ಅಪರಾಧಿ ಚಟುವಟಿಕೆ ಮಾಡುತ್ತಿದ್ದರಿಂದ ಅತಿಕ ಮತ್ತು ಆಶ್ರಫ್ ನ ಹತ್ಯೆ ! – ಕೊಲೆಗಾರರ ದಾವೆ

ಪ್ರಯಾಗರಾಜ (ಉತ್ತರಪ್ರದೇಶ) – ಅನೇಕ ಕೊಲೆ, ಸುಲಿಗೆ, ಬೆದರಿಕೆ ಮುಂತಾದ ಅಪರಾಧಗಳಲ್ಲಿ ಸಹಭಾಗಿಯಾಗಿರುವ ಕುಖ್ಯಾತ ಗೂಂಡ ಅತಿಕ ಅಹಮದ್ ಮತ್ತು ಅವನ ಸಹೋದರ ಅಶ್ರಫ್ ನನ್ನು ಏಪ್ರಿಲ್ ೧೫ ರಂದು ರಾತ್ರಿ ೩ ಜನರು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಲವಲೇಶ ತಿವಾರಿ, ಸನಿ ಸಿಂಹ ಮತ್ತು ಅರುಣ ಮೌರ್ಯ ಎಂದು ಆರೋಪಿಗಳ ಹೆಸರಾಗಿವೆ. ಈ ಮೂವರು ಕೂಡ ಗುಂಡಾಗಳಾಗಿರುವುದು ಬೆಳಕಿಗೆ ಬಂದಿದೆ. ಇವರ ವಿರುದ್ಧ ಅನೇಕ ದೂರುಗಳು ದಾಖಲಾಗಿವೆ ಮತ್ತು ಅವರು ಜೈಲಿಗೆ ಕೂಡ ಹೋಗಿ ಬಂದಿದ್ದಾರೆ. ಈ ಮೂವರು ‘ಜೈ ಶ್ರೀ ರಾಮ ‘ಎಂದು ಘೋಷಣೆ ಕೂಗುತ್ತಾ ಅತಿಕ ಮತ್ತು ಆಶ್ರಫ್ ನ ಕೊಲೆ ಮಾಡಿ ಪೊಲೀಸರಿಗೆ ಶರಣಾದರು. ಪೊಲೀಸರು ಈಗ ಅವರ ವಿಚಾರಣೆ ನಡೆಸುತ್ತಿದ್ದಾರೆ. ಈ ಕೊಲೆಯ ಹಿಂದಿನ ಓರ್ವ ಸೂತ್ರಧಾರ ಇರುವನೆಂಬ ಪ್ರಾರ್ಥಮಿಕ ಹಂತದ ವಿಚಾರಣೆಯಲ್ಲಿ ಪೊಲೀಸರಿಗೆ ಮಾಹಿತಿ ದೊರೆತಿದೆ. ಅತಿಕ ಮತ್ತು ಅಶ್ರಫ್ ಇವರ ಕೊಲೆಯ ನಂತರ ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಅವರು, ‘ಆತಿಕ ಅಹಮದ ಇವನು ಪಾಕಿಸ್ತಾನದ ಜೊತೆ ಸಂಬಂಧ ಹೊಂದಿದ್ದನು. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬ’ ಹಾಗೂ ಗುಪ್ತಚರ ಸಂಘಟನೆ ಐ.ಎಸ್.ಐ. ಜೊತೆ ಇವರಿಬ್ಬರೂ ಸಂಬಂಧ ಹೊಂದಿದ್ದರು. ಆತಿಕ ಮತ್ತು ಅವನ ಗ್ಯಾಂಗ್ ಅನೇಕ ಅಮಾಯಕರ ಜೀವ ತೆಗೆದಿದ್ದಾರೆ. ಭೂಮಿ ಕಬ್ಬಳಿಸಲು ಅತಿಕ ಹತ್ಯೆ ಮಾಡುತ್ತಿದ್ದನು. ಅವನ ವಿರುದ್ಧ ಸಾಕ್ಷಿ ಹೇಳುವವರಿಗೆ ಕೂಡ ಕಿರುಕುಳ ನೀಡುತ್ತಿದ್ದನು. ಅವನ ಸಹೋದರ ಅಶ್ರಫ್ ಕೂಡ ಇಂತಹ ಕೃತ್ಯ ಮಾಡುತ್ತಿದ್ದನು. ಅದಕ್ಕಾಗಿ ನಾವು ಇಬ್ಬರ ಹತ್ಯೆ ಮಾಡಿದ್ದೇವೆ ಎಂದು ಹೇಳಿದರು.

ಸೇಡು ತೀರಿಸಿಕೊಳ್ಳುವುದಕ್ಕಾಗಿ ಅತಿಕನ ಹತ್ಯೆ ! – ಆರೋಪಿಯ ದಾವೆ

ಅತಿಕ ಮತ್ತು ಆಶ್ರಫ್ ಇವರ ಹತ್ಯೆ ಮಾಡಿರುವವರಲ್ಲಿ ಒಬ್ಬ ಆರೋಪಿಯ ಸಂಬಂಧಿಕರನ್ನು ಆತಿಕನು ಹತ್ಯೆ ಮಾಡಿದ್ದನು. ಆದ್ದರಿಂದ ಅದರ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅತಿಕನ ಹತ್ಯೆ ಮಾಡಿದ್ದಾನೆ, ಎಂದು ಹೇಳಿದನು, ಆರೋಪಿ ಪೊಲೀಸರಿಗೆ ನೀಡಿರುವ ಮಾಹಿತಿ ಸೂತ್ರಗಳಿಂದ ತಿಳಿದು ಬಂದಿದೆ. ಮೂವರಲ್ಲಿ ಯಾವ ಆರೋಪಿ ಈ ರೀತಿ ಹೇಳಿದ್ದಾನೆ ? ಅದು ಮಾತ್ರ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಪೊಲೀಸರು ಇದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಮೂವರು ಒಟ್ಟಾಗಿ ಹೇಗೆ ಸೇರಿದರು ?

ಮೂವರು ಆರೋಪಿಗಳು ಉತ್ತರ ಪ್ರದೇಶದ ಬೇರೆ ಬೇರೆ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ. ಲವಲೆಶ ತಿವಾರಿ ಇವನು ಬಾಂದಾ, ಸನಿ ಇವನು ಹಮಿರಪುರ ಹಾಗೂ ಅರುಣ ಮೌರ್ಯ ಕಾಸಗಂಜದ ನಿವಾಸಿಯಾಗಿದ್ದಾನೆ. ಆದ್ದರಿಂದ ಇವರು ಪರಸ್ಪರ ಹೇಗೆ ಪರಿಚಿತರಾದರು ?, ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂವರ ವಯಸ್ಸು ೨೦ ರಿಂದ ೨೫ ವರ್ಷ ಆಗಿದೆ. ಈ ಮೂವರು ಹತ್ಯೆಯ ಎರಡು ದಿನ ಹಿಂದೆ ಪ್ರಯಾಗರಾಜದಲ್ಲಿನ ಒಂದು ಹೋಟೆಲ್ ನಲ್ಲಿ ಬಾಡಿಗೆ ರೂಮ್ ಪಡೆದಿದ್ದರು. ಹತ್ಯೆಗಾಗಿ ಬಳಸಿದ್ದ ಬೈಕ್ ಸರ್ದಾರ್ ಅಬ್ದುಲ್ ಮನ್ನಾನ ಖಾನ್ ಇವರ ಹೆಸರಿನಲ್ಲಿ ನೋಂದಣಿ ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಬೈಕ್ ಅವರಿಗೆ ಯಾರು ಮತ್ತು ಎಲ್ಲಿಂದ ತಂದು ಕೊಟ್ಟರು ? ಇದರ ಹುಡುಕಾಟ ನಡೆಯುತ್ತಿದೆ. ಇವರಲ್ಲಿನ ಸನಿ ಸಿಂಹ ಇವನು ಯಾವಾಗ ಒಂದು ಪ್ರಕರಣದಲ್ಲಿ ಜೈಲಿನಲ್ಲಿ ಇದ್ದನು, ಆಗ ಕುಖ್ಯಾತ ಗೂಂಡ ಸುಂದರ ಭಾಟಿ ಇವನ ಜೊತೆ ಪರಿಚಯವಾಗಿತ್ತು. ಸುಂದರ ಭಾಟಿ ಗ್ಯಾಂಗ್ ಗಾಗಿ ಅಪರಾಧ ಎಸಗುವ ಆರೋಪ ಸನಿಯ ಮೇಲೆ ಇದೆ.

ಆರೋಪಿಗಳಿಂದ ಭಾರತದಲ್ಲಿ ನಿಷೇಧಿಸಲಾಗಿದ್ದ ಬಂದೂಕಿನ ಬಳಕೆ !

ಅತಿಕ್ ಮತ್ತು ಆಶ್ರಫ್ ಇವರ ಹತ್ಯೆಗಾಗಿ ಆರೋಪಿಗಳು ‘ಜಿಗಾನಾ’ ಈ ಬಂದೂಕನ್ನು ಉಪಯೋಗಿಸಿದ್ದಾರೆ. ಈ ಬಂದೂಕು ಟರ್ಕಿಯಲ್ಲಿ ತಯಾರಾಗಿದ್ದು ಅದರ ಬೆಲೆ ೬ ಲಕ್ಷ ರೂಪಾಯಿ ಇದೆ. ಈ ಬಂದೂಕನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದನ್ನು ಕಳ್ಳಸಾಗಾಣಿಕೆಯ ಮೂಲಕ ಭಾರತಕ್ಕೆ ತರಲಾಗಿದೆ. ಇದರಲ್ಲಿ ಒಂದೇ ಸಲ ೧೭ ಗುಂಡುಗಳು ತುಂಬಬಹುದು, ಇಂತಹ ಬಂದೂಕನ್ನೇ ಗಾಯಕ ಸಿದ್ದು ಮುಸೇವಾಲನ ಹತ್ಯೆಯಲ್ಲಿ ಉಪಯೋಗಿಸಲಾಗಿತ್ತು. ಈ ಬಂದೂಕನ್ನಿ ಮಲೇಶಿಯಾ, ಅಜರ್ಬೈಜಾನ್ ಮತ್ತು ಫಿಲಿಪಾಯಿನಸ್ ಈ ದೇಶಗಳಲ್ಲಿ ಸೇನೆಯು ಉಪಯೋಗಿಸುತ್ತದೆ. ಈ ಬಂದೂಕು ಸ್ವಯಂಚಾಲಿತ (ಆಟೋಮೆಟಿಕ್) ಆಗಿದ್ದು ಮತ್ತು ಅದರಿಂದ ಒಂದೇ ಸಾರಿ ಅನೇಕ ಗುಂಡುಗಳು ಹಾರಿಸಬಹುದು.

ನಾವು ಅವನನ್ನು ಬಿಟ್ಟುಬಿಟ್ಟಿದ್ದೇವೆ ! – ಲವಲೇಶ ತಿವಾರಿ ಇವನ ತಂದೆಯ ಹೇಳಿಕೆ

ಆರೋಪಿ ಲವಲೇಶ ತಿವಾರಿ ಇವನ ತಂದೆ ಯಜ್ಞ ತಿವಾರಿ ಇವರು, ನಮಗೆ ಏನು ಗೊತ್ತಿಲ್ಲ, ಲವಲೇಶನ ಜೊತೆಗೆ ನಮ್ಮ ಯಾವುದೇ ಸಂಬಂಧವಿಲ್ಲ. ನಮ್ಮ ಮನೆಯ ಜೊತೆಗೆ ಅವನ ಯಾವ ಸಂಬಂಧವೂ ಇಲ್ಲ. ನಾವು ಅನೇಕ ವರ್ಷಗಳಿಂದ ಅವನೊಂದಿಗೆ ಮಾತನಾಡುವುದು ನಿಲ್ಲಿಸಿದ್ದೇವೆ. ಒಂದು ಪ್ರಕರಣದಲ್ಲಿ ಅವನು ಜೈಲಿಗೆ ಹೋಗಿದ್ದನು, ಅಂದಿನಿಂದ ಅವನಜೊತೆ ಮಾತನಾಡುವುದು ನಿಲ್ಲಿಸಿದ್ದೇವೆ. ಅವನು ಮಾದಕ ವಸ್ತುಗಳ ಸೇವನೆ ಮಾಡುತ್ತಾನೆ. ನಾವು ಅವನ ಜೊತೆಗಿನ ಸಂಬಂಧ ಮುರಿದಿದ್ದೇವೆ. ಅವನು ಯಾವಾಗಲಾದರು ಮನೆಗೆ ಬರುತ್ತಿದ್ದನ್ನು. ೫-೬ ದಿನಗಳ ಹಿಂದೆ ಅವನು ಮನೆಗೆ ಬಂದಿದ್ದನು. ಅವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಅತಿಕ್ ಕೊಲೆ ಪ್ರಕರಣದಲ್ಲಿ ಅವನು ಸಹಭಾಗಿಯಾಗಿದ್ದು ಟಿವಿ ನೋಡಿದ ಮೇಲೆ ತಿಳಿಯಿತು.

೧೭ ಪೊಲೀಸರು ಅಮಾನತು

ಪೊಲೀಸರ ರಕ್ಷಣೆಯಲ್ಲಿ ಅತಿಕ ಮತ್ತು ಆಶ್ರಫ್ ಇವರ ಹತ್ಯೆ ನಡೆದಿದ್ದರಿಂದ ಉತ್ತರ ಪ್ರದೇಶ ಸರಕಾರವು ಆ ಸಮಯದಲ್ಲಿ ರಕ್ಷಣೆಯಲ್ಲಿ ನೇಮಕವಾಗಿರುವ ೧೭ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಹತ್ಯೆಯ ಘಟನೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರ ಸರಕಾರಿ ನಿವಾಸದ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಪ್ರಯಾಗರಾಜದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.