ಪುಂಛ (ಜಮ್ಮು-ಕಾಶ್ಮೀರ) – ಇಲ್ಲಿ ಭಯೋತ್ಪಾದಕರು ಸೈನ್ಯದ ಟ್ರಕ್ ಮೇಲೆ ನಡೆಸಿದ ಗ್ರನೇಟ್ ದಾಳಿಯಿಂದಾಗಿ ೫ ಸೈನಿಕರು ವೀರಮರಣವನ್ನು ಹೊಂದಿದ್ದರಿಂದ ಸ್ಥಳೀಯ ಮುಸಲ್ಮಾನರು ಈದ್ ಹಬ್ಬ ಆಚರಿಸಲಿಲ್ಲ. ಈ ಟ್ರಕ್ ಮುಸಲ್ಮಾನರ ಇಫ್ತಾರ ಔತಣಕೂಟದ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ರಾಷ್ಟ್ರೀಯ ರೈಫಲ್ಸನ ಪಥಕದಿಂದ ಈ ಔತಣಕೂಟ ಆಯೋಜಿಸಿತ್ತು. ಇದರಲ್ಲಿ ೪ ಸಾವಿರದಷ್ಟು ಜನರು ಸಹಭಾಗಿ ಆಗುವವರಿದ್ದರು.
ಇಲ್ಲಿಯ ಸಂಗೀಓತ ಗ್ರಾಮದ ಸರಪಂಚ ಮುಖತಿಯಾಜ್ ಖಾನ್ ಇವರು, ನಮ್ಮ ೫ ಸೈನಿಕರು ವೀರ ಮರಣವನ್ನು ಹೊಂದಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ನಾವು ಔತಣಕೂಟ ಹೇಗೆ ಆಚರಿಸಲು ಸಾಧ್ಯ ? ಈ ವಾರ್ತೆ ತಿಳಿಯುತ್ತಲೇ ಗ್ರಾಮದಲ್ಲಿ ದುಃಖ ಪಸರಿಸಿದ. ನಾವು ಕೂಡ ಅಲ್ಲಿ ಹೋಗುವವರಿದ್ದೆವು; ಆದರೆ ಪೊಲೀಸರು ಮತ್ತು ಸೈನ್ಯದವರು ಪ್ರದೇಶವನ್ನು ಸುತ್ತುವರೆದಿದ್ದರು. ನಾವು ಈಗ ಈದ್ ಹಬ್ಬ ಆಚರಿಸುವುದಿಲ್ಲ ; ಕೇವಲ ನಮಾಜ ಮಾಡುವೆವು ಎಂದು ಹೇಳಿದರು.
No #Eid celebrations in #Poonch after deadly terror attack, village in mourninghttps://t.co/cUrKivVCpd
— The Times Of India (@timesofindia) April 22, 2023
(ಸೌಜನ್ಯ : Republic World)
ಸಂಪಾದಕರ ನಿಲುವುದೇಶದಲ್ಲಿನ ಎಷ್ಟು ಮುಸಲ್ಮಾನರು ಈ ರೀತಿ ಯೋಚಿಸುತ್ತಾರೆ ? ಕಾಶ್ಮೀರದ ಈ ಮುಸಲ್ಮಾನರಿಂದ ಬೇರೆ ಕಡೆ ಇರುವ ಮುಸಲ್ಮಾನರು ಏನಾದರೂ ಕಲಿಯಬಹುದೇ ?, ಎಂದು ಯಾರಾದರೂ ಪ್ರಶ್ನೆ ಕೇಳಿದರೆ ಅದರಲ್ಲಿ ಆಶ್ಚರ್ಯ ಏನೂ ಇಲ್ಲ ! |