊಳಿಸದೇ ಸೈನಿಕರ ಮೇಲೆ ಜಿಹಾದಿ ಭಯೋತ್ಪಾದಕರಿಂದ ನಡೆಯುವ ದಾಳಿಗಳಿ ನಿಲ್ಲುವುದಿಲ್ಲ. ಪಾಕಿಸ್ತಾನದ ಮೇಲೆ ದಾಳಿ ಮಾಡುವುದೇ ಭಾರತ ನೀಡುವ ನಿರ್ಣಾಯಕ ಪ್ರತ್ಯುತ್ತರವಾಗಿರಲಿದೆ !