ರಾಹುಲ್ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯದಿಂದ ತಿರಸ್ಕಾರ

ಮೋದಿ ಉಪಮಾನದ ಮಾಡಿದ್ದರಿಂದ ೨ ವರ್ಷ ಜೈಲು ಶಿಕ್ಷೆಯ ಪ್ರಕರಣ

ಸೂರತ್ (ಗುಜರಾತ್) – ಮೋದಿ ಎಂಬ ಉಪನಾಮದ ಅವಮಾನ ಮಾಡಿದ್ದಕ್ಕಾಗಿ ಇಲ್ಲಿನ ಸೆಷನ್ಸ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇತ್ತಿಚೆಗೆ ೨ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಅದರ ವಿರುದ್ಧದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯವು ಏಪ್ರಿಲ್ ೨೦ ರಂದು ತಿರಸ್ಕರಿಸಿದೆ. ಈಗ ರಾಹುಲ್ ಗಾಂಧಿಯವರು ಇದರ ವಿರುದ್ಧ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.