ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪನ ಬಂಧನ

ಸ್ವಂತ ಸಹೋದರ ಹಾಗೂ ಮಾಜಿ ಸಂಸದನ ಹತ್ಯೆ!

ವೈ.ಎಸ್. ಭಾಸ್ಕರ್ ರೆಡ್ಡಿ

ಅಮರಾವತಿ (ಆಂಧ್ರಪ್ರದೇಶ) – ಮಾಜಿ ಸಾಂಸದ ವಿವೇಕಾನಂದ ರೆಡ್ಡಿಯ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್. ಭಾಸ್ಕರ್ ರೆಡ್ಡಿ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ವಿಶೇಷ ಅಂದರೆ, ವಿವೇಕಾನಂದ ರೆಡ್ಡಿ ಇವರು ಭಾಸ್ಕರ್ ರೆಡ್ಡಿ ಅವರ ಸಹೋದರರಾಗಿದ್ದರು. ಅವರು ಮಾರ್ಚ್ 15, 2019 ರಂದು ಪುಲಿವೆಂದುಲ ಪ್ರದೇಶದಲ್ಲಿನ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಸಿಬಿಐನ ಆರೋಪ ಪಟ್ಟಿಯ ಪ್ರಕಾರ ವಿವೇಕಾನಂದ ರೆಡ್ಡಿ ಅವರು ಕಡಪ್ಪಾ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅಥವಾ ಜಗನ್ ಮೋಹನ್ ರೆಡ್ಡಿ ಅವರ ತಾಯಿ ವೈ.ಎಸ್. ವಿಜಯಮ್ಮ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಒತ್ತಾಯಿಸಿದ್ದರು. ಭಾಸ್ಕರ್ ರೆಡ್ಡಿಯ ಪುತ್ರ ಅವಿನಾಶ್ ರೆಡ್ಡಿಯು ಈ ಚುನಾವಣಾ ಕ್ಷೇತ್ರದಲ್ಲಿ ಸಂಸದರಾಗಿದ್ದಾರೆ.