ಗಲಭೆಗಳಿಗೆ ಮಮತಾ ಬ್ಯಾನರ್ಜಿ ಸರಕಾರವೇ ಹೊಣೆ ! – ಮಾನವ ಹಕ್ಕುಗಳ ಆಯೋಗದ ಸತ್ಯಶೋಧನಾ ಸಮಿತಿಯ ವರದಿ

ಬಂಗಾಲದಲ್ಲಿ ಶ್ರೀರಾಮನವಮಿಯ ಸಮಯದಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಗಲಭೆ ಪ್ರಕರಣ !

ಕೋಲಕತಾ (ಬಂಗಾಲ) – ಶ್ರೀ ರಾಮನವಮಿಯ ಮೆರವಣಿಗೆಯ ಸಮಯದಲ್ಲಿ ಹಾವಡಾ ಮತ್ತು ಹೂಗ್ಲಿಯಲ್ಲಿ ಮತಾಂಧ ಮುಸಲ್ಮಾನರಿಂದ ನಡೆದಿರುವ ಗಲಭೆಗಾಗಿ ಮಾನವ ಹಕ್ಕುಗಳ ಆಯೋಗದ ಸತ್ಯಶೋಧನಾ ಸಮಿತಿಯು ಮಮತಾ ಬ್ಯಾನರ್ಜಿ ಸರಕಾರವನ್ನು ಹೊಣೆಗಾರರನ್ನಾಗಿ ಮಾಡಿದೆ. ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ನರಸಿಂಹ ರೆಡ್ಡಿ ಇವರ ನೇತೃತ್ವದ ೬ ಸದಸ್ಯರ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ‘ಈ ಗಲಭೆ ಉದ್ದೇಶಪೂರ್ವಕವಾಗಿತ್ತು ಮತ್ತು ಅದು ಸುನಿಯೋಜಿತವಾಗಿ ಪ್ರಚೋದಿಸಲಾಯಿತು. ಆ ಸಮಯದಲ್ಲಿ ಪೊಲೀಸರ ತಟಸ್ಥತೆಯು ಅನುಮಾನಾಸ್ಪದವಾಗಿದೆ’, ಎಂದು ಕೂಡ ಇದರಲ್ಲಿ ಹೇಳಲಾಗಿದೆ. ವಿಶೇಷವೆಂದರೆ ಈ ಹಿಂದೆ ಕೊಲಕತಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿಗಣನಮ್ ಇವರು ಕೂಡ ಈ ಗಲಭೆಗಳು ಪೂರ್ವಯೋಜಿತವಾಗಿರುವುದೆಂದು ಹೇಳಿದ್ದರು. ‘ಛಾವಣಿಯಿಂದ ಕಲ್ಲುತೂರಾಟ ಮಾಡಲಾಗಿದೆ, ಹಾಗಾದರೆ ಕಲ್ಲುಗಳನ್ನು ೧೦ ರಿಂದ ೧೫ ನಿಮಿಷದಲ್ಲಿ ಛಾವಣಿಯ ಮೇಲೆ ತೆಗೆದುಕೊಂಡು ಹೋಗಿರಲು ಖಂಡಿತವಾಗಿಯೂ ಸಾಧ್ಯವಿಲ್ಲ ?’, ಇದರ ಕಡೆ ಕೂಡ ಅವರು ಗಮನ ಸೆಳೆದಿದ್ದರು.

ಸತ್ಯಶೋಧನಾ ಸಮಿತಿಯ ವರದಿಯಲ್ಲಿನ ಕೆಲವು ಅಂಶಗಳು

೧. ಬಂಗಾಲದಲ್ಲಿನ ಹಿಂಸಾಚಾರಕ್ಕೆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಶ್ರೀರಾಮನವಮಿಯ ಒಂದು ದಿನದ ಹಿಂದೆ ಪ್ರಚೋದನಕಾರಿ ಭಾಷಣ ಮಾಡಿರುವುದು ಕಾರಣವಾಗಿದೆ. ಮಮತಾ ಬ್ಯಾನರ್ಜಿ ಇವರು ತಮ್ಮ ಭಾಷಣದಲ್ಲಿ ‘ಶ್ರೀ ರಾಮನವಮಿಯ ಮೆರವಣಿಗೆಯನ್ನು ಏನಾದರೂ ಮುಸಲ್ಮಾನರ ಪ್ರದೇಶದಿಂದ ಹೋದರೆ, ಆಗ ಕ್ರಮ ಕೈಗೊಳ್ಳಲಾಗುವುದು’, ಎಂದು ಎಚ್ಚರಿಕೆ ನೀಡಿದ್ದರು. ಇದರಿಂದ ಯಾವಾಗ ಮೆರವಣಿಗೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ಹೋಯಿತೋ, ಆಗ ಅಲ್ಲಿ ಅದರ ಮೇಲೆ ದಾಳಿ ಮಾಡಲಾಯಿತು. ಆ ಸಮಯದಲ್ಲಿ ಪೊಲೀಸರು ನಾಪತ್ತೆಯಾಗಿದ್ದರು.

೨. ಈ ಹಿಂಸಾಚಾರದ ನಂತರ ರಾಮಭಕ್ತರನ್ನು ತಪ್ಪಿತಸ್ಥರನ್ನಾಗಿ ಮಾಡುವುದಕ್ಕೆ ಮಮತಾ ಬ್ಯಾನರ್ಜಿಯವರು, ಕೊನೆ ಕ್ಷಣದಲ್ಲಿ ಭಕ್ತರು ಮಾರ್ಗ ಬದಲಾವಣೆ ಮಾಡಿದರು ಎಮದು ಹೇಳಿದ್ದರು. ಆದರೂ ಸತ್ಯಶೋಧನಾ ಸಮಿತಿ ಮಾತ್ರ ಅವರ ಈ ಆರೋಪ ತಿರಸ್ಕರಿಸಿದ್ದಾರೆ. ಹಿಂದೂಗಳು ಪೊಲೀಸರಿಗೆ ಮೊದಲೇ ಮಾರ್ಗ ತಿಳಿಸಿದ್ದರು ಮತ್ತು ಪೊಲೀಸರು ಕೂಡ ಅದಕ್ಕೆ ಅನುಮತಿ ನೀಡಿದ್ದರು, ಎಂದು ಸಮಿತಿ ಸ್ಪಷ್ಟಪಡಿಸಿದೆ.

೩. ಕಳೆದ ವರ್ಷ ನಡೆದಿರುವ ದಾಳಿಯ ಹಿನ್ನೆಲೆಯಲ್ಲಿ ಈ ವರ್ಷ ಕೂಡ ಮೆರವಣಿಗೆಯ ಮೇಲೆ ದಾಳಿಯಾಗುವ ಭಯದಿಂದ ಹಿಂದೂಗಳು ಹೆಚ್ಚುವರಿ ಸಂರಕ್ಷಣೆ ಕೇಳಿದ್ದರು; ಆದರೆ ಪೊಲೀಸರು ಹೆಚ್ಚುವರಿ ಸಂರಕ್ಷಣೆ ಪೂರೈಸಲಿಲ್ಲ. ಆದ್ದರಿಂದ ಮೆರವಣಿಗೆಯ ಮೇಲೆ ದಾಳಿ ನಡೆಯಿತು. ಪೊಲೀಸರು ಉದ್ದೇಶಪೂರ್ವಕವಾಗಿ ಗಲಭೆಕೋರರ ಮೇಲೆ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

೪. ಶ್ರೀರಾಮನವಮಿಯ ನಂತರ ಮಮತಾ ಬ್ಯಾನರ್ಜಿ ಇವರು ಯಾವುದೇ ವಿಚಾರಣೆ ನಡೆಸದೆ ಗಲಭೆಗೆ ಹಿಂದೂಗಳೇ ಹೊಣೆ ಎಂದು ಹೇಳುತ್ತಿದ್ದಾರೆ. ‘ರಂಜಾನದಲ್ಲಿ ಮುಸಲ್ಮಾನರು ಕೆಟ್ಟ ಕೃತ್ಯ ಮಾಡುವುದಿಲ್ಲ’, ಎಂದು ಅವರು ಹೇಳಿದರು. ಇದರಿಂದ ಗಲಭೇಕೊರ ಮುಸಲ್ಮಾನರಿಗೆ ಪ್ರೋತ್ಸಾಹ ಸಿಕ್ಕಿತು ಮತ್ತು ಮುಂದೆ ಕೆಲವು ದಿನ ಹಿಂಸಾಚಾರ ಮುಂದುವರೆಯಿತು. ಮಮತಾ ಬ್ಯಾನರ್ಜಿ ದ್ವೇಷಪೂರಿತ ಹೇಳಿಕೆಯ ಮೂಲಕ ಜನರಿಗೆ ಪ್ರಚೋದನೆ ನೀಡುತ್ತಿದ್ದರು. ಆದ್ದರಿಂದಲೇ ಗಲಭೆ ತಡೆಯಲಿಲ್ಲ.

೫. ಕೇಂದ್ರ ಭದ್ರತಾ ಪಡೆಯ ರಕ್ಷಣೆ ಇರುವಾಗಲೂ ಕೂಡ ಭಾಜಪದ ಸಂಸದ ಘೋಷ್ ಗಾಯಗೊಂಡಿದ್ದರು. ಇದರಿಂದ ರಾಜ್ಯದಲ್ಲಿನ ಪೊಲೀಸರ ಉದ್ದೇಶ ಸ್ಪಷ್ಟವಾಗುತ್ತದೆ. ರಾಜ್ಯ ಸರಕಾರ ಮತ್ತು ರಾಜ್ಯ ಪೊಲೀಸರ ಬೇಧಭಾವದಿಂದ ಸಂತ್ರಸ್ತ ಹಿಂದೂಗಳು ಪೊಲೀಸರ ಬಳಿ ಸಹಾಯ ಕೇಳುವುದಕ್ಕಾಗಿ ಹಾಗೂ ಭಯದಿಂದ ದೂರು ನೀಡುವುದಕ್ಕಾಗಿ ಹೋಗಲಿಲ್ಲ. ಪೋಲಿಸರು ಸಹಾಯ ಮಾಡುವ ಬದಲು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ನೀಡುತ್ತಿದ್ದರು. ಬಂಗಾಲದಲ್ಲಿನ ಜನರು ರಾಜ್ಯದಲ್ಲಿನ ಸರಕಾರಿ ವ್ಯವಸ್ಥೆಯ ರೌಡಿಗಳ ಭಯದಲ್ಲಿ ವಾಸಿಸಲು ಅಸಹಾಯಕರಾಗಿದ್ದಾರೆ.

೬. ರಾಜ್ಯದಲ್ಲಿನ ಪೊಲೀಸ ಅಧಿಕಾರಿಗಳು ಸರಕಾರವನ್ನು ಸಂತೋಷ ಪಡೆಸುವಲ್ಲಿ ತಲ್ಲಿನವಾಗಿದೆ. ಚಂದನನಗರ ಪೊಲೀಸ್ ಆಯುಕ್ತರು ಅಮಿತ್ ಜವಾಲಗಿ ಹಾಗೂ ಹಾವಡಾದ ಪೊಲೀಸ್ ಆಯುಕ್ತ ಪ್ರವೀಣ ತ್ರಿಪಾಠಿ ಇವರು ಸತ್ಯಶೋಧನಾ ಸಮಿತಿಗೆ ಗಲಭೆ ನಡೆದಿರುವ ಪ್ರದೇಶಕ್ಕೆ ತೆರಳಲು ಅನುಮತಿ ನೀಡಿರಲಿಲ್ಲ. ಆದರೂ ಕೂಡ ಸಮಿತಿ ಸಂತ್ರಸ್ತರಿಗೆ ಭೇಟಿಯಾಗಲು ಹೋದಾಗ ಪೊಲೀಸರು ಸಮಿತಿಯ ಸದಸ್ಯರನ್ನು ತಡೆದರು. ಒಂದು ಆಸ್ಪತ್ರೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಒಬ್ಬ ಹಿಂದೂವಿನ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲಿಲ್ಲ. ಗಲಭೆಯ ಸಮಯದಲ್ಲಿ ಸಂತ್ರಸ್ತ ಹಿಂದೂಗಳು ಪೊಲೀಸರಿಗೆ ಕರೆ ಮಾಡಿದರೇ ಪೊಲೀಸರು ಅದನ್ನು ಸ್ವೀಕರಿಸಲಿಲ್ಲ. ಪೊಲೀಸ ಠಾಣೆಯ ಸಮೀಪವಿರುವ ಪ್ರದೇಶದಲ್ಲಿ ಮತಾಂಧ ಮುಸಲ್ಮಾನರು ಹಿಂಸಾಚಾರ ನಡೆಸುತ್ತಿದ್ದರು.

ಸತ್ಯಶೋಧನಾ ಸಮಿತಿಯ ವರದಿಯಲ್ಲಿನ ನಿಷ್ಕರ್ಷ

೧. ಗಲಭೆಖೋರರಿಗೆ ರಾಜ್ಯ ಸರಕಾರದ ಬೆಂಬಲವಿತ್ತು.
೨. ಪೊಲೀಸರಿಗೆ ಮೆರವಣಿಗೆಯ ಮಾರ್ಗ ತಿಳಿದಿತ್ತು. ಈ ಹಿಂದೆಯೂ ಕೂಡ ಗಲಭೆ ನಡೆದಿರುವುದು ತಿಳಿದಿದ್ದರೂ ಕೂಡ ಪೊಲೀಸರು ಈ ವರ್ಷದ ಮೆರವಣಿಗೆಗೆ ಸಂರಕ್ಷಣೆ ನೀಡಲಿಲ್ಲ.
೩. ರಾಜ್ಯ ಪೊಲೀಸ ರಾಜಕೀಯ ಲಾಭಕ್ಕಾಗಿ ಪ್ರೇರಿತರಾಗಿದ್ದಾರೆ.

ಸಮಿತಿಯ ಬೇಡಿಕೆಗಳು

೧. ಗಲಭೇಖೋರರ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು.
೨. ಗಲಭೆಯ ವಿಚಾರಣೆ ನಿಸ್ಪಕ್ಷ ವಾಗಿ ನಡೆಯಬೇಕು, ಅದಕ್ಕಾಗಿ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಗೆ ಒಪ್ಪಿಸಬೇಕು.
೩. ಭಯದಲ್ಲಿ ಬದುಕುತ್ತಿರುವ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು.
೪. ಅಮಾಯಕ ಸಂತ್ರಸ್ತರ ವಿರುದ್ಧ ದಾಖಲಾಗಿರುವ ಸುಳ್ಳು ಆರೋಪ ಹಿಂಪಡೆಯಬೇಕು.
೫. ಜನರಿಗೆ ಪೊಲೀಸರ ಮೇಲಿನ ವಿಶ್ವಾಸ ಕಡಿಮೆ ಆಗಿರುವುದರಿಂದ ಗಲಭೆ ನಡೆದಿರುವ ಪ್ರದೇಶದಲ್ಲಿ ಕೇಂದ್ರ ಭದ್ರತಾ ಪಡೆಯನ್ನು ನೇಮಿಸಬೇಕು.

ಸಂಪಾದಕೀಯ ನಿಲುವು

ಭಾಜಪ ಆಡಳಿತ ಇರುವ ರಾಜ್ಯದಲ್ಲಿ ಈ ರೀತಿಯ ಗಲಭೆ ನಡೆದಿದ್ದರೆ, ಇಷ್ಟೊತ್ತಿಗೆ ದೇಶದಲ್ಲಿನ ಎಲ್ಲಾ ಕಪಟ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರ ರಾಜಕೀಯ ಪಕ್ಷ ಮತ್ತು ಸಂಘಟನೆ ಇವರು ಆಕಾಶ ಪಾತಾಳ ಒಂದು ಮಾಡುತ್ತಿದ್ದರು; ಆದರೆ ಹಿಂದೂಗಳ ಮೇಲೆ ದಾಳಿ ಆಗಿದ್ದರಿಂದ ಮತ್ತು ಮಮತಾ ಬ್ಯಾನರ್ಜಿ ಸರಕಾರವು ಮತಾಂಧ ಮುಸಲ್ಮಾನರನ್ನು ಬೆಂಬಲಿಸುತ್ತಿದ್ದರಿಂದ ಅವರು ಶಾಂತವಾಗಿದ್ದಾರೆ, ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು !