ಕರ್ನಾಟಕದಲ್ಲಿ ಕೂಡಲೇ ‘ನ್ಯಾಯವಾದಿ ಸಂರಕ್ಷಣೆ ಕಾನೂನು ರೂಪಿಸಿ ! – ನ್ಯಾಯವಾದಿ ಅಮೃತೇಶ್ ಎನ್. ಪಿ., ಕರ್ನಾಟಕ ಉಚ್ಚ ನ್ಯಾಯಾಲಯ

ವಿಶೇಷ ಸಂವಾದ : ‘ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿ ಇವರ ಮೇಲೆ ಗುಂಡಿನ ದಾಳಿಯ ಸೂತ್ರಧಾರ ಯಾರು ?

ನ್ಯಾಯವಾದಿ ಅಮೃತೇಶ ಎನ್.ಪಿ.

ನ್ಯಾಯವಾದಿ ಕೃಷ್ಣಮೂರ್ತಿ ಇವರು ವಿಶ್ವ ಹಿಂದೂ ಪರಿಷತ್ತಿನ ಸ್ಥಳೀಯ ನಾಯಕರು. ಅವರು ಕರ್ನಾಟಕದಲ್ಲಿ ಗೌರಿ ಲಂಕೇಶ್ ಕೊಲೆ ಪ್ರಕರಣದ ಮುಖ್ಯ ವಕೀಲರಾಗಿದ್ದಾರೆ, ಹಾಗೂ ಅವರು ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ, ಸ್ಥಳೀಯ ಹಿಂದುತ್ವನಿಷ್ಠರಿಗೆ ನೈತಿಕ, ಧಾರ್ಮಿಕ ಮತ್ತು ಕಾನೂನು ದೃಷ್ಟಿಯಿಂದ ಬೆಂಬಲ ನೀಡುತ್ತಾರೆ. ಆದ್ದರಿಂದಲೇ ಅವರನ್ನು ಗುರಿ ಮಾಡಲಾಗಿದೆ. ಇದು ನ್ಯಾಯವಾದಿ ಕೃಷ್ಣಮೂರ್ತಿ ಇವರ ಕೊಲೆ ನಡೆಸುವ ಷಡ್ಯಂತ್ರವಾಗಿದೆ. ಹಿಂದುತ್ವಕ್ಕಾಗಿ ಹೋರಾಡುವವರಿಗೆ ಇಂದು ಎಲ್ಲೂ ರಕ್ಷಣೆ ಸಿಗುತಿಲ್ಲ. ಅದಕ್ಕಾಗಿ ಎಲ್ಲಾ ನ್ಯಾಯವಾದಿಗಳಿಗೆ ಸಂರಕ್ಷಣೆ ಸಿಗಬೇಕೆಂದು ಕಾನೂನು ರೂಪಿಸಲು ನಾವು ಕಳೆದ 5 ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಕರ್ನಾಟಕ ಸರಕಾರವು ಕೂಡಲೇ ‘ನ್ಯಾಯವಾದಿ ಸಂರಕ್ಷಣಾ ಕಾನೂನು’ ಜಾರಿಗೊಳಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಮೃತೇಶ್ ಎನ್. ಪಿ. ಇವರು ಆಗ್ರಹಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ‘ಗೌರಿ ಲಂಕೇಶ್ ಪ್ರಕರಣದಲ್ಲಿ ಹಿಂದುತ್ವವಾದಿಗಳ ಪರ ಹೋರಾಡುವ ನ್ಯಾಯವಾದಿಗಳ ಮೇಲೆ ನಡೆಸಿರುವ ಗುಂಡಿನ ದಾಳಿ; ಕೃತ್ಯದ ಹಿಂದಿನ ಸೂತ್ರಧಾರ ಯಾರು ? ಈ ವಿಷಯದ ಬಗ್ಗೆ ಆಯೋಜಿಸಿದ್ದ ಆನ್ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು .

ಕರ್ನಾಟಕದಲ್ಲಿ ‘ಉತ್ತರ ಪ್ರದೇಶ ಮಾಡಲ್’ ಜಾರಿಗೊಳಿಸಿರಿ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಮೋಹನ ಗೌಡ

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು, ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ35 ಹಿಂದೂ ನಾಯಕರ ಅಮಾನುಷ ಕೊಲೆ ನಡೆದಿದೆ. ಈ ಹಿಂದಿನ ಅನೇಕ ಪ್ರಕರಣಗಳಲ್ಲಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿ ಎಫ್ ಐ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಈ ಜಿಹಾದಿ ಇಸ್ಲಾಮಿಕ್ ಸಂಘಟನೆಗಳ ಕೈವಾಡ ಇದೆಯಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ‘ಹಿಂದುತ್ವಕ್ಕಾಗಿ ಕಾರ್ಯ ಮಾಡಿದರೆ, ಅದರ ಪರಿಣಾಮ ಹೀಗೇ ಆಗುವುದು’, ಈ ರೀತಿ ಹಿಂದುತ್ವನಿಷ್ಠ ಕಾರ್ಯಕರ್ತರು ಮತ್ತು ನ್ಯಾಯವಾದಿಗಳಲ್ಲಿ ಭಯ ಹುಟ್ಟಿಸುವ ಷಡ್ಯಂತ್ರವಾಗಿದೆ. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಮೈಸೂರು ಜಿಲ್ಲೆಯಲ್ಲಿ ಸುನಿಯೋಜಿತವಾಗಿ ತಂಡಗಳ ಮೂಲಕ ಹಿಂದುತ್ವನಿಷ್ಠರ ಕೊಲೆ ಮಾಡಲಾಗಿದೆ. ಆದರೂ ಅಪರಾಧಿಗಳ ಮೇಲೆ ಭಯೋತ್ಪಾದಕ ಕಾರ್ಯ ಚಟುವಟಿಕೆ ಅಂತರ್ಗತ ದೂರು ದಾಖಲಿಸಲಿಲ್ಲ. ಈ ಘಟನೆಯ ಮುಖ್ಯ ಸೂತ್ರಧಾರನಿಗೆ ಮತ್ತೆ ಮತ್ತೆ ಜಾಮೀನು ದೊರೆಯುತ್ತದೆ ಮತ್ತು ಸರಕಾರಿ ನ್ಯಾಯವಾದಿಗಳೂ ಜಾಮೀನಿಗೆ ವಿರೋಧ ವ್ಯಕ್ತಪಡಿಸಲಿಲ್ಲ. ಹಿಂದುತ್ವನಿಷ್ಠರ ಹತ್ಯೆ ಪ್ರಕರಣಗಳಲ್ಲಿ ‘ಫಾಸ್ಟ್ ಟ್ರ್ಯಾಕ್’ ನ್ಯಾಯಾಲಯದ ಮೂಲಕವೂ ಈ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಪರಿಹರಿಸದೇ ಇರುವುದರಿಂದ ಅಪರಾಧಿಗಳಿಗೆ ಯಾವುದೇ ಭಯ ಇಲ್ಲದಂತಾಗಿದೆ. ನ್ಯಾಯವಾದಿ ಕೃಷ್ಣಮೂರ್ತಿ ಅಂತಹ ನ್ಯಾಯವಾದಿಗಳಿಗೆ ಸಶಸ್ತ್ರ ಪೊಲೀಸ್ ಸಂರಕ್ಷಣೆ ನೀಡಬೇಕು. ಅಪರಾಧಿಗಳಿಗೆ ಭಯ ಹುಟ್ಟಿಸುವಂತಹ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಂತಹ ನೇತೃತ್ವದ ಅವಶ್ಯಕತೆ ಇಂದು ಕರ್ನಾಟಕಕ್ಕೆ ಇದೆ. ಆಗಲೇ ಕರ್ನಾಟಕದಲ್ಲಿ ಹಿಂದುತ್ವನಿಷ್ಠರ ಕೊಲೆ, ನ್ಯಾಯಮೂರ್ತಿಗಳಿಗೆ ಬೆದರಿಕೆ, ಹಿಂದೂ ಉತ್ಸವಗಳ ಮೆರವಣಿಗೆಯ ಮೇಲಿನ ಕಲ್ಲು ತೂರಾಟ ಈ ರೀತಿಯ ಘಟನೆಗಳು ನಿಲ್ಲಲು ಸಾಧ್ಯ. ಆದ್ದರಿಂದ ಕರ್ನಾಟಕದಲ್ಲಿ ‘ಉತ್ತರ ಪ್ರದೇಶ ಮಾಡಲ್’ ಜಾರಿ ಮಾಡಬೇಕು, ಎಂದು ಶ್ರೀ. ಗೌಡ ಹೇಳಿದರು.

ಈ ವೇಳೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ದಿವ್ಯಾ ಬಾಳೆಹಿತ್ತಲ್ ಇವರು, ಈಗ ಹಿಂದೂ ನ್ಯಾಯವಾದಿಗಳನ್ನು ಗುರಿ ಮಾಡಲಾಗುತ್ತಿದೆ. ನ್ಯಾಯವಾದಿ ಕೃಷ್ಣಮೂರ್ತಿ ಇವರ ಮೇಲೆ ದಾಳಿ ನಡೆಸಿದವ ಅನುಭವಿ ಶೂಟರ್ ಆಗಿದ್ದ. ನ್ಯಾಯವಾದಿ ಕೃಷ್ಣಮೂರ್ತಿಯವರ ತಲೆಗೆ ಗುಂಡು ಹಾರಿಸಿದ್ದ. ಆದರೆ ದೇವರ ದಯೆಯಿಂದ ಅವರು ಬದುಕುಳಿದರು. ಕರ್ನಾಟಕ ಪೊಲೀಸರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ; ಆದರೆ ಇದುವರೆಗೆ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ, ಎಂದು ಅಸಮಾಧಾನ ವ್ಯಕ್ತಪಡಿಸಿದರು.