‘ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಶಾಹೀದ ಅಹಮ್ಮದ ರಹೀಸ ಅಹಮ್ಮದ ಇವನು ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದನು. ಅವನ ವಿರುದ್ಧ ಬೆಂಗಳೂರು ಪೊಲೀಸ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾನೂನು, ವಿದೇಶಗಳಿಗೆ ಸಂಬಂಧಿಸಿದ ಕಾನೂನುಗಳು, ಪಾಸಪೋರ್ಟ ಕಾನೂನು ಇವೆಲ್ಲ ಕಾನೂನುಗಳ ಉಲ್ಲಂಘನೆ ಹಾಗೂ ಬಾಂಗ್ಲಾದೇಶದಿಂದ ಭಾರತದೊಳಗೆ ಅನಧಿಕೃತವಾಗಿ ಪ್ರವೇಶಿಸಿ ೨೦ ವರ್ಷಗಳಿಂದ ಭಾರತದಲ್ಲಿ ವಾಸ್ತವ್ಯ ಮುಂತಾದ ವಿವಿಧ ಅಪರಾಧಗಳನ್ನು ದಾಖಲಿಸಲಾಗಿತ್ತು. ಈ ಕಾರಣಗಳಿಂದ ಸತ್ರ ನ್ಯಾಯಾಲಯವು ಅವನ ಜಾಮೀನು ಅರ್ಜಿಯನ್ನು ವಜಾ ಗೊಳಿಸಿತು. ಈ ಪ್ರಕರಣದಲ್ಲಿ ಆರೋಪಪತ್ರ ದಾಖಲಾಗಿತ್ತು. ಈ ಕಾರಣದಿಂದ ಶಾಹೀದ ಜಾಮೀನು ಪಡೆಯಲು ಬೆಂಗಳೂರು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದನು. ಅಲ್ಲಿ ಅವನ ಪರವಾಗಿವಾದಿಸಿದ ನ್ಯಾಯವಾದಿಗಳು ‘ಈಗ ಅವನ ತನಿಖೆ ಮುಗಿದಿದ್ದು, ಅವನನ್ನು ಬಂಧನದಲ್ಲಿಡುವ ಆವಶ್ಯಕತೆಯಿಲ್ಲ ಎಂದು ಹೇಳಿದರು ಮತ್ತು ಜಾಮೀನು ಮಂಜೂರು ಮಾಡುವಂತೆ ಕೋರಿದರು.
೧. ಶಾಹೀದನ ಜಾಮೀನು ಅರ್ಜಿಗೆ ಸರಕಾರದ ತೀವ್ರ ವಿರೋಧ
ಈ ಜಾಮೀನು ಅರ್ಜಿಯನ್ನು ಸರಕಾರ ತೀವ್ರವಾಗಿ ವಿರೋಧಿಸಿತು. ಸರಕಾರವು ‘ಶಾಹೀದ ನಕಲಿ ಕಾಗದಪತ್ರಗಳನ್ನು ತಯಾರಿಸಿದ್ದಾನೆ. ಅವನು ‘ಉತ್ತರಪ್ರದೇಶದ ನಿವಾಸಿಯಾಗಿದ್ದಾನೆ, ಎಂದು ತೋರಿಸಿ ಚುನಾವಣಾ ಗುರುತುಪತ್ರ, ಪಾಸಪೋರ್ಟ, ವಿವಿಧ ಬ್ಯಾಂಕುಗಳಲ್ಲಿ ಖಾತೆಗಳನ್ನು ತಯಾರಿಸಿಕೊಂಡಿದ್ದಾನೆ ಮತ್ತು ಅವನು ಅನಧಿಕೃತವಾಗಿ ಭಾರತದಲ್ಲಿ ವಾಸಿಸುತ್ತಿದ್ದಾನೆ. ಈ ವ್ಯಕ್ತಿಯನ್ನು ಬಿಟ್ಟು ಉಳಿದ ಆರೋಪಿಗಳು ಓಡಿ ಹೋಗಿದ್ದಾರೆ. ಆದುದರಿಂದ ಅವನಿಗೆ ಜಾಮೀನು ಕೊಡಬಾರದು. ಜಾಮೀನು ಸಿಕ್ಕರೆ ಅವನು ಪೊಲೀಸರಿಗೆ ಸಹಕರಿಸುವುದಿಲ್ಲ ಎಂದಿತು.
೨. ಜಾಮೀನು ನಿರಾಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ
ಮಾನ್ಯ ಉಚ್ಚ ನ್ಯಾಯಾಲಯವು ಎಲ್ಲ ಕಾಗದಪತ್ರಗಳ ಮತ್ತು ಪ್ರತಿವಾದಿಗಳ ಯುಕ್ತಿವಾದಗಳ ವಿಚಾರ ಮಾಡಿತು. ಅನಂತರ ‘ಅನಧಿಕೃತವಾಗಿ ಭಾರತದೊಳಗೆ ಪ್ರವೇಶಿಸಿ ೨ ದಶಕಗಳವರೆಗೆ ವಾಸಿಸುವುದು, ಭಾರತದ ಭದ್ರತೆಗೆ ಅಪಾಯಕಾರಿಯಾಗಿದೆ. ಇಷ್ಟು ಗಂಭೀರ ಅಪರಾಧಗಳಿರುವ ವ್ಯಕ್ತಿಗೆ ಜಾಮೀನು ನೀಡಿದರೆತಪ್ಪಾಗುತ್ತದೆ ಎಂದು ಉಚ್ಚ ನ್ಯಾಯಾಲಯವೂ ಅವನಿಗೆ ಜಾಮೀನು ನಿರಾಕರಿಸಿತು. ಮುಸಲ್ಮಾನರ ಪರವಾಗಿರುವ ರಾಜಕೀಯ ಪಕ್ಷಗಳು, ಆಡಳಿತಗಾರರು ಮತ್ತು ಪೊಲೀಸರು ದೇಶವನ್ನು ಧರ್ಮಶಾಲೆಯನ್ನಾಗಿಸಿದ್ದಾರೆ. ಇಲ್ಲಿ ಯಾರು ಬೇಕಾದರೂ ನುಸುಳಿ ಅನಧಿಕೃತವಾಗಿ ವಾಸ್ತವ್ಯ ಮಾಡಬಹುದು, ಗಂಭೀರ ತಪ್ಪುಗಳನ್ನು ಮಾಡಬಹುದು. ಅವನನ್ನು ಬಂಧಿಸಿ ಆರೋಪಪತ್ರವನ್ನು ದಾಖಲಿಸಿದ ಕೂಡಲೇ, ಅವನು ಜಾಮೀನಿಗಾಗಿ ತಕ್ಷಣವೇ ಅರ್ಜಿ ದಾಖಲಿಸುತ್ತಾನೆ. ಸುದೈವದಿಂದ ನ್ಯಾಯಾಲಯಕ್ಕೆ ಈ ಎಲ್ಲ ರೀತಿಯ ಸಂಚುಗಳ ಸುಳಿವು ಸಿಕ್ಕಿದೆ, ಹಾಗಾಗಿ ಇಂತಹ ವ್ಯಕ್ತಿಗೆ ಜಾಮೀನು ನಿರಾಕರಿಸಿದೆ.
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬೈ ಉಚ್ಚ ನ್ಯಾಯಾಲಯ (೯.೨.೨೦೨೩)