ಕಾರಸೇವಕರನ್ನು ಸುಟ್ಟ ೮ ಅಪರಾಧಿಗಳಿಗೆ ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು

೨೦೦೨ ರ ಗುಜರಾತ್ ಗಲಭೆಯ ಪ್ರಕರಣ

ಗಲ್ಲು ಶಿಕ್ಷೆಗೆ ಗುರಿಯಾದವರಿಗೂ ಜಾಮೀನು !

ನವ ದೆಹಲಿ – ೨೦೦೨ ರ ಗುಜರಾತ್ ಗಲಭೆಯ ಆರಂಭವು ಸಾಬರಮತಿ ಎಕ್ಸ್‌ಪ್ರೆಸ್ ಕೋಚ್‌ಗೆ ಬೆಂಕಿ ಹಚ್ಚಿ ಕಾರಸೇವಕರನ್ನು ಜೀವಂತವಾಗಿ ಸುಡುವುದರೊಂದಿಗೆ ಆಯಿತು. ಆ ಘಟನೆಯಲ್ಲಿ ತಪ್ಪಿತಸ್ಥರಾದ ೮ ಮತಾಂಧ ಮುಸ್ಲಿಮರನ್ನು ಸವರ್ವೋಚ್ಚ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಅವರಲ್ಲಿ ಕೆಲವರು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು, ಕೆಲವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಈ ಅಪರಾಧಿಗಳು ೧೭ ರಿಂದ ೨೦ ವರ್ಷಗಳವರೆಗೆ ಶಿಕ್ಷೆಯನ್ನು ಅನುಭವಿಸಿದ್ದಾರೆ. ೪ ಅಪರಾಧಿಗಳ ಅಜರ್ಜಿಯನ್ನು ಸವರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

೧. ಗುಜರಾತ್ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಾರ್ಚ್ ೨೦೧೧ ರಲ್ಲಿ ೧೧ ಅಪರಾಧಿಗಳಿಗೆ ಗಲ್ಲುಶಿಕ್ಷೆ ಮತ್ತು ೨೦ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇತರ ೬೩ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು.

೨. ಗಲ್ಲು ಶಿಕ್ಷೆಯ ವಿರುದ್ಧ ಗುಜರಾತ್ ಹೈಕೋರ್ಟ್‌ನಲ್ಲಿ ಸವಾಲು ಹಾಕಲಾಗಿತ್ತು. ೨೦೧೭ ರಲ್ಲಿ ಹೈಕೋರ್ಟ್ ೧೧ ಮಂದಿಯ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಗಿತ್ತು. ಹೀಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವರ ಸಂಖ್ಯೆ ೩೧ ಆಯಿತು. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಗೆ ಜಾಮೀನು ಕೋರಿ ೨೦೧೮ ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯವು ಜಾಮೀನು ನೀಡಿ ತೀರ್ಪು ನೀಡಿದೆ.

ಜಾಮೀನಿನ ಮಾನದಂಡ

೧೭ ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ಜೀವಾವಧಿ ಅಪರಾಧಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ ಮತ್ತು ಅವರ ನಡವಳಿಕೆಯಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಹಾಗೂ ಪ್ರಕರಣದಲ್ಲಿ ಸಲ್ಲಿಸಲಾದ ಅರ್ಜಿಗಳ ಆರಂಭಿಕ ವಿಚಾರಣೆಗೆ ಯಾವುದೇ ಸಾಧ್ಯತೆಯಿಲ್ಲದ್ದರಿಂದ ಅವರಿಗೆ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸಲಾಗಿದೆ.