ಈ ಭೇಟಿಯ ಬಳಿಕ 13 ದಿನಗಳ ಬಳಿಕ ಉಮೇಶ ಪಾಲರ ಹತ್ಯೆಯಾಗಿತ್ತು !
ಬರೇಲಿ (ಉತ್ತರಪ್ರದೇಶ) – ಕುಖ್ಯಾತ ಗೂಂಡ ಅತಿಕ ಅಹಮ್ಮದನನ್ನು ಇಲ್ಲಿಯ ಜೈಲಿನಲ್ಲಿ ಭೇಟಿಯಾಗಲು ಬಂದಿದ್ದ ಗೂಂಡಾಗಳೊಂದಿಗೆ ನಡೆದ ಸಭೆಯ ಬಳಿಕ ಉಮೇಶ ಪಾಲನನ್ನು ಪ್ರಯಾಗರಾಜನಲ್ಲಿ ಹತ್ಯೆ ಮಾಡಲಾಗಿರುವ ಮಾಹಿತಿ ಬಹಿರಂಗವಾಗಿದೆ. ಫೆಬ್ರುವರಿ 11, 2023 ರಂದು ಅತಿಕನ ಪುತ್ರ ಅಸದ, ಗುಡ್ಡೂ ಮುಸ್ಲಿಮ್ ಮತ್ತು ಇತರೆ 7 ಜನ ಗೂಂಡಾಗಳು ಅತಿಕನನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದರು. ಇಲ್ಲಿ ಅವರು 2 ಗಂಟೆಗಳ ಕಾಲ ಅತಿಕ ಮತ್ತು ಅವನ ಸಹೋದರ ಅಶ್ರಫ್ ನನ್ನು ಭೇಟಿಯಾದರು. ಈ ಭೇಟಿಯಲ್ಲಿ ಶಾಸಕ ರಾಜೂ ಪಾಲ ಇವರ ಹತ್ಯೆಯ ಪ್ರಕರಣದ ಮುಖ್ಯ ಸಾಕ್ಷೀದಾರ ಉಮೇಶ ಪಾಲ ಇವರ ಹತ್ಯೆ ಮಾಡುವ ಸಂಚು ರಚಿಸಲಾಯಿತು ಮತ್ತು ಫೆಬ್ರುವರಿ 24 ರಂದು ಅವರ ಹತ್ಯೆ ನಡೆಯಿತು ಎಂದು ಪೊಲೀಸಿರಿಗೆ ಮಾಹಿತಿ ಸಿಕ್ಕಿದೆ. ಈ ಎಲ್ಲ 9 ಜನರು ಜೈಲಿನಲ್ಲಿ ಅತಿಕನನ್ನು ಭೇಟಿಯಾಗಲು ಬಂದಿರುವ ಬಗ್ಗೆ ಸಿಸಿಟಿವಿ ಚಿತ್ರಣ (ಫೂಟೇಜ) ಪೊಲೀಸರಿಗೆ ಸಿಕ್ಕಿದೆ. ಈ ಚಿತ್ರಣ ಸಂಗಣಕದ ಸರ್ವರ್ ದಿಂದ ಪೊಲೀಸರು ಪಡೆದುಕೊಂಡಿದ್ದಾರೆ; ಅಂದರೆ ಅದನ್ನು ಯಾರೋ ಅಳಿಸಿ ಹಾಕಿದ್ದರು. (ಜೈಲಿನ ಸಿಸಿವಿಟಿಯ ಚಿತ್ರೀಕರಣವನ್ನು ಯಾರು ಅಳಿಸಿ ಹಾಕಿದ್ದಾರೆ ? ಇದರರ್ಥ ಜೈಲಿನಲ್ಲಿ ನೇಮಿಸಿರುವ ಪೊಲೀಸರು ಗೂಂಡಾಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ – ಸಂಪಾದಕರು) ಹಾಗೆಯೇ `ಜೈಲಿನಲ್ಲಿ ಒಂದೇ ಸಮಯದಲ್ಲಿ ಕೇವಲ 3 ಜನರಿಗೆ ಮತ್ತು ಅದೂ ಕೇವಲ 30 ನಿಮಿಷಗಳ ಕಾಲಾವಧಿಗೆ ಭೇಟಿಯಾಗುವ ನಿಯಮದ ಪ್ರಕಾರ ಅನುಮತಿ ಇರುವಾಗ 9 ಜನರು 2 ಗಂಟೆಗಳ ಕಾಲ ಹೇಗೆ ಭೇಟಿಯಾದರು ?’, ಎನ್ನುವುದನ್ನು ಪೊಲೀಸರು ಹುಡುಕುತ್ತಿದ್ದಾರೆ. ಹಾಗೆಯೇ ಈ ಎಲ್ಲ ಜನರು ಅತಿಕನ ಗುರುತುಪತ್ರದ ಮೂಲಕ ಕಾರಾಗೃಹಕ್ಕೆ ಬಂದಿದ್ದರು. ಅವರು ಬಂದಿರುವ ಬಗ್ಗೆ ಯಾವುದೇ ನೊಂದಣಿಯನ್ನು ಇಡಲಾಗಿರಲಿಲ್ಲ, ಈ 9 ಜನರಲ್ಲಿ 8 ಜನರು ಉಮೇಶ ಪಾಲರ ಹತ್ಯೆಯಲ್ಲಿ ಭಾಗವಹಿಸಿರುವ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ 4 ಜನರನ್ನು ಇಲ್ಲಿಯವರೆಗೆ ನಡೆದ ಘರ್ಷಣೆಯನ್ನು ಹತ್ಯೆ ಮಾಡಲಾಗಿದೆ.
‘Bumbaz’ Guddu Muslim likely in Chhattisgarh, CCTV footage shows he had gone to meet Ashraf with Atiq’s son Asad https://t.co/GGkMY4wPqo
— OpIndia.com (@OpIndia_com) April 24, 2023
ಸಂಪಾದಕರ ನಿಲುವುಭ್ರಷ್ಟ ಪೊಲೀಸರ ಕಾರಣದಿಂದ ಜೈಲೆಂದರೆ ಗೂಂಡಾಗಳ ನೆಲೆಯಾಗಿದೆ. ದೇಶದ ಹೆಚ್ಚಿನ ಜೈಲುಗಳ ಸ್ಥಿತಿ ಇದೇ ಆಗಿದೆ. `ಗೂಂಡಾಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದಾಗ ಮಾತ್ರ ಅವರ ದುಷ್ಕೃತ್ಯಗಳು ನಿಲ್ಲುತ್ತವೆ’, ಎಂದು ಹೇಳಲು ಸಾಧ್ಯವಿಲ್ಲ, ಎನ್ನುವುದು ಇದರಿಂದ ಕಂಡು ಬರುತ್ತಿದೆ. ಈ ವಿಷಯವನ್ನು ಈಗ ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸುವ ಆವಶ್ಯಕತೆಯಿದೆ. |