ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷರ ವಿರುದ್ಧ ಮತ್ತೊಮ್ಮೆ ಕುಸ್ತಿಪಟುಗಳ ಆಂದೋಲನ

ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಇತರರು ಪ್ರತಿಭಟನೆ ನಡೆಸಿದರು.

ನವ ದೆಹಲಿ – ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪ ಸಂಸದ ಬೃಜಭೂಷಣ ಶರಣ ಸಿಂಹ ಇವರ ವಿರುದ್ಧ ಭಾರತೀಯ ಕುಸ್ತಿಪಟುಗಳು ಇಲ್ಲಿಯ ಜಂತರ ಮಂತರದಲ್ಲಿ ಏಪ್ರಿಲ್ ೨೩ ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಎಲ್ಲಾ ಕುಸ್ತಿಪಟುಗಳು ರಾತ್ರಿ ಇಲ್ಲಿಯ ಫೂಟಪಾತ ಮೇಲೆ ಮಲಗಿದ್ದರು. ಈ ಕುಸ್ತಿಪಟುಗಳಲ್ಲಿ ವಿನೇಶ ಫೋಗಾಟ, ಭಜರಂಗ ಪುನಿಯಾ, ಸಾಕ್ಷಿ ಮಲೀಕ್ ಮುಂತಾದವರ ಸಮಾವೇಶವಿದೆ. ಇನ್ನೊಂದು ಕಡೆಗೆ ದೆಹಲಿ ಪೊಲೀಸರು ಸಂಸದ ಬೃಜಭೂಷಣ ಇವರ ಮೇಲಿನ ಆರೋಪದ ವಿಚಾರಣೆ ಆರಂಭಿಸಿದೆ. ಬೃಜಭೂಷಣ ಇವರ ಮೇಲೆ ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆ ಮತ್ತು ಕಿರುಕುಳ ನೀಡಿರುವ ಆರೋಪವಿದೆ. ಜನವರಿ ತಿಂಗಳಲ್ಲಿ ಕೂಡ ಈ ಕುಸ್ತಿಪಟುಗಳಿಂದ ಇಲ್ಲಿ ಆಂದೋಲನ ನಡೆದಿತ್ತು, ಆಗ ಸಮಿತಿ ಸ್ಥಾಪನೆ ಮಾಡಿ ವಿಚಾರಣೆ ನಡೆಸಲಾಗುವುದು, ಎಂದು ಕೇಂದ್ರ ಸರಕಾರದಿಂದ ಆಶ್ವಾಸನೆ ನೀಡಲಾಗಿತ್ತು. ಅದರ ನಂತರ ತನಿಖಾ ಸಮಿತಿ ಕೂಡ ಸ್ಥಾಪಿಸಲಾಯಿತು. ಆದರೆ ಇಲ್ಲಿಯವರೆಗೆ ಸಮಿತಿಯ ವರದಿ ಬಂದಿಲ್ಲ. ಆದ್ದರಿಂದ ಕ್ರಮ ಕೂಡ ಕೈಗೊಂಡಿಲ್ಲ. ಆದ್ದರಿಂದ ಕುಸ್ತಿಪಟುಗಳು ಮತ್ತೊಮ್ಮೆ ಆಂದೋಲನ ಆರಂಭಿಸಿದ್ದಾರೆ.

ಸಂಪಾದಕರ ನಿಲುವು

ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವ ಕುಸ್ತಿಪಟುಗಳಿಗೆ ನ್ಯಾಯಕ್ಕಾಗಿ ಮತ್ತೆ ಮತ್ತೆ ಆಂದೋಲನ ನಡೆಸಬೇಕಾಗುತ್ತದೆ, ಇದು ದುರದೃಷ್ಟಕರವೇ ಆಗಿದೆ. ಕೇಂದ್ರ ಸರಕಾರ ಗಮನಹರಿಸಿ ಸತ್ಯ ಬಹಿರಂಗಪಡಿಸುವುದು ಅವಶ್ಯಕ !