ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದಲ್ಲಿ ಈದ್ ನ ನಮಾಜ್ ನಡೆಯುತ್ತಿದೆ; ಆದರೆ ರಾಜ್ಯದಲ್ಲಿ ಎಲ್ಲಿಯೂ ರಸ್ತೆ ಬಂದ್ ಮಾಡಿ ನಮಾಜ ಮಾಡಿಲ್ಲ. ಸಾರಿಗೆ ಸಂಪರ್ಕ ನಿಲ್ಲಿಸಲಿಲ್ಲ. ಇದಕ್ಕೆ ಕಾರಣ ರಾಜ್ಯದಲ್ಲಿ ಕಾನೂನಿನ ರಾಜ್ಯವಿದೆ ಮತ್ತು ಅದು ಎಲ್ಲರಿಗೂ ಸಮಾನವಾಗಿದೆ, ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಎಪ್ರಿಲ್ 22 ರಂದು ಒಂದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ಎಪ್ರಿಲ್ 22 ರಂದು ರಮಝಾನ್ ಈದ್ ಇತ್ತು. ಯಾವಾಗಲೂ ದೇಶದಲ್ಲಿ ಸಾವಿರಾರು ಸ್ಥಳಗಳಲ್ಲಿ ಈದ್ ಮತ್ತು ಶುಕ್ರವಾರದ ಮಧ್ಯಾಹ್ನದ ನಮಾಜ ಸಮಯದಲ್ಲಿ ರಸ್ತೆಯನ್ನು ಬಂದ್ ಮಾಡಿ ನಮಾಜ ಮಾಡಲಾಗುತ್ತಿದೆ; ಆದರೆ ಉತ್ತರಪ್ರದೇಶದಲ್ಲಿ ಎಪ್ರಿಲ್ 22 ರಂದು ಈ ರೀತಿ ಎಲ್ಲಿಯೂ ಆಗಿಲ್ಲ.
ಒಬ್ಬ ಹಿರಿಯ ಪೊಲೀಸ ಅಧಿಕಾರಿಯು, ರಾಜ್ಯದ 31 ಸಾವಿರ 838 ಸ್ಥಳಗಳಲ್ಲಿ ಶಾಂತಿಯುತವಾಗಿ ಈದ್ ನಮಾಜ ನಡೆದಿದೆ. ಈ ಕುರಿತು ಕೈಕೊಳ್ಳಲಾಗಿದ್ದ ಸೂಕ್ತ ನಿಯೋಜನೆ ಮತ್ತು ಪ್ರಯತ್ನಗಳಿಂದಲೇ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಈಗ ಪ್ರತಿಯೊಂದು ಹಬ್ಬವನ್ನೂ ಉತ್ಸವಗಳಂತೆ ಆಚರಿಸಲಾಗುತ್ತಿದೆ !
(ಸೌಜನ್ಯ : Republic Bharat)
ಯೋಗಿ ಆದಿತ್ಯನಾಥರು ಮಾತನಾಡುತ್ತಾ, ಆಝಮಗಡ ಜಿಲ್ಲೆಯ ಹೆಸರನ್ನು ಕೇಳಿದರೂ ಜನರು ಹೆದರುತ್ತಿದ್ದರು. ಇಂದು ಅಲ್ಲಿ ಎಕ್ಸಪ್ರೆಸ್ ವೇ ಹೆದ್ದಾರೆ ನಿರ್ಮಾಣವಾಗಿದೆ. ಅಲ್ಲಿ ವಿಮಾನನಿಲ್ದಾಣ ಮತ್ತು ವಿಶ್ವವಿದ್ಯಾಲಯವನ್ನೂ ನಿರ್ಮಾಣ ಮಾಡಲಾಗುತ್ತಿದೆ. ಈಗ ಯಾರೂ ಆಝಮಗಡ ಬಗ್ಗೆ ಹೆದರುವುದಿಲ್ಲ. ಹೆದರಿಕೆಯು ಉತ್ಸವದಲ್ಲಿ ಬದಲಾಗಿದೆ. ಅಯೋಧ್ಯೆಯಲ್ಲಿ ದೀಪೋತ್ಸವದ ಆಚರಣೆಯಾಗುತ್ತಿದೆ. ಕಾಶಿಯಲ್ಲಿ ದೇವದೀಪಾವಳಿ ಆಚರಿಸಲಾಗುತ್ತಿದೆ. ಪ್ರಯಾಗರಾಜ ಕುಂಭ ಮೇಳ ಮತ್ತು ಮಾಘ ಮೇಳಕ್ಕಾಗಿ ಗುರುತಿಸಲ್ಪಡುತ್ತದೆ. ವೃಂದಾವನವು ರಂಗೋತ್ಸವಕ್ಕಾಗಿ ಗುರುತಿಸಲ್ಪಡುತ್ತಿದೆ. ರಾಜ್ಯದಲ್ಲಿ ಈಗ ಪ್ರತಿಯೊಂದು ಹಬ್ಬವನ್ನೂ ಉತ್ಸವದಂತೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಒಂದು ವೇಳೆ ಇದು ಉತ್ತರಪ್ರದೇಶದಲ್ಲಿ ಸಾಧ್ಯವಾಗುವುದಾದರೆ, ಸಂಪೂರ್ಣ ದೇಶದಲ್ಲಿ ಏಕೆ ಸಾಧ್ಯವಿಲ್ಲ ? ಹೀಗೆ ಮಾಡಲು ಇತರೆ ರಾಜ್ಯಗಳಿಗೆ ಏನು ಅಡಚಣೆಯಿದೆ ? ಅಥವಾ ಎಲ್ಲೆಡೆ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿಗಳು ಬಂದಾಗಲೇ ಸಾಧ್ಯವಾಗುವುದೇ ? |