ಹಿಜಬುಲ್ ಮುಜಾಹಿದಿನ್ ನ ಮುಖಂಡ ಸಲಾಹುದ್ದೀನ್ ಇವನ ಮಗನ ಆಸ್ತಿ ವಶ

ಶ್ರೀನಗರ (ಜಮ್ಮು ಕಾಶ್ಮೀರ) – ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.ಯಿಂದ) ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜಬುಲ್ ಮುಜಾಹಿದೀನ್ ಮುಖಂಡ ಸೈಯದ್ ಸಲಾ ಹುದ್ದೀನ್ ಇವನ ಮಗ ಸೈಯದ್ ಅಹಮದ್ ಶಕೀಲ್ ನ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇವನೂ ಕೂಡ ಭಯೋತ್ಪಾದಕನಾಗಿದ್ದಾನೆ. ಪ್ರಸ್ತುತ ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿರುವ ಪ್ರಕರಣದಲ್ಲಿ ಅವನು ಬಂಧನದಲ್ಲಿದ್ದಾನೆ. ಶ್ರೀನಗರ ಮತ್ತು ಬಡಗಾಮ ಇಲ್ಲಿಯ ಅವನ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಶಕೀಲ್ ಮತ್ತು ಅವನ ಸಹೋದರ ಯೂಸುಫ್ ಇವನು ಈ ಹಿಂದೆ ಸರಕಾರಿ ಸೇವೆಯಲ್ಲಿ ಇದ್ದರು. ೨೦೧೮ ರಲ್ಲಿ ಅವನು ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿರುವುದು ಬಹಿರಂಗವಾಯಿತು. ಅದರ ನಂತರ ಸರಕಾರವು ಇಬ್ಬರನ್ನು ೨೦೨೧ ರಲ್ಲಿ ಅವರನ್ನು ಕೆಲಸದಿಂದ ತೆಗೆದಹಾಲಾಯಿತು. (ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)