ಸಲಿಂಗ ವಿವಾಹಗಳ ಸಮಸ್ಯೆಯನ್ನು ಸಂಸತ್ತು ನಿರ್ವಹಿಸಬೇಕು, ನ್ಯಾಯಾಲಯವಲ್ಲ ! – ಕೇಂದ್ರ ಸರಕಾರ

  • ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರೆದ ವಿಚಾರಣೆ !

  • ‘ಸ್ತ್ರೀ’ ಮತ್ತು ‘ಪುರುಷ’ ಎಂಬ ಪರಿಕಲ್ಪನೆಯು ಜನನಾಂಗಗಳನ್ನು ಆಧರಿಸಿದ ಸಂಪೂರ್ಣ ಪರಿಕಲ್ಪನೆಯಲ್ಲ ! – ಸರ್ವೋಚ್ಚ ನ್ಯಾಯಾಲಯ

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್

ನವ ದೆಹಲಿ – ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳ ಸಮಸ್ಯೆಯನ್ನು ನ್ಯಾಯಾಲಯವಲ್ಲ, ಸಂಸತ್ತು ನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

(ಸೌಜನ್ಯ : Republic World)

`ಜೈವಿಕ ಪುರುಷತ್ವದ ಪರಿಕಲ್ಪನೆಯು ನಿರಪೇಕ್ಷ ಮತ್ತು ಅವಿಭಾಜ್ಯವಾಗಿದೆ. ಗಂಡು ಅಥವಾ ಹೆಣ್ಣು ಎಂಬುದು ಸಂಪೂರ್ಣ ಪರಿಕಲ್ಪನೆ ಅಲ್ಲ. ನಿಮ್ಮ ಜನನಾಂಗ ಯಾವುದು ಎಂಬುದು ಪ್ರಶ್ನೆಯಲ್ಲ. ಇದು ಅದಕ್ಕಿಂತ ಹೆಚ್ಚು ಜಟಿಲವಾದ ವಿಷಯವಾಗಿದೆ ಎಂಬುದನ್ನು ಗಮನಿಸಬೇಕು. ಆದ್ದರಿಂದ, ‘ವಿಶೇಷ ವಿವಾಹ ಕಾಯಿದೆ’ಯು ‘ಸ್ತ್ರೀ’ ಮತ್ತು ‘ಪುರುಷ’ ಎಂದು ಹೇಳುತ್ತಿರುವಾಗಲೂ ‘ಸ್ತ್ರೀ’ ಮತ್ತು ‘ಪುರುಷ’ ಎಂಬ ಪರಿಕಲ್ಪನೆಯು ಗುಪ್ತಾಂಗಗಳನ್ನು ಆಧರಿಸಿದ ಸಂಪೂರ್ಣ ಪರಿಕಲ್ಪನೆಯಾಗಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಪೀಠವು ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸಲು ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್ 18 ರಂದು ಪ್ರಾರಂಭಿಸಿತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮಾತನಾಡುತ್ತಿದ್ದರು.

ಅವರ ಹೇಳಿಕೆಯನ್ನು ಖಂಡಿಸಿದ ಕೇಂದ್ರ ಸರಕಾರದ ಅಡ್ವೊಕೇಟ್ ಜನರಲ್ ತುಷಾರ್ ಮೆಹ್ತಾ ಅವರು ಜೈವಿಕ ಪುರುಷ ಎಂದರೆ ಜೈವಿಕ ಜನನಾಂಗಗಳನ್ನು ಹೊಂದಿರುವ ಪುರುಷ ಎಂದರ್ಥ! ಈ ಪರಿಕಲ್ಪನೆಯು (ಜನನಾಂಗಗಳನ್ನು ಆಧರಿಸಿಲ್ಲದ ಸ್ತ್ರೀ-ಪುರುಷದ ಭೇದದ ಪರಿಕಲ್ಪನೆಯು) ಸ್ತ್ರೀ ಅಥವಾ ಪುರುಷನನ್ನು ನಿರ್ಧರಿಸುವಲ್ಲಿ ಮಾರ್ಗದರ್ಶಕ ಅಂಶವೆಂದು ಪರಿಗಣಿಸಬೇಕಿದ್ದರೆ, ನಾನು ಮಾಡಲು ಅಸಾಧ್ಯವಾದ ಹಲವಾರು ಕ್ರಿಯೆಗಳನ್ನು ತೋರಿಸಬಲ್ಲೆನು. ನಾನು ಪುರುಷ ಗುಪ್ತಾಂಗವನ್ನು ಹೊಂದಿದ್ದರೆ, ಆದರೆ ನಾನು ಸ್ತ್ರೀ ಎಂದು ಸಲಹೆ ನೀಡಲಾಗುತ್ತಿದ್ದರೆ, ಕಾನೂನಿನ ಅಡಿಯಲ್ಲಿ ನನ್ನನ್ನು ಏನೆಂದು ಪರಿಗಣಿಸಲಾಗುವುದು ? ಒಬ್ಬ ಸ್ತ್ರೀ ಎಂದೇ ?”

‘ಇಂತಹ ಹಲವಾರು ಅಂಶಗಳಿವೆ. ಅವು ಸಂಸತ್ತಿನ ಮುಂದೆ ಹೋದರೆ ಒಳಿತು. ಸಂಸತ್ತಿನಲ್ಲಿ ಪ್ರತಿಷ್ಠಿತ ಸಂಸದರಿದ್ದಾರೆ. ಸಂಸದೀಯ ಸಮಿತಿಗಳಲ್ಲಿ ಎಲ್ಲಾ ಪಕ್ಷಗಳ ಸದಸ್ಯರಿದ್ದಾರೆ’, ಎಂದು ಮೆಹ್ತಾ ಇವರು ಹೇಳಿದರು.