‘ಲವ್ ಜಿಹಾದ್’ ನ ಭೀಕರತೆ ತೋರಿಸುವ `ದಿ ಕೇರಳ ಸ್ಟೋರಿ’ ಹಿಂದಿ ಚಲನಚಿತ್ರದ ‘ಟ್ರೇಲರ್’ ಬಿಡುಗಡೆ

ಕೇರಳದಿಂದ 22 ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು `ಲವ್ ಜಿಹಾದ’ ನಲ್ಲಿ ಸಿಲುಕಿಸಿ ಭಯೋತ್ಪಾದಕರಾಗಿಸಿದ ಕಥೆ ಆಧರಿತ ಚಲನಚಿತ್ರ !

(`ಟ್ರೇಲರ್’ ಎಂದರೆ ಚಲನಚಿತ್ರದ ಜಾಹೀರಾತು ಪ್ರದರ್ಶಿಸುವ ವಿಡಿಯೋ)

ನವ ದೆಹಲಿ – ಮುಂಬರುವ ಹಿಂದೂ ಚಲನಚಿತ್ರ `ದಿ ಕೇರಳ ಸ್ಟೋರಿ’ಯ `ಟ್ರೇಲರ’ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ `ಲವ್ ಜಿಹಾದ’ ಮೂಲಕ ವಂಚನೆಗೊಳಗಾಗಿರುವ 22 ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಮತಾಂತರಗೊಳಿಸಿ ಅವರನ್ನು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಸಿರಿಯಾ ಮತ್ತು ಅಫ್ಘಾನಿಸ್ತಾನಗಳಂತಹ ಮುಸ್ಲಿಂ ದೇಶಗಳಿಗೆ ಕರೆದುಕೊಂಡು ಹೋಗಿರುವ ವಾಸ್ತವದ ಚಿತ್ರಣವನ್ನು ಚಿತ್ರೀಕರಿಸಲಾಗಿದೆ. ಸುದಿಪ್ತೊ ಸೇನ್ ಇವರು ಈ ಚಲನಚಿತ್ರದ ನಿರ್ದೇಶಕರಾಗಿದ್ದು, ವಿಫುಲ ಅಮೃತಲಾಲ ಶಹಾ ಇವರು ನಿರ್ಮಾಪಕರಾಗಿದ್ದಾರೆ. ಮೇ 5 ರಂದು ಈ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

(ಸೌಜನ್ಯ : Sunshine Pictures)

ಈ `ಟ್ರೇಲರ್’ ನಲ್ಲಿ ಕೇರಳದ ಹಿಂದೂ ಕುಟುಂಬದ ಶಾಲಿನಿ ಉನ್ನಿಕೃಷ್ಣನ್ ಈ ಯುವತಿಯನ್ನು ಲವ್ ಜಿಹಾದನಲ್ಲಿ ಸಿಲುಕಿಸಿ ಮತಾಂತರಗೊಳಿಸಿ ಫಾತಿಮಾ ಎಂದು ಮಾಡಲಾಯಿತು. ಮತ್ತು ತದನಂತರ ಇಸ್ಲಾಮಿಕ್ ಸ್ಟೇಟ ಈ ಭಯೋತ್ಪಾದಕ ಸಂಘಟನೆಯಲ್ಲಿ ಸೇರ್ಪಡೆಗೊಳಿಸಿರುವ ಕಥೆಯನ್ನು ತೋರಿಸಲಾಗಿದೆ. ಈ ಕಥೆ ಸತ್ಯ ಘಟನೆಯನ್ನು ಆಧರಿಸಿದೆಯೆಂದು ಹೇಳಲಾಗುತ್ತಿದೆ.

ಏನಿದೆ `ಟ್ರೇಲರ್’ ನಲ್ಲಿ ?

ಈ ಟ್ರೇಲರ್ ನಲ್ಲಿ ವಿಶ್ವವಿದ್ಯಾಲಯದ ಮುಸಲ್ಮಾನ ವಿದ್ಯಾರ್ಥಿನಿಯ ಮಾತಿಗೆ ಮರುಳಾಗಿ ಶಾಲಿನಿ ಉನ್ನಿಕೃಷ್ಣನ್ ಯುವತಿಯು ಸಿಲುಕುತ್ತಾಳೆ. ಮತ್ತು ಅವಳು ಹಿಜಾಬ ಧರಿಸಲು ಪ್ರಾರಂಭಿಸುತ್ತಾಳೆ. ತದನಂತರ ಅವಳನ್ನು ಫಾತಿಮಾ ಮಾಡಿ ಮತಾಂತರಗೊಳಿಸಲಾಗುತ್ತದೆ. ಬಳಿಕ ಮುಸಲ್ಮಾನ ಯುವಕನೊಂದಿಗೆ ಅವಳ ವಿವಾಹ ಮಾಡಲಾಗುತ್ತದೆ. ತದನಂತರ ಅವಳನ್ನು ಮುಸ್ಲಿಂ ದೇಶಗಳಿಗೆ ಕರೆದುಕೊಂಡು ಹೋಗಿ ಇಸ್ಲಾಮಿಕ್ ಸ್ಟೇಟ್ ನಲ್ಲಿ ಸೇರಿಸಲಾಗುತ್ತದೆ. ಈ ಎಲ್ಲ ಘಟನಾವಳಿಗಳಲ್ಲಿ ಅವಳಿಗೆ ಯಾವುದೇ ಕಲ್ಪನೆಯೂ ಇರುವುದಿಲ್ಲ. ಈ ವಿಷಯ ಕೇವಲ ಒಬ್ಬ ಶಾಲಿನಿಯದ್ದು ಆಗಿರದೇ ಕೇರಳದ 22 ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರದ್ದಾಗಿದೆಯೆಂದು ಇದರಲ್ಲಿ ಹೇಳಲಾಗಿದೆ.

ಟ್ರೇಲರನಲ್ಲಿ ಶಾಲಿನಿಗೆ `ಇಸ್ಲಾಮಿಕ್ ಸ್ಟೇಟ್ ನಲ್ಲಿ ಯಾವಾಗ ಭರ್ತಿಯಾದೆ ?’ ಎಂದು ಪ್ರಶ್ನಿಸಿದಾಗ ಅವಳು, `ಇದನ್ನು ಅರಿತುಕೊಳ್ಳಲು `ಏಕೆ ಮತ್ತು ಹೇಗೆ ?’ ಎನ್ನುವುದನ್ನು ತಿಳಿದುಕೊಳ್ಳುವುದು ಹೆಚ್ಚು ಆವಶ್ಯಕವಾಗಿದೆ’ ಎಂದು ಹೇಳುತ್ತಾಳೆ. ತದನಂತರ `ಮತಾಂಧ ಮುಸಲ್ಮಾನರು ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಯಾವ ರೀತಿ ಬಲೆಯಲ್ಲಿ ಸೆಳೆಯಬೇಕು ?’ ಎನ್ನುವ ಸಂಚನ್ನು ತೋರಿಸಲಾಗಿದೆ. ಇದಲ್ಲದೇ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದ ಇವರು ಮುಖ್ಯಮಂತ್ರಿಯಾಗಿದ್ದಾಗ `ಮುಂದಿನ 20 ವರ್ಷಗಳಲ್ಲಿ ಕೇರಳ ಇಸ್ಲಾಮಿಕ್ ಸ್ಟೇಟ್ ಆಗಲಿದೆ’ ಎನ್ನುವ ಹೇಳಿಕೆಯನ್ನೂ ತೋರಿಸಲಾಗಿದೆ.