ಕೊಲಕಾತಾದಲ್ಲಿ ಸಿಗರೇಟ್ ಕೈಯಲ್ಲಿ ಹಿಡಿದು ರಾಷ್ಟ್ರಗೀತೆ ಹೇಳುವ ೨ ಅಪ್ರಾಪ್ತ ಹುಡುಗಿಯರ ವಿರುದ್ಧ ದೂರು ದಾಖಲು !

ಇಂತಹವರಿಗೆ ಕಠಿಣ ಶಿಕ್ಷೆ ಆಗಲೇಬೇಕು !

ಕೊಲಕಾತಾದಲ್ಲಿ ಸಿಗರೇಟ್ ಕೈಯಲ್ಲಿ ಹಿಡಿದು ರಾಷ್ಟ್ರಗೀತೆ ಹೇಳುವ ೨ ಅಪ್ರಾಪ್ತ ಹುಡುಗಿಯರು

ಕೊಲಕಾತಾ (ಬಂಗಾಲ) – ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಇಬ್ಬರು ಹುಡುಗಿಯರು ಸಿಗರೇಟ್ ಕೈಯಲ್ಲಿ ಹಿಡಿದು ರಾಷ್ಟ್ರಗೀತೆ ಹೇಳುತ್ತ ಅದರ ಅವಮಾನ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈ ಹುಡುಗಿಯರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಇಬ್ಬರು ಹುಡುಗಿಯರು ಅಪ್ರಾಪ್ತರಾಗಿದ್ದಾರೆ. ಈ ವಿಡಿಯೋ ಪ್ರಸಾರವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಟೀಕೆಗಳು ಆರಂಭವಾದ ನಂತರ ಹುಡುಗಿಯರು ಅದನ್ನು ಡಿಲೀಟ್ ಮಾಡಿದ್ದಾರೆ. ರಾಷ್ಟ್ರಗೀತೆ ಅವಮಾನ ಮಾಡುವವರಿಗೆ ೩ ವರ್ಷದ ಜೈಲು ಶಿಕ್ಷೆಯ ವ್ಯವಸ್ಥೆ ಇದೆ.

(ಸೌಜನ್ಯ : ಇಂಡಿಯಾ ಟುಡೇ)

ಈ ಮೇಲಿನ ವೀಡಿಯೊ ಪ್ರಕಟಿಸುವುದರ ಉದ್ದೇಶ ಯಾರ ರಾಷ್ಟ್ರೀಯತಾವಾದಿ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು