ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲು ಕೆಳಗೆ ಹೂಳಿರುವ ಮಥೂರಾದ ಶ್ರೀ ಕೃಷ್ಣ ದೇವಸ್ಥಾನದಲ್ಲಿನ ಮೂರ್ತಿಗಳು ಹೊರತೆಗೆಯಿರಿ ! – ಕಥಾವಾಚಕ ದೇವಕಿ ನಂದನ ಠಾಕೂರ್ ಇವರ ಆಗ್ರಹ

ಶ್ರೀಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಜೊತೆಗೆ ರಾಷ್ಟ್ರವ್ಯಾಪಿ ಆಂದೋಲನ ನಡೆಸುವೆವು !

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಮತ್ತು ಕಥಾವಾಚಕ ದೇವಕಿ ನಂದನ ಠಾಕೂರ್

ಆಗ್ರಾ (ಉತ್ತರಪ್ರದೇಶ) – ಶೀಘ್ರದಲ್ಲೇ ಮಥೂರಾದಲ್ಲಿನ ಶ್ರೀಕೃಷ್ಣ ಜನ್ಮ ಭೂಮಿಯ ಮುಕ್ತಿಗಾಗಿ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಜೊತೆ ಗೂಡಿ ರಾಷ್ಟ್ರ ವ್ಯಾಪಿ ಆಂದೋಲನ ನಡೆಸಲಾಗುವುದು. ಆಂದೋಲನದ ರೂಪರೇಷೆ ಸಿದ್ಧಪಡಿಸಲಾಗಿದೆ, ಎಂದು ಕಥಾ ವಾಚಕ ದೇವಕಿ ನಂದನ ಠಾಕೂರ್ ಇವರು ಇಲ್ಲಿಯ ಪತ್ರಕರ್ತರ ಜೊತೆ ಮಾತನಾಡುವಾಗ ಮಾಹಿತಿ ನೀಡಿದರು. ಅವರು, ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲುಗಳ ಕೆಳಗೆ ಮಥೂರೆಯಲ್ಲಿನ ಶ್ರೀಕೃಷ್ಣ ದೇವಸ್ಥಾನದಲ್ಲಿನ ಮೂರ್ತಿ ಹೂಗಿಯಲಾಗಿದೆ. ಆ ಮೂರ್ತಿಗಳನ್ನು ಹೊರತೆಗೆಯಬೇಕು ಎಂದು ಹೇಳಿದರು.

ಆಂದೋಲನದ ಬಗ್ಗೆ ಠಾಕೂರ್ ಇವರು, ಈ ಆಂದೋಲನದಲ್ಲಿ ಯುವಕರ ಪಾತ್ರ ಹೆಚ್ಚು ಮಹತ್ವದ್ದಾಗಿರುತ್ತದೆ. ಈ ಆಂದೋಲನಕ್ಕೆ ವ್ರಜಭೂಮಿಯಿಂದ ಆರಂಭ ಮಾಡಲಾಗುವುದು ಮತ್ತು ನಂತರ ಆಗ್ರಾ, ಕಾನಪುರ, ಪ್ರಯಾಗರಾಜ ಸಹಿತ ಸಂಪೂರ್ಣ ದೇಶದಲ್ಲಿ ಈ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.