ಭಿವಂಡಿ (ಥಾಣೆ) ನಲ್ಲಿರುವ ಐತಿಹಾಸಿಕ ವಜ್ರೇಶ್ವರಿ ದೇವಸ್ಥಾನದ ಮೇಲ್ವಿಚಾರಕರಾಗಿ ಕ್ರೈಸ್ತ ವ್ಯಕ್ತಿ ನೇಮಕ !

ಠಾಣೆ – ಭಿವಂಡಿ ತಾಲೂಕಿನ ಪ್ರಾಚೀನ ಶ್ರೀ ವಜ್ರೇಶ್ವರಿ ಯೋಗಿನಿದೇವಿ ಸಂಸ್ಥಾನದ ಮೇಲ್ವಿಚಾರಕ ಮತ್ತು ಜನಸಂಪರ್ಕ ಅಧಿಕಾರಿಯೆಂದು ಫ್ರಾನ್ಸಿಸ್ ಜೊಸೆಫ ಲೆಮಾಸ ಇವರನ್ನು ನೇಮಿಸಲಾಗಿದೆ. ಶ್ರೀ ವಜ್ರೇಶ್ವರಿ ಯೋಗಿನಿದೇವಿ ಸಂಸ್ಥಾನದ ಅಧ್ಯಕ್ಷರಿಂದ ಈ ಕುರಿತು ಅಧಿಕೃತ ಆದೇಶದ ಪತ್ರವನ್ನೂ ಫ್ರಾನ್ಸಿಸ್ ಜೊಸೆಫ್ ಲೆಮಾಸ ಇವರಿಗೆ ಕಳುಹಿಸಲಾಗಿದೆ. ದೇವಸ್ಥಾನಕ್ಕೆ ಬರುವ ಅರ್ಪಣೆದಾರರು ಮತ್ತು ಅತಿ ಮಹತ್ವದ ವ್ಯಕ್ತಿಗಳಿ, ಸರಕಾರಿ ಅಧಿಕಾರಿಯವರ ಸ್ವಾಗತ ಮತ್ತು ಉಪಚಾರ ಮಾಡುವುದು, ನ್ಯಾಯಾಲಯದ ಕಾರ್ಯ, ದೇವಸ್ಥಾನದ ಭೂಮಿಯ ಮೇಲುಸ್ತುವಾರಿ ಹಾಗೆಯೇ ದೇವಸ್ಥಾನದ ವ್ಯವಸ್ಥಾಪಕ ಮಂಡಳಿಗೆ ಸಹಾಯ ಮಾಡುವುದು ಮುಂತಾದ ಜವಾಬ್ದಾರಿಯನ್ನು ಫ್ರಾನ್ಸಿಸ ಜೊಸೆಫ ಲೆಮಾಸ ಇವರಿಗೆ ವಹಿಸಲಾಗಿದೆ.

ಈ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ `ಒಂದಾದರೂ ಚರ್ಚ ಅಥವಾ ಮಶೀದಿಯ ಮೇಲ್ವಿಚಾರಕವೆಂದು ಹಿಂದೂ ವ್ಯಕ್ತಿಯನ್ನು ನಿಯೋಜಿಸಲಾಗಿದೆಯೇ?’ ಎಂದು ಪ್ರಶ್ನಿಸುತ್ತಾ ಧರ್ಮಪ್ರೇಮಿ ಹಿಂದೂಗಳಿಂದ ತೀವ್ರ ಆಕ್ರೋಷ ವ್ಯಕ್ತವಾಗುತ್ತಲಿದೆ.

ವಿಶ್ವಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲ !

ಈ ಪ್ರಕರಣದ ವಿಷಯದಲ್ಲಿ ಪ್ರತಿಕ್ರಿಯೆಯನ್ನು ಪಡೆಯಲು ದೈನಿಕ `ಸನಾತನ ಪ್ರಭಾತ’ ಪತ್ರಿಕೆಯ ಪ್ರತಿನಿಧಿಗಳು ಶ್ರೀ ವಜ್ರೇಶ್ವರಿ ಯೋಗಿನಿದೇವಿ ಸಂಸ್ಥಾನದ ವಿಶ್ವಸ್ಥರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಎತ್ತಲಿಲ್ಲ.

ಶ್ರೀ ವಜ್ರೇಶ್ವರಿ ದೇವಸ್ಥಾನದ ಮಹತ್ವ !

ಶ್ರೀ ವಜ್ರೇಶ್ವರಿ ದೇವಿಯ ದೇವಸ್ಥಾನವು ಅಪ್ರತಿಮ ವಾಸ್ತುಕಲೆಯ ಮಾದರಿಯಾಗಿದೆ. ಬಿಸಿ ನೀರಿನ ಬುಗ್ಗೆಗಾಗಿ ವಜ್ರೇಶ್ವರಿ ಈ ಸ್ಥಳ ಪ್ರಸಿದ್ಧವಾಗಿದೆ. ಮಹಾರಾಷ್ಟ್ರ ಸರಕಾರವು ಈ ದೇವಸ್ಥಾನವನ್ನು `ಧಾರ್ಮಿಕ ಪ್ರವಾಸಿ ಸ್ಥಳ’ವೆಂದು ಪರಿಗಣಿಸಿದ್ದು, ದೇವಸ್ಥಾನ ಮತ್ತು ಸುತ್ತಲಿನ ಪರಿಸರವನ್ನು ರಾಜ್ಯ ಸರಕಾರದಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ನಾಥ ಸಂಪ್ರದಾಯದ ಮಧ್ಯಯುಗದ ಸಂಸ್ಕೃತಿಯಲ್ಲಿ ಶ್ರೀ ವಜ್ರೇಶ್ವರಿ ದೇವಸ್ಥಾನದ ಉಲ್ಲೇಖ ಕಂಡುಬರುತ್ತದೆ. ವಜ್ರೇಶ್ವರಿದೇವಿಯ ಹಳೆಯ ದೇವಸ್ಥಾನ ಇಲ್ಲಿಯ ಜುಂಗಕಾಟಿ ಗ್ರಾಮದಲ್ಲಿತ್ತು. ಸಧ್ಯದ ದೇವಸ್ಥಾನ ಚಿಮಾಜಿ ಅಪ್ಪಾ ಇವರು ನಿರ್ಮಾಣ ಮಾಡಿರುವುದಾಗಿ ಐತಿಹಾಸಿಕ ಸಂದರ್ಭ ಉಪಲಬ್ಧವಿದೆ.

ಸಂಪಾದಕೀಯ ನಿಲುವು

  • ಹಿಂದೂಗಳಲ್ಲಿನ ಧರ್ಮಶಿಕ್ಷಣ ಅಭಾವದ ಪರಿಣಾಮ !
  • ದೇವಸ್ಥಾನದ ಮೇಲ್ವಿಚಾರಕರಾಗಿ ಒಬ್ಬ ಹಿಂದೂ ವ್ಯಕ್ತಿ ಸಿಗುವುದಿಲ್ಲ ಎನ್ನುವ ವಿಷಯದಲ್ಲಿ ಹಿಂದೂಗಳು ಗಂಭೀರವಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ !
  • ಇತರೆ ಪಂಥದವರ ಪ್ರಾರ್ಥನಾ ಸ್ಥಳದಲ್ಲಿ ಹಿಂದೂಗಳನ್ನು ಎಂದಾದರೂ ಈ ರೀತಿ ನಿಯೋಜಿಸಲಾಗಿದೆಯೇ ?