ದಾಂತೇವಾಡದಲ್ಲಿ (ಛತ್ತೀಸ್‌ಗಢ) ನಕ್ಸಲೀಯರ ಬಾಂಬ್ ಸ್ಫೋಟದಲ್ಲಿ 10 ಸೈನಿಕರು ವೀರಮರಣ !

ಒಬ್ಬ ಚಾಲಕ ಕೂಡ ಸಾವನ್ನಪ್ಪಿದ್ದಾನೆ

ಬಸ್ತಾರ್ (ಛತ್ತೀಸ್‌ಗಢ) – ಛತ್ತೀಸ್‌ಗಢದ ದಾಂತೇವಾಡ ಪ್ರದೇಶದಲ್ಲಿ ನಕ್ಸಲೀಯರು ನಡೆಸಿದ ಬಾಂಬ್ ಸ್ಫೋಟದಲ್ಲಿ ಜಿಲ್ಲಾ ಮೀಸಲು ಗಾರ್ಡ್‌ನ 10 ಯೋಧರು ಹುತಾತ್ಮರಾಗಿದ್ದು, ವಾಹನ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಏಪ್ರಿಲ್ 26 ರಂದು ಮಧ್ಯಾಹ್ನ ನಡೆದಿದೆ. ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ನಡೆಸಿ ಯೋಧರು ತಮ್ಮ ವಾಹನದಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯ ನಂತರ ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟ್ವೀಟ್ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ. (ಇದು ಬಿಟ್ಟರೆ ಆಡಳಿತಗಾರರು ಏನು ಮಾಡುತ್ತಾರೆ ? – ಸಂಪಾದಕರು)

(ಸೌಜನ್ಯ : TV9 Bharatvarsh)

ದಾಂತೆವಾಡದಲ್ಲಿ ಛತ್ತೀಗಡ್‌ದಲ್ಲಿ ನಕ್ಸಲ್‌ ದಾಳಿಯನ್ನು ಖಂಡಿಸಿದ ನರೇಂದ್ರ ಮೋದಿ

ದಾಂತೇವಾಡದಲ್ಲಿ ಛತ್ತೀಸ್‌ಗಢ ಪೊಲೀಸರ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ದಾಳಿಯಲ್ಲಿ ನಾವು ಕಳೆದುಕೊಂಡ ವೀರ ಯೋಧರಿಗೆ ನನ್ನ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ತ್ಯಾಗ ಸದಾ ಸ್ಮರಣೀಯವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು, ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿದ್ದಾರೆ.

ದಂತೇವಾಡದಲ್ಲಿ ಛತ್ತೀಸ್‌ಗಢ ಪೊಲೀಸರ ಮೇಲೆ ನಡೆದ ಹೇಡಿತನದ ದಾಳಿ – ಗೃಹ ಸಚಿವ ಅಮಿತ ಶಾಹ

ಗೃಹಸಚಿವ ಅಮಿತ್ ಶಾಹ

ದಂತೇವಾಡದಲ್ಲಿ ಛತ್ತೀಸ್‌ಗಢ ಪೊಲೀಸರ ಮೇಲೆ ನಡೆದ ಹೇಡಿತನದ ದಾಳಿಯಿಂದ ನಾನು ನೊಂದಿದ್ದೇನೆ. ಈ ಬಗ್ಗೆ ಛತ್ತೀಸ್‌ಗಢದ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ ಮತ್ತು ರಾಜ್ಯ ಸರಕಾರಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದೇನೆ. ವೀರಗತಿಹೊಂದಿದ ಯೋಧರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿದ್ದಾರೆ.

ಛತ್ತೀಸ್ ಗಢನ ದಾಂತೇವಾಡದಲ್ಲಿ ನಕ್ಸಲರು ಡಿಆರ್ ಜಿ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ನೆಲ ಬಾಂಬ್ ಮೂಲಕ ಸ್ಪೋಟಿಸಿದ್ದಾರೆ. ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರೆಲ್ಲರ ದೇಹಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಆಗಮಿಸಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಬಸ್ತಾರ್.ನ ಐಜಿ ಪಿ. ಸುಂದರರಾಜ್ ಹೇಳಿದ್ದಾರೆ, ಎಂದು ಎಎನ್‌ಐ. ಸುದ್ಧಿ ಸಂಸ್ಥೆ ವರದಿ ಮಾಡಿದೆ.

ಸಂಪಾದಕೀಯ ನಿಲುವು

ನಕ್ಸಲವಾದಿ ಸಮಸ್ಯೆಯನ್ನು ನಾಶ ಮಾಡಲಾರದ ಸರ್ವಪಕ್ಷದ ಆಡಳಿತದವರೇ ಇದಕ್ಕೆ ಹೊಣೆ !