ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಾಫಿ ಬೆಳ್ಳಾರೆ ಜೈಲಿನಲ್ಲಿದ್ದೇ ನಾಮಪತ್ರ

ಶಾಫಿ ಬೆಳ್ಳಾರೆ

ಮಂಗಳೂರು – ಭಾಜಪ ನಾಯಕ ಪ್ರವೀಣ್ ನೆಟ್ಟಾರು ಇವರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಂಧಿಸಿದ್ದ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಇವರು ಪುತ್ತೂರು ವಿಧಾಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಶಾಫಿ ಬೆಳ್ಳಾರೆ ಪರವಾಗಿ ಪುತ್ತೂರು ಎಸ್‌ಡಿಪಿಐ ಘಟಕವು ಪುತ್ತೂರು ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ‌ ಆರೋಪದಲ್ಲಿ ಇವರ ಮೇಲೆ ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳವು ಬಂಧಿಸಿದ್ದರೂ ಅವರು ತಮ್ಮ ಪಕ್ಷದ ಏಜೆಂಟ್‌ಗಳ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ಎಸ್.ಡಿ.ಪಿ.ಐ ಕಾರ್ಯಕರ್ತರು ಶಾಫಿ ಬೆಳ್ಳಾರೆ ಪರ ಘೋಷಣೆಗಳನ್ನು ಕೂಗಿದ್ದಾರೆ.

(ಸೌಜನ್ಯ : Namma Kudla News 24×7)

ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ಮೂವರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಷ್ಟ್ರೀಯ ತನಿಖಾ ದಳವು ಹಲವರನ್ನು ಬಂಧಿಸಿದ್ದು, ಶಾಫಿ ಬೆಳ್ಳಾರೆ ಕೂಡಾ ಈ ಬಂಧಿತರಲ್ಲಿ ಓರ್ವ ಆರೋಪಿಯಾಗಿದ್ದಾರೆ. ಶಾಫಿ ಬೆಳ್ಳಾರೆಯವರ ನಾಮಪತ್ರದ ಸೂಚಕ ಹಾಗೂ ಎಜೆಂಟ್ ಆಗಿರುವ ಅಬ್ದುಲ್ ರಹೆಮಾನ್ ಶಾಫಿ ಬೆಳ್ಳಾರೆಯ ನಾಮಪತ್ರ ಸಲ್ಲಿಸಿದ್ದಾರೆ, ಎನ್ನಲಾಗುತ್ತಿದೆ

(ಸೌಜನ್ಯ : Vijay Karnataka | ವಿಜಯ ಕರ್ನಾಟಕ)

ಸಂಪಾದಕೀಯ ನಿಲುವು

ಇಂತಹ ಜನಪ್ರತಿನಿಧಿಗಳು ಆಯ್ಕೆಯಾಗಿ ಬಂದರೆ ಜನರ ಪಾಡೇನಾಗುವುದು ? ಎಂದು ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ, ಇದನ್ನು ವಿರೋಧಿಸಲಾಗುವುದಿಲ್ಲ; ಆದರೆ ಅಂತಹ ಕಾನೂನುಗಳನ್ನು ಬದಲಾಯಿಸಲು ಜನರು ಸರಕಾರದ ಮೇಲೆ ಒತ್ತಡ ಹಾಕುವುದು ಆವಶ್ಯಕ!