ಪಾಟಣ (ಗುಜರಾತ್) ಇಲ್ಲಿಯ ರೊಟಲಿಯಾ ಹನುಮಾನ್ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಸಂಗ್ರಹಿಸಲಾಯಿತು ೫೦ ಸಾವಿರ ರೊಟ್ಟಿಗಳು !

  • ಕಾರ್ಯಕ್ರಮದ ಪ್ರವೇಶಕ್ಕೆ ‘ರೊಟ್ಟಿಗಳನ್ನು ತರುವುದು’ ಟಿಕೇಟ್ ಆಗಿತ್ತು !

  • ಹಸುಗಳಿಗೆ ಹಾಗೆಯೇ ಇತರ ಪ್ರಾಣಿಗಳಿಗೆ ನೀಡಲಾಯಿತು ರೊಟ್ಟಿಗಳು !

ಪಾಟಣ (ಗುಜರಾತ್) – ಇಲ್ಲಿನ ರೋಟಲಿಯಾ ಹನುಮಾನ್ ದೇವಸ್ಥಾನದಲ್ಲಿ ಖ್ಯಾತ ಜಾನಪದ ಗಾಯಕ ಕೀರ್ತಿದಾನ್ ಗಢವಿ ಅವರ ಭಜನಾ ಕಾರ್ಯಕ್ರಮಕ್ಕೆ ಪ್ರವೇಶಿಸಲು ೧ ರಿಂದ ೧೦ ರೊಟ್ಟಿಗಳು ತರುವ ಟಿಕೆಟ್ ಇರಿಸಲಾಗಿತ್ತು. ಆದ್ದರಿಂದ, ೫೦ ಸಾವಿರಕ್ಕೂ ಹೆಚ್ಚು ರೊಟ್ಟಿಗಳು ಇಲ್ಲಿ ಸಂಗ್ರಹಿಸಲ್ಪಟ್ಟವು. ಈ ರೊಟ್ಟಿಗಳನ್ನು ಹಸುಗಳು, ನಾಯಿಗಳು ಮತ್ತು ಇತರ ಪ್ರಾಣಿಗಳಿಗೆ ನೀಡಲಾಯಿತು. ಈ ದೇವಸ್ಥಾನದ ಸ್ಥಾಪನೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ದೇವಸ್ಥಾನದಲ್ಲಿ ಪ್ರಸಾದವಾಗಿಯೂ ರೊಟ್ಟಿಯನ್ನು ಹಂಚಲಾಗುತ್ತದೆ. ದೇವರಿಗೆ ರೊಟ್ಟಿಯ ನೈವೇದ್ಯವನ್ನೂ ಮಾಡುತ್ತಾರೆ.

(ಸೌಜನ್ಯ – Republic Bharat)