ಬಾಂಬ್ ಸ್ಫೋಟದಿಂದ ಬದುಕುಳಿದ ಜಪಾನ್ ಪ್ರಧಾನಿ !

ದಾಳಿಕೋರನ ಬಂಧನ

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ

ಟೋಕಿಯೊ (ಜಪಾನ್) – ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಏಪ್ರಿಲ್ ೧೫ ರಂದು ಆದ ಬಾಂಬ್ ಸ್ಫೋಟದಲ್ಲಿ ಬದುಕುಳಿದರು. ಅವರು ವಾಕಾಯಾಮ ನಗರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿದ್ದಾಗ ಬಾಂಬ್ ಸ್ಫೋಟಗೊಂಡಿತು. ಸ್ಫೋಟದಿಂದಾಗಿ ಅಲ್ಲಿದ್ದವರು ಓಡಲಾರಂಭಿಸಿದರು. ಆ ಸಮಯದಲ್ಲಿ ಭದ್ರತಾ ಪಡೆಗಳು ಪ್ರಧಾನಿ ಕಿಶಿದಾ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದರು. ಪೊಲೀಸರು ದಾಳಿ ನಡೆಸಿದವರನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ. ವಿಶೇಷವೆಂದರೆ ಜುಲೈ ೮, ೨೦೨೨ ರಂದು, ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಸಭೆಯೊಂದರಲ್ಲಿ ಭಾಷಣ ಮಾಡುವಾಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.