ಸಗಣಿಯಿಂದ ವಾಹನದ ಒಳಭಾಗದ ವಾತಾವರಣ ತಂಪಾಗಿರುವುದು, ವಾಹನ ತಜ್ಞರ ಪುಷ್ಟೀಕರಣ !
ಭೋಪಾಲ (ಮಧ್ಯಪ್ರದೇಶ) – ರಾಜ್ಯದ ಸಾಗರ ಜಿಲ್ಲೆಯ ತಿಲಕಗಂಜನ `ಜರೂಆಖೇಡಾ ಆರೋಗ್ಯ ಸೇತು’ ಈ ಆರೋಗ್ಯ ಕೇಂದ್ರದ ಹೋಮಿಯೋಪತಿ ವೈದ್ಯ ಸುಶೀಲ ಇವರು ತಮ್ಮ `ಮಾರುತಿ ಅಲ್ಟೋ’ ಕಾರಿನಲ್ಲಿ ಬಹಳ ಪ್ರವಾಸ ಮಾಡುತ್ತಾರೆ. ಸಧ್ಯಕ್ಕೆ ಆ ಕ್ಷೇತ್ರದಲ್ಲಿ 41 ಸೆಲ್ಷಿಯಸ್ ಡಿಗ್ರಿ ತಾಪಮಾನವಿದೆ. ಬಿಸಿಲಿನ ಧಗೆಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಡಾ. ಸುಶೀಲ ತಮ್ಮ ಕಾರಿನ ಹೊರ ಭಾಗಕ್ಕೆ ಸೆಗಣಿಯನ್ನು ಲೇಪಿಸಿದ್ದಾರೆ. ಇದರಿಂದ ಕಾರಿನ ಒಳಗಿನ ತಾಪಮಾನ ತಣ್ಣಗಿರುತ್ತದೆಯೆನ್ನುವುದು ಅವರ ಹೇಳಿಕೆಯಾಗಿದೆ.
(ಸೌಜನ್ಯ : News18 MP Chhattisgarh)
ಡಾ. ಸುಶೀಲರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಈ ಲೇಪನದಿಂದ ಸೂರ್ಯನ ಕಿರಣಗಳು ನೇರವಾಗಿ ಕಾರಿನ ಮೇಲೆ ಬೀಳುವುದಿಲ್ಲ. ಕಾರಿನ ಮೇಲಿನ ಸೆಗಣಿಯ ಲೇಪವು ಆ ಕಿರಣಗಳನ್ನು ಹೀರಿಕೊಳ್ಳುತ್ತವೆ. ಹಾಗೂ ಸಗಣಿಯಿಂದ ವಾಹನಕ್ಕೂ ಯಾವುದೇ ಹಾನಿಯಾಗುವುದಿಲ್ಲ. ವಾಹನ ತಜ್ಞರೂ ಇದನ್ನು ಪುಷ್ಟೀಕರಿಸಿದ್ದಾರೆ. ವಾಹನದ ಹೊರಭಾಗಕ್ಕೆ ಸೆಗಣಿಯ ಲೇಪನ ಮಾಡುವುದರಿಂದ ಒಳಗಡೆ ಉಷ್ಣತೆ ಹೋಗುವುದಿಲ್ಲ. ಇದರಿಂದ ವಾಹನ ಒಳಗಿನಿಂದ ತಣ್ಣಗಿರುತ್ತದೆಯೆಂದು ತಜ್ಞರ ಹೇಳಿಕೆಯಾಗಿದೆ.
MP: Homeopathic doctor coats his car with cow dung to get relief from heat in Sagar#Madhya_Pradesh #Sagar #Homeopathic #Doctor #Car #cow_dung #heat #summer #Scorching_Heathttps://t.co/Ux62eOkBXo
— Dynamite News (@DynamiteNews_) April 17, 2023