ಒಂದೇ ಕ್ಲಿಕ್‌ನಲ್ಲಿ ವಿಶ್ವದ ಮೊದಲ ವ್ಯಸನ-ಮುಕ್ತ ನಾಯಿಯ ಬಗ್ಗೆ ಮಾಹಿತಿಯನ್ನು ಓದಿ…

ನವ ದೆಹಲಿ – ‘ನ್ಯೂಸ್‌ವಿಕ್’ ಈ ನಿಯತಕಾಲಿಕೆಯು ನೀಡಿದ ವರದಿಯ ಪ್ರಕಾರ, ಒಂದುವೇಳೆ ಸಾಕು ನಾಯಿ ಕುಡಿತದ ಚಟಕ್ಕೆ ಒಳಗಾಗಿತ್ತು ಮತ್ತು ಚಿಕಿತ್ಸೆಯ ನಂತರ ಮದ್ಯಪಾನದ ಚಟದಿಂದ ಗುಣಮುಖವಾದ ವಿಶ್ವದ ಮೊದಲ ನಾಯಿವಾಗಿದೆ. ‘ಪ್ರಾಣಿ ಕಲ್ಯಾಣ್ ಚಾರಿಟಿ’ಯ ಫೇಸ್ ಬುಕ್ ಪೇಜ್ ನಲ್ಲಿ ಇದರ ಮಾಹಿತಿ ನೀಡಲಾಗಿದೆ.

‘ಕೊಕೊ’ ಎಂಬ ಹೆಸರಿನ ೨ ವರ್ಷದ ಲ್ಯಾಬ್ರಡಾರ್ ಜಾತೀಯ ನಾಯಿಯ ಮಾಲೀಕನು ಮದ್ಯಪಾನಕ್ಕೆ ತುತ್ತಾಗಿದ್ದನು. ಮಾಲೀಕ ಕುಡಿದು ನಿದ್ದೆಗೆ ಹೋದ ನಂತರ ಆತನ ಗ್ಲಾಸಿನಲ್ಲಿ ಉಳಿದಿದ್ದ ಸರಾಯಿ ಕೋಕೋ ಕುಡಿಯುತಿತ್ತು. ಅದು ಮದ್ಯದ ಚಟಕ್ಕೆ ತುತ್ತಾಯಿತು. ಮಾಲೀಕರ ಸಾವಿನ ನಂತರ, ಕೊಕೊ ಮತ್ತು ಇನ್ನೊಂದು ನಾಯಿಯನ್ನು ಬ್ರಿಟನ್‌ನ ಬಳಿಯ ಡೆವೊನ್‌ನಲ್ಲಿರುವ ವುಡಸಾಯಿ ಅನಿಮಲ್ ರೆಸ್ಕ್ಯೂ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು. ಅತಿಯಾದ ಮಧ್ಯಪ್ರಾಶನದಿಂದ ಅವು ತೀವ್ರ ಅಸ್ವಸ್ಥವಾಗಿದ್ದವು. ಚಿಕಿತ್ಸೆಯ ಸಮಯದಲ್ಲಿ ಮತ್ತೊಂದು ನಾಯಿ ಸಾವನ್ನಪ್ಪಿದರೆ, ಕೊಕೊಗೆ ಚಿಕಿತ್ಸೆಯ ಸಮಯದಲ್ಲಿ ಅಪಸ್ಮಾರ(ಪಿಟ್ಸ) ಬರುತಿದ್ದವು. ಅದನ್ನು ಅಪಾಯದಿಂದ ಹೊರತರಲು ೪ ವಾರಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಇಡಬೇಕಾಯಿತು. ಈಗ ಕೊಕೊ ಚೇತರಿಸಿಕೊಳ್ಳುತ್ತಿದ್ದು, ಸಾಮಾನ್ಯ ನಾಯಿಯಂತೆ ವರ್ತಿಸುತ್ತಿದೆ.

ಸಂಪಾದಕೀಯ ನಿಲುವು

‘ಈಗ ಮನುಷ್ಯರು ನಾಯಿಗಳಿಂದ ಕಲಿಯಬೇಕು’ ಎಂದು ಯಾರಾದರೂ ಹೇಳಿದರೆ ಅದು ತಪ್ಪಾಗಬಾರದು !