ಬಿಹಾರದಲ್ಲಿ ಮುಸ್ಲಿಂ ಬಾಡಿಗೆದಾರರ ಮನೆಯಲ್ಲಿ ಬಾಂಬ್ ಸ್ಫೋಟ

ನವಾದ (ಬಿಹಾರ) – ಏಪ್ರಿಲ್ ೨೪ ರ ರಾತ್ರಿ ಸಫೀಕ್ ಆಲಂ ಅವರ ಮನೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಮನೆಯ ಕೆಲವು ಭಾಗ ಕುಸಿದು ಬಿದ್ದಿದೆ. ಸ್ಫೋಟದ ವೇಳೆ ಮನೆಯಲ್ಲಿದ್ದವರು ಹೊರಗೆ ಮಲಗಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆಲಂ ಈ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದಾನೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬರ ತನಿಖೆ ನಡೆಸಲಾಗುತ್ತಿದೆ.

ಸಂಯುಕ್ತ ಜನತಾ ದಳ ಪಕ್ಷದ ಮುಸ್ಲಿಂ ಮುಖಂಡರಿಂದ ಭಾರೀ ಶಸ್ತ್ರಾಸ್ತ್ರಗಳ ಸಂಗ್ರಹಗಳ ವಶ

ಸಂಯುಕ್ತ ಜನತಾ ಪಕ್ಷದ ಮುಖಂಡ ಮಂಜೂರ್ ಆಲಂ

ಇದಕ್ಕೂ ಮುನ್ನ ಏಪ್ರಿಲ್ ೨೩ ರಂದು ಸಂಯುಕ್ತ ಜನತಾ ಪಕ್ಷದ ಮುಖಂಡ ಮಂಜೂರ್ ಆಲಂ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಬಾಂಬ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಪೊಲೀಸರು ಆಲಂ, ಅವನ ಮಗ ಮತ್ತು ಸೋದರಳಿಯನನ್ನು ಬಂಧಿಸಿದ್ದಾರೆ. ಅವರಿಂದ ೫ ಬಾಂಬ್‌ಗಳು, ೧ ಪಿಸ್ತೂಲ್, ೭ ನಾಡ ಬಾಂಬ್, ೧ ರೈಫಲ್ ಮತ್ತು ಕೆಲವು ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಸಂಪಾದಕೀಯ ನಿಲುವು

ಸಂಯುಕ್ತ ಜನತಾ ದಳ ಪಕ್ಷವನ್ನು ನಿಷೇಧಿಸಲು ಈಗ ಏಕೆ ಒತ್ತಾಯಿಸುತ್ತಿಲ್ಲ ? ರಾಜಕೀಯ ಪಕ್ಷಗಳ ನಾಯಕರಿಗೆ ಶಸ್ತ್ರಾಸ್ತ್ರ ಇಟ್ಟುಕೊಳ್ಳುವ ಅನುಮತಿ ಇದೆಯೇ ?