ದರ್ಶನಕ್ಕಾಗಿ ತೆರೆದ ಕೇದಾರನಾಥ ದೇವಾಲಯ !

ಕೇದಾರನಾಥ ದೇವಾಲಯ

ಕೇದಾರನಾಥ (ಉತ್ತರಾಖಂಡ) – ಕೇದಾರನಾಥ ದೇವಾಲಯವನ್ನು ಏಪ್ರಿಲ್ ೨೫ ರಂದು ಬೆಳಿಗ್ಗೆ ೬.೨೦ ಕ್ಕೆ ತೆರೆಯಲಾಯಿತು. ಚಳಿಗಾಲದಲ್ಲಿ ಈ ದೇವಾಲಯವನ್ನು ಮುಚ್ಚಲಾಗುತ್ತದೆ. ಚಳಿಗಾಲದ ನಂತರ ಅದನ್ನು ಮತ್ತೆ ತೆರೆಯಲಾಗುತ್ತದೆ. ಕಳೆದ ೩ ದಿನಗಳಿಂದ ಇಲ್ಲಿ ಹಿಮ ಸುರಿಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ದೇವಸ್ಥಾನಕ್ಕೆ ತೆರಳುವ ಸಾವಿರಾರು ಭಕ್ತರನ್ನು ಡೆಯಲಾಗಿದೆ. ಇದಾದ ನಂತರವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದರು.