|
ತಿರುಪತಿ (ಆಂಧ್ರಪ್ರದೇಶ) – ತಿರುಮಲಾ ತಿರುಪತಿ ದೇವಸ್ಥಾನದ ದರ್ಶನ ತಿಕೀಟುಗಳಲ್ಲಿ ಹಗರಣ ನಡೆದಿರುವುದು ಇತ್ತೀಚೆಗಷ್ಟೇ ಬಹಿರಂಗವಾಗಿದೆ. ಇದೇರೀತಿ `ಆಂಧ್ರಪ್ರದೇಶ ಯುನೈಟೆಡ್ ಟೀಚರ್ಸ ಫೆಡರೇಶನ’ ಅಧ್ಯಕ್ಷ ಮತ್ತು ವಿಧಾನಪರಿಷತ್ತಿನ ಶಾಸಕ ಶೇಖ ಸಾಬಜಿಯ ಹೆಸರು ಕೇಳಿಬಂದಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ, `ಶ್ರೀವರಿ’ ದರ್ಶನ ತಿಕೀಟುಗಳ ಕಾಳಸಂತೆಯಲ್ಲಿ ಒಬ್ಬ ಜನಪ್ರತಿನಿಧಿಯ ಹೆಸರು ಬಹಿರಂಗವಾಗಿರುವುದು ಕೆಲವು ಸಮಯದಲ್ಲಿ ಇದೇ ಮೊದಲನೇ ಬಾರಿಯಾಗಿದೆ.
Andhra Pradesh MLC Shaik Sabji ‘involved’ in Tirumala tickets’ racket; booked https://t.co/R5UuoQ5THt
— TOI Cities (@TOICitiesNews) April 21, 2023
1. ದೇವಸ್ಥಾನದ ಭದ್ರತಾ ವಿಭಾಗ ನೀಡಿರುವ ಮಾಹಿತಿಯನುಸಾರ 6 ಜನ ಭಕ್ತರಿಗೆ ದರ್ಶನಕ್ಕಾಗಿ ಶಾಸಕ ಸಾಬಜಿ ಪ್ರತಿಯೊಬ್ಬರಿಂದ 500 ರೂಪಾಯಿಗಳ ಬದಲಾಗಿ 1 ಲಕ್ಷ ರೂಪಾಯಿಗಳನ್ನು ವಸೂಲು ಮಾಡಿದ್ದನು.
2. ಈ ರೀತಿ ವಸೂಲು ಮಾಡಿದ ಹಣವನ್ನು ಶಾಸಕ ಸಾಬಜಿ ತನ್ನ ಡ್ರೈವರ್ ನ ಬ್ಯಾಂಕ ಖಾತೆಗೆ ಜಮಾ ಮಾಡಿರುವುದಾಗಿ ವಿಜಿಲೆನ್ಸ್ ಇಲಾಖೆ ಆರೋಪ ಮಾಡಿದೆ.
3. ಎಪ್ರಿಲ್ 21 ರಂದು ಬೆಳಿಗ್ಗೆ ಶಾಸಕ ಸಾಬಜಿ ಮತ್ತು ಭಕ್ತರು ದರ್ಶನಕ್ಕಾಗಿ ದೇವಸ್ಥಾನಕ್ಕೆ ಹಾಜರಾದಾಗ, ದೇವಸ್ಥಾನದ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಎಲ್ಲ 6 ಭಕ್ತರ ಆಧಾರಕಾರ್ಡ ನಕಲಿಯಾಗಿರುವುದು ಕಂಡು ಬಂದಿತು. ಆಧಾರಕಾರ್ಡ ಮೇಲೆ ಭಾಗ್ಯನಗರ (ಹೈದರಾಬಾದ) ನಿವಾಸಸ್ಥಾನದ ವಿಳಾಸವಿತ್ತು. ಪ್ರತ್ಯಕ್ಷದಲ್ಲಿ ಆ ಎಲ್ಲ ಭಕ್ತರು ಕರ್ನಾಟಕದವರಾಗಿದ್ದರು.
4. ವಿಜಿಲೆನ್ಸ್ ಇಲಾಖೆಯು ನೀಡಿರುವ ಮಾಹಿತಿಯನುಸಾರ ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡಿದ್ದು, ಶಾಸಕ ಸಾಬಜಿಯನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ದೇವಸ್ಥಾನಗಳ ದರ್ಶನ ತಿಕೀಟುಗಳಲ್ಲಿ ಹಗರಣ ನಡೆಸಿ ಹಣ ಸುಲಿಗೆ ಮಾಡುವ ಮುಸಲ್ಮಾನ ಶಾಸಕ ! ಹಿಂದೂಗಳ ದೇವಸ್ಥಾನಗಳು ಇಂತಹ ಭ್ರಷ್ಟ ಶಾಸಕರಿಗೆ ಹಗರಣಗಳನ್ನು ನಡೆಸಲು ಮಾಧ್ಯಮಗಳು ಎಂದೆನಿಸುತ್ತದೆ, ಇದು ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವೇ ಆಗಿದೆ ! ಆಂಧ್ರಪ್ರದೇಶದಲ್ಲಿ ಹಿಂದೂದ್ವೇಷಿ ವೈ.ಎಸ್.ಆರ್. ಕಾಂಗ್ರೆಸ್ಸಿನ ಆಡಳಿತ ಇರುವುದರಿಂದ ಇಂತಹ ಪ್ರಕರಣಗಳು ನಿಲ್ಲಬಹುದು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. |