ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲಿಂಗಕಾಮಿ ವಿವಾಹಕ್ಕೆ ವಿರೋಧ !
ನವ ದೆಹಲಿ – ಸಲಿಂಗಕಾಮ ವಿವಾಹಕ್ಕೆ ಮಾನ್ಯತೆ ನೀಡುವುದು ಎಂದರೆ ಒಂದು ಹೊಸ ಸಾಮಾಜಿಕ ಸಂಸ್ಥೆಗೆ ಜನ್ಮ ನೀಡಿದ ಹಾಗೆ ಆಗುವುದು. ಸಲಿಂಗ ಕಾಮಿ ವಿವಾಹಕ್ಕೆ ಕಾನುನರೀತ್ಯಾ ಮಾನ್ಯತೆ ನೀಡಿದರೆ ಸಮಾಜದಲ್ಲಿ ಪ್ರಚಲಿತ ವೈಯಕ್ತಿಕ ಕಾನೂನು ಮತ್ತು ಸಾಮಾಜಿಕ ಮೌಲ್ಯ ಇದರ ಸೂಕ್ಷ್ಮ ಸಮತೋಲನ ಸಂಪೂರ್ಣವಾಗಿ ನಾಶವಾಗುವುದು. ಸಲಿಂಗ ಕಾಮಿ ವಿವಾಹವು, ನಗರ ಪ್ರದೇಶದಲ್ಲಿ ಶ್ರೀಮಂತರ ಪರಿಕಲ್ಪನೆಯಾಗಿದೆ, ಎಂದು ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಯುಕ್ತಿವಾದ ನಡೆಸಿದರು. ದೇಶದಲ್ಲಿ ಸಲಿಂಗ ಕಾಮಿ ವಿವಾಹಕ್ಕೆ ಕಾನೂನು ರೀತಿಯಲ್ಲಿ ಮಾನ್ಯತೆ ಪಡೆಯಲು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದೆ. ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಪೀಠದ ಎದುರು ಏಪ್ರಿಲ್ ೧೮ ರಂದು ಈ ಅರ್ಜಿಯ ಮೇಲೆ ಮುಂದಿನ ವಿಚಾರಣೆ ನಡೆಯುವುದು.
ಕೇಂದ್ರಸರಕಾರದ ಪ್ರಕಾರ,
೧. ಸಲಿಂಗ ಕಾಮಿ ವಿವಾಹಕ್ಕೆ ಮಾನ್ಯತೆ ನೀಡುವ ನಿರ್ಣಯ ಇದು ನಗರ ಮತ್ತು ಗ್ರಾಮೀಣ ನಾಗರೀಕರ ಮಾನಸಿಕತೆ, ಧರ್ಮ ಸಂಪ್ರದಾಯ ಮತ್ತು ವೈಯಕ್ತಿಕ ಕಾನೂನಿನ ಬಗ್ಗೆ ಗಮನಹರಿಸಬೇಕು. ಇದರಲ್ಲಿ ವಿವಾಹ ಸಂಬಂಧಿತ ರೂಢಿ ಮತ್ತು ಪರಂಪರೆ ಇವುಗಳು ಕೂಡ ಮಹತ್ವದ್ದಾಗಿದೆ.
೨. ಈ ಪ್ರಕರಣ ಜನರು ಆರಿಸಿ ಕಳಿಸಿರುವ ಪ್ರತಿನಿಧಿಗಳ ಮೇಲೆ ಬಿಡಬೇಕು. ಇದು ಪ್ರಜಾಪ್ರಭುತ್ವದ ಮಾರ್ಗವಾಗಿರುವುದು, ಈ ಮೂಲಕ ಹೊಸ ಸಮಾಜಿಕ ಸಂಸ್ಥೆಯ ಪರಿಕಲ್ಪನೆ ಸಿದ್ಧಪಡಿಸಲಾಗಬಹುದು ಅಥವಾ ಗುರುತಿಸಬಹುದು.
೩. ಈಗಿನ ವಿವಾಹ ವ್ಯವಸ್ಥೆಗೆ ಸಮಾನ ದರ್ಜೆ ನೀಡುವ ಪ್ರಶ್ನೆ ಆಗಿರುವುದು, ಅದು ಪ್ರತಿಯೊಬ್ಬ ನಾಗರೀಕರ ಹಿತಾಸಕ್ತಿಯ ಮೇಲೆ ಪರಿಣಾಮ ಆಗುವುದು, ನ್ಯಾಯಾಲಯವು ಏನಾದರೂ ಅದಕ್ಕೆ ಕಾನೂನ ರೀತಿ ಮಾನ್ಯತೆ ನೀಡಿದರೆ, ಆಗ ಇದರ ಅರ್ಥ ನ್ಯಾಯ ವ್ಯವಸ್ಥೆ ಸಂಪೂರ್ಣವಾಗಿ ಕಾನೂನಿನ ಪುನರ್ ರಚನೆ ಮಾಡಬೇಕಾಗುತ್ತದೆ, ಇದು ನ್ಯಾಯಾಲಯದ ಕೆಲಸವಲ್ಲ.
पुरुष से पुरुष और स्त्री से स्त्री की शादी को कानूनी मान्यता दी जाए या नहीं? इस पर मंगलवार को सुप्रीम कोर्ट की पांच जजों की संवैधानिक बेंच सुनवाई करेगी.https://t.co/T2gAxCGe7h
— AajTak (@aajtak) April 17, 2023
ಸಂಪಾದಕೀಯ ನಿಲುವುಕೇಂದ್ರ ಸರಕಾರದಿಂದ ಸಲಿಂಗ ಕಾಮಿ ವಿವಾಹಕ್ಕೆ ವಿರೋಧ ಮಾಡಿರುವುದು ಶ್ಲಾಘನೀಯವಾಗಿದೆ, ಆದರೆ ಸರಕಾರ ಇದರ ಬಗ್ಗೆ ದೃಢವಾಗಿರಬೇಕು ! |