ಬೆಂಗಳೂರು : ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಚುನಾವಣೆ ಮುಗಿಯುವ ಮುನ್ನವೇ ಅಲ್ಪಸಂಖ್ಯಾತರ ಪರ ಘೋಷಣೆಗಳನ್ನು ಮಾಡುತ್ತಿದ್ದಾರೆ. ನಾನು ಇನ್ನೊಮ್ಮೆ ಮುಖ್ಯಮಂತ್ರಿಯಾದರೆ ಮುಸ್ಲಿಮರಿಗೆ ಶೇ ೪% ರಷ್ಟು ಮೀಸಲಾತಿ ನೀಡುತ್ತೇನೆ ಹಾಗೂ ರಾಜ್ಯದಲ್ಲಿ ಅಮುಲ್ ಹಾಲು ಖರೀದಿ ಮಾಡದಂತೆ ರಾಜ್ಯದ ಜನತೆಗೆ ಆದೇಶ ನೀಡುತ್ತೇನೆ ಎಂದು ಮಾಧ್ಯಮದವರ ಜೊತೆ ಮಾತನಾಡುತ್ತ ಅವರು ಹೇಳಿದರು. ಅಮುಲ್ ಸಂಸ್ಥೆಯು ರಾಜ್ಯಕ್ಕೆ ಪ್ರವೇಶಿಸುವುದರಿಂದ ನಂದಿನಿ ಹಾಲು ಉತ್ಪನ್ನಗಳಿಗೆ ಮತ್ತು ಅದನ್ನು ಆಧರಿಸಿದ ನಮ್ಮ ರೈತರಿಗೆ ತೊಂದರೆಯಾಗುತ್ತಿದೆ ಎಂದು ಸಿದ್ದು ನುಡಿದರು. ಮುಸ್ಲಿಮರಿಗೆ ಸಿಗಬೇಕಾಗಿದ್ದ ಮೀಸಲಾತಿಯನ್ನು ಬಿಜೆಪಿ ಸರ್ಕಾರವು ರದ್ದುಗೊಳಿಸಿ ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ನೀಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಂಪಾದಕೀಯ ನಿಲುವು
|