ಪೊಲೀಸ ಕೊಠಡಿಯಲ್ಲಿ ಗಂಡನ ಮತ್ತು ಮೈದನನ ಹತ್ಯೆಯ ಷಡ್ಯಂತ್ರ ರೂಪಿಸಿಲಾಗಿತ್ತು !

ಅತಿಕನ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ದಾವೆ !

ಅತಿಕ ಅಹಮದ್ ಮತ್ತು ಅತಿಕನ ಪತ್ನಿ ಶಾಯಿಸ್ತಾಳು

ಪ್ರಯಾಗರಾಜ (ಉತ್ತರಪ್ರದೇಶ ) – ಪೊಲೀಸರ ವಶದಲ್ಲಿರುವಾಗಲೇ ಹತ್ಯೆ ಮಾಡಲಾದ ಕುಖ್ಯಾತ ಗೂಂಡಾ ಅತಿಕ ಅಹಮದ್ ಮತ್ತು ಅಶ್ರಫ್ ಇವರ ಪ್ರಕರಣದಲ್ಲಿ ಅತಿಕನ ಪತ್ನಿ ಶಾಯಿಸ್ತಾಳು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಸಾರ್ವಜನಿಕವಾಗಿದೆ. ಇದರಲ್ಲಿ, ‘ಅತಿಕ ಮತ್ತು ಅಶ್ರಫ್ ಇವರ ಹತ್ಯೆಯ ಷಡ್ಯಂತ್ರ ಅವರು ಪೊಲೀಸ ಕೊಠಡಿಯಲ್ಲಿ ಇರುವಾಗಲೇ ರೂಪಿಸಲಾಗಿತ್ತು. ಇದರಲ್ಲಿ ಹಿರಿಯ ಅಧಿಕಾರಿಗಳು ಸೇರಿದ್ದಾರೆ. ವಿಚಾರಣೆಯ ನೆಪದಲ್ಲಿ ಅವರನ್ನು ಹೊರಗೆ ಕರೆಸಿ ಹತ್ಯೆ ಮಾಡಿದ್ದರೆ’, ಎಂದು ಹೇಳಲಾಗಿದೆ. ವಿಶೇಷವೆಂದರೆ ಉಮೇಶ ಪಾಲ ಹತ್ಯೆಯ ಪ್ರಕರಣದ ನಂತರ ಅತಿಕನ ಪತ್ನಿ ಶಾಯಿಸ್ತಾ ನಾಪತ್ತೆ ಆಗಿದ್ದಳು. ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ.

ಉಮೇಶ ಪಾಲ ಇವರ ಹತ್ಯೆಯ ೩ ದಿನದ ನಂತರ ಅಂದರೆ ಫೆಬ್ರವರಿ ೨೭ ರಂದು ಬರೆದಿರುವ ಪತ್ರದಲ್ಲಿ ಶಾಯಿಸ್ತಾ ಇವಳು ಓರ್ವ ಸಚಿವರು ಹತ್ಯೆಯ ಷಡ್ಯಂತ್ರ ರೂಪಿಸಿದ್ದರು ಮತ್ತು ಪೊಲೀಸ್ ಅಧಿಕಾರಿಯು ಹತ್ಯೆಯ ಗುತ್ತಿಗೆ ಪಡೆದಿದ್ದರು ಎಂದು ಹೇಳಿದ್ದರು.

ಅತಿಕನ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಬರೆದ ಪತ್ರವನ್ನು ಓದಲು ಛಾಯಾಚಿತ್ರ ಕ್ಲಿಕ್ ಮಾಡಿ !