ಭಟಿಂಡಾ (ಪಂಜಾಬ್) ಇಲ್ಲಿಯ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರ ಸಾವು

ಭಯೋತ್ಪಾದಕ ದಾಳಿಯಾಗಿರದೇ ಆಂತರಿಕ ವಿವಾದದಿಂದ ನಡೆದಿರುವ ಘಟನೆ ಎಂದು ದಾವೆ

ಭಟಿಂಡಾ (ಪಂಜಾಬ) – ಇಲ್ಲಿಯ ಮಿಲಿಟರಿ ಸ್ಟೇಷನ್ ಮೇಲೆ ಏಪ್ರಿಲ್ ೧೨ ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರು ಸಾವನ್ನಪ್ಪಿದ್ದಾರೆ. ‘ಈ ಘಟನೆ ಏಕೆ ಮತ್ತು ಯಾರು ನಡೆಸಿದ್ದಾರೆ ?’, ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಇದು ಭಯೋತ್ಪಾದಕ ದಾಳಿಯಾಗಿರದೇ ಈ ಗುಂಡಿನ ದಾಳಿ ಆಂತರಿಕ ವಿವಾದದಿಂದ ನಡೆದಿದೆ ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ನಡೆಸುವವರು ಸಾಮಾನ್ಯ ಉಡುಪಿನಲ್ಲಿ ಇದ್ದರು. ಪಂಜಾಬ್ ಪೋಲಿಸರ ಮೂಲಗಳ ಪ್ರಕಾರ, ೨ ದಿನಗಳ ಹಿಂದೆ ಒಂದು ರೈಫಲ್ ಮತ್ತು ೨೮ ಗುಂಡುಗಳು ನಾಪತ್ತೆಯಾಗಿದ್ದವು. ಈ ಘಟನೆಯ ಹಿಂದೆ ಸೈನ್ಯದಲ್ಲಿ ಯಾರಾದರೂ ಇರಬಹುದು, ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

೧. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಈ ಘಟನೆಯ ಬಗ್ಗೆ ಸೈನ್ಯದಿಂದ ವರದಿ ಕೇಳಿದ್ದಾರೆ. ಪಂಜಾಬ್ ಸರಕಾರವು ಭಟಿಂಡಾ ಪೊಲೀಸರಿಂದ ಕೂಡ ವರದಿ ಕೇಳಿದೆ. ಈ ಮಿಲಿಟರಿ ಸ್ಟೇಷನ್ ನಲ್ಲಿ ಸೈನಿಕರ ಕುಟುಂಬದವರು ವಾಸಿಸುತ್ತಾರೆ. ಈ ಘಟನೆಯ ನಂತರ ಸೈನ್ಯದಿಂದ ಎಲ್ಲರಿಗೂ ತಮ್ಮ ತಮ್ಮ ಮನೆಯಲ್ಲಿ ಇರಲು ಹೇಳಲಾಗಿದೆ. ಶಾಲೆಗಳು ಕೂಡ ಮುಚ್ಚಲಾಗಿದೆ.

೨. ಭಟಿಂಡಾ ನೆಲೆ ಇದು ಏಷ್ಯಾ ಖಂಡದಲ್ಲೇ ಎಲ್ಲಕ್ಕಿಂತ ದೊಡ್ಡ ಮಿಲಿಟರಿ ಸ್ಟೇಷನ್ ಆಗಿದೆ. ಈ ಸ್ಟೆಷನ್ ನ ಗಡಿ ಸುಮಾರು ೪೫ ಕಿಲೋಮೀಟರ್ ಇದೆ. ಇಲ್ಲಿರುವ ಗುಂಡು ಮದ್ದು ಸಂಗ್ರಹವು ದೇಶದಲ್ಲಿನ ಎಲ್ಲಕ್ಕಿಂತ ದೊಡ್ಡ ಡಿಪೋಗಳಲ್ಲಿ ಒಂದಾಗಿರುವುದು ಎಂದು ಹೇಳಲಾಗುತ್ತಿದೆ.