|
ಉತ್ತರ ದಿನಾಜಪುರ (ಬಂಗಾಳ) – ಇಲ್ಲಿಯ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲತ್ಕಾರದ ನಂತರ ಆಕೆಯ ಹತ್ಯೆ ಆಗಿರುವ ಘಟನೆಯ ನಂತರ ಇಲ್ಲಿ ಹಿಂಸಾಚಾರ ನಡೆಯಿತು. ಅತ್ಯಾಚಾರಕ್ಕೊಳಗಾದ ಹುಡುಗಿಯ ಶವವನ್ನು ಕೊಂಡೊಯ್ಯುವಾಗ ಗ್ರಾಮಸ್ಥರು ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿದರು. ಆ ಸಮಯದಲ್ಲಿ ಪೊಲೀಸರು ಲಾಟಿಚಾರ್ಜ್ ಮತ್ತು ಅಶ್ರು ವಾಯುವಿನ ಪ್ರಯೋಗ ಮಾಡಿದರು. ಪೊಲೀಸರಿಂದ ಸಂತ್ರಸ್ತೆಯ ಶವವನ್ನು ಎಳೆದುಕೊಂಡು ಹೋಗುವ ವಿಡಿಯೋ ಎಪ್ರಿಲ್ ೨೨ ರಂದು ಪ್ರಸಾರವಾಗಿದೆ. ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖ ಅಮಿತ್ ಮಾಲವೀಯ ಇವರು ಈ ವಿಡಿಯೋ ಟ್ವೀಟ್ ಮಾಡಿದ್ದರು. ಪೊಲೀಸರ ಅಭಿಪ್ರಾಯದ ಪ್ರಕಾರ ಆಕೆಯು ವಿಷ ಕುಡಿದಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ಶವ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಪೊಲೀಸರು ಜಾವೇದ ಎಂಬ ಯುವಕನನ್ನು ಬಂಧಿಸಿದ್ದಾರೆ. ಯುವತಿ ಮತ್ತು ಆರೋಪಿ ಒಬ್ಬರಿಗೊಬ್ಬರು ಪರಿಚಿತರಿದ್ದರು. ಭಾಜಪದ ಸ್ಥಳೀಯ ಶಾಸಕ ದೇಬಶ್ರೀ ಚೌದರಿ ಇವರು ಈ ಘಟನೆಯನ್ನು ಸಿಬಿಐ ನಿಂದ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಇನ್ನೊಂದು ಕಡೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವೆ ಡಾ. ಶಶಿ ಪಂಜಾ ಇವರು, ಭಾಜಪದ ಮುಖಂಡರು ಜನರನ್ನು ದಾರಿ ತಪ್ಪಿಸಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
#Bengal Shocker: Video of police dragging rape victim`s body surfaces; #BJP slams #MamataBanerjee@KamalikaSengupt shares details | @Arunima24 pic.twitter.com/Odu8VSj0Rx
— News18 (@CNNnews18) April 22, 2023
೧. ಪೊಲೀಸರ ಅಭಿಪ್ರಾಯದ ಪ್ರಕಾರ, ಈ ಹುದುಡಿ ನಾಪತ್ತೆಯಾಗಿದ್ದಳು; ಆದರೆ ಆಕೆಯ ಕುಟುಂಬದವರು ಇದರ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಅದರ ನಂತರ ಈ ಹುಡುಗಿಯ ಶವ ಕಾಲುವೆಯಲ್ಲಿ ದೊರೆತಿದೆ. ಯಾವಾಗ ಪೊಲೀಸರು ಮೃತ ದೇಹ ಪಡೆಯಲು ಹೋದರೋ ಆಗ ಅವರ ಮೇಲೆ ಜನರು ಕಲ್ಲು ತೂರಾಟ ನಡೆಸಿದರು ಎಂದು ಹೇಳಿದರು.
೨. ಬಂಗಾಲದಲ್ಲಿನ ಭಾಜಪದ ಮುಖಂಡ ಮತ್ತು ವಿರೋಧಿ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು, ನಮಗೆ ಸಂತ್ರಸ್ತ ಹುಡುಗಿಯ ಕುಟುಂಬದವರಿಗೆ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ನಮ್ಮನ್ನು ಪೊಲೀಸ ಠಾಣೆಯಲ್ಲಿ ಕೂಡಿಸಿದ್ದರು.
ಸರಕಾರದಿಂದ ಯಾವುದೇ ಉತ್ತರ ದೊರೆತಿಲ್ಲ ! – ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನುಗೊಈ ಸಂದರ್ಭದಲ್ಲಿ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನುಗೊ ಇವರು, ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ನಂತರ ಆಕೆಯ ಹತ್ಯೆ ಮಾಡಲಾಗಿದೆ. ಪೊಲೀಸರು ಸಂತ್ರಸ್ತೇಯ ಶವದ ಅವಮಾನ ಮಾಡಿದ್ದಾರೆ. ರಾಜ್ಯ ಸರಕಾರಕ್ಕೆ ಈ ಕುರಿತು ತಿಳಿಸಿದ ನಂತರ ಸರಕಾರದಿಂದ ಯಾವುದೇ ಉತ್ತರ ನೀಡಲಾಗಿಲ್ಲ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದರು. |
ಸಂಪಾದಕರ ನಿಲುವು
|