ನವ ದೆಹಲಿ – ಇಲ್ಲಿಯ ಭಾಜಪದ ಹಿರಿಯ ನಾಯಕ ಸುರೇಂದ್ರ ಮತಿಯಾಲ (ವಯಸ್ಸು ೬೦ ವರ್ಷ) ಇವರನ್ನು ಹಂತಕರು ದೆಹಲಿಯ ಕಾರ್ಯಾಲಯಕ್ಕೆ ನುಗ್ಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆ ಏಪ್ರಿಲ್ ೧೪ ರ ಸಂಜೆ ೫ ಗಂಟೆ ಸುಮಾರಿಗೆ ನಡೆದಿದೆ. ಈ ಪ್ರಕರಣದಲ್ಲಿ ಬಿಂದಾಪುರ ಪೊಲೀಸರು ಕೊಲೆಯ ದೂರು ದಾಖಲಿಸಿ ಕೊಂಡು ಗುಂಡು ಹಾರಿಸಿದವನ ಶೋಧ ನಡೆಸುತ್ತಿದ್ದಾರೆ.
ಈ ಬಗ್ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಸುರೇಂದ್ರ ಮತಿಯಾಲ ಇವರು ಅವರ ಒಬ್ಬ ಸಂಬಂಧಿಕರ ಮತ್ತು ಕಾರ್ಯಾಲಯದಲ್ಲಿನ ಸಿಬ್ಬಂದಿಗಳ ಜೊತೆಗೆ ಕಾರ್ಯಾಲಯದಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ಇಬ್ಬರು ಕಾರ್ಯಾಲಯದ ಬಾಗಿಲು ತೆರೆದರು ಮತ್ತು ನೇರ ಸುರೇಂದ್ರ ಲಮತಿಯಾಲ ಇವರ ಮೇಲೆ ನೇರ ಗುಂಡು ಹಾರಿಸಿದರು. ಸುರೇಂದ್ರ ಮತಿಯಾಲ ಇವರಿಗೆ ೫ ಗುಂಡು ತಾಗಿದವು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು; ಆದರೆ ಅಲ್ಲಿಯ ಆಧುನಿಕ ವೈದ್ಯರು ಅವರನ್ನು ಮೃತಪಟ್ಟರೆಂದು ಹೇಳಿದರು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸ ಆಯುಕ್ತರ ಸಹಿತ ಎಲ್ಲಾ ಪೊಲೀಸ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸುರೇಂದ್ರ ಮತಿಯಾಲ ಇವರು ಭಾಜಪದ ನಜಪಗಡ ಜಿಲ್ಲೆಯ ಕಿಸಾನ್ ಮೋರ್ಚಾದ ಪ್ರಭಾರಿಯಾಗಿದ್ದರು. ಸುರೇಂದ್ರ ಮತಿಯಾಲ ಇವರ ಕೊಲೆಯ ಪ್ರಕರಣದಲ್ಲಿ ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ನ ಕೈವಾಡ ಇರುವ ಅನುಮಾನ ವ್ಯಕ್ತಪಡಿಸಲಾಗಿದೆ.
दिल्ली के नजफ़गढ़ इलाके में बीजेपी के पूर्व निगम पार्षद सुरेंद्र मटियाला की हत्या…
दो बदमाशों ने शुक्रवार की शाम दफ़्तर में घुसकर मारी 6 गोली और बाइक से हुए फ़रार…#bjpdelhi #bjpFormercouncilor #SurenderMatiala pic.twitter.com/j647aqsmhZ
— India TV (@indiatvnews) April 15, 2023
ಸಂಪಾದಕೀಯ ನಿಲುವುಗೂಂಡಾಗಳಿಗೆ ಪೊಲೀಸರ ಸ್ವಲ್ಪವು ಭಯ ಇಲ್ಲದೆ ಇರುವುದರಿಂದ ಹಾಡುಹಗಲು ಅವರು ಯಾರ ಕೊಲೆ ಮಾಡಲು ಹಿಂಜರಿಯುವುದಿಲ್ಲ ! ಈ ಸ್ಥಿತಿ ಬದಲಾಯಿಸುವುದಕ್ಕೆ ಸರಕಾರ ಪ್ರಯತ್ನಿಸಬೇಕು ! |