Jai Shree Ram : ‘ಜೈ ಶ್ರೀರಾಮ’ ಹೇಳಿದ್ದಕ್ಕೆ ಹಿಂದೂಗಳಿಗೆ ಜೈಲುವಾಸ !

ಸ್ಥಳೀಯ ಮುಸಲ್ಮಾನ ಸಮಾಜದ ಒತ್ತಡದಿಂದ ಪೊಲೀಸರು ಕ್ರಮ ಕೈಗೊಂಡಿರುವ ಆರೋಪ !

ಮೀರಾರೋಡ (ಠಾಣೆ ಜಿಲ್ಲೆ) – ಹನುಮಾನ ಜಯಂತಿಯ ದಿನದಂದು ಇಲ್ಲಿಯ ನಯನಗರ ಪ್ರದೇಶದಲ್ಲಿ ಸಾರ್ವಜನಿಕ ಲೋಹ ರಸ್ತೆಯಲ್ಲಿನ ಮಹಮ್ಮದೀ ಮಸೀದಿಯ ಹತ್ತಿರ ಕೆಲವು ಹಿಂದೂಗಳು ಬೈಕ ಮೇಲೆ ಕೇಸರಿ ಧ್ವಜ ಹಿಡಿದು ‘ಜೈ ಶ್ರೀರಾಮ’ನ ಘೋಷಣೆ ನೀಡುತ್ತಾ ಹೋಗುತ್ತಿದ್ದರು. ಈ ಪ್ರಕರಣದಲ್ಲಿ ೪ ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಉಪಸ್ಥಿತರಿದ್ದ ಮುಸಲ್ಮಾನ ಸಮಾಜದ ಒತ್ತಡದಿಂದ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಯುವಕರಿಗೆ ನ್ಯಾಯಾಲಯವು ಏಪ್ರಿಲ್ 10 ರಂದು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ‘ಹಿಂದೂ ಟಾಸ್ಕ್ ಫೋರ್ಸ್’ನ ಸಂಸ್ಥಾಪಕ ಮತ್ತು ಧರ್ಮಾಭಿಮಾನಿ ನ್ಯಾಯವಾದಿ ಖುಷ್ ಖಂಡೆಲವಾಲ ಇವರು ಈ ಯುವಕರಿಗೆ ಉಚಿತ ಕಾನೂನ ಸಹಾಯ ಮಾಡಿದರು. (ಇಂತಹ ಹಿಂದೂ ನ್ಯಾಯವಾದಿಗಳೇ ಹಿಂದೂ ಧರ್ಮದ ಶಕ್ತಿ ! – ಸಂಪಾದಕರು)

ಈ ಘಟನೆ ನಡೆದ ಪರಿಸರವು ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿವಾಗಿದೆ. ಈ ಘಟನೆಯಲ್ಲಿ ಹಿಂದೂ ಯುವಕರು ಬೈಕ್ ಮೇಲೆ ಹೋಗುವಾಗ ಅಲ್ಲಿ ನೆರೆದಿದ್ದ ಮುಸಲ್ಮಾನ ಗುಂಪಿನವರು ಅವರನ್ನು ಹಿಡಿದರು ಮತ್ತು ಪೊಲೀಸರಿಗೆ ಒಪ್ಪಿಸಿದರು. ಕೆಲವು ಸಮಯದಲ್ಲಿ ಅವರ ಪರಿಸರದಲ್ಲಿ ಗಸ್ತು ಹಾಕುವ ಪೊಲೀಸರು ಕೂಡ ಘಟನಾಸ್ಥಳಕ್ಕೆ ತಲುಪಿದರು ಮತ್ತು ಅವರು ಐ.ಪಿ.ಸಿ.ಯ ಕಲಂ ೧೫೩ ಎ (ಯಾವುದಾದರೊಂದು ಧರ್ಮ, ಸಮೂಹ ಅಥವಾ ವಂಶ ಇದರ ಮೇಲೆ ಆಘಾತ ಮಾಡುವುದು), ೧೪೩ ಮತ್ತು ೧೨೦ ಬಿ ನೊಂದಾಯಿಸಿ ಕೂಡಲೇ ಎಫ್.ಐ.ಆರ್. ದಾಖಲಿಸಲಾಯಿತು.

ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುವಾಗ ನ್ಯಾಯವಾದಿ ಖುಷ್ ಖಡೇಲವಾಲ್ ಇವರು,

ನ್ಯಾಯವಾದಿ ಖುಷ್ ಖಂಡೆಲವಾಲ

೧. ‘ಜೈ ಶ್ರೀರಾಮ’ ಘೋಷಣೆ ನೀಡಿರುವುದರಿಂದ ಬಂದಿಸುವುದು ಇದು ‘೧೫೩ ಎ’ ಅಥವಾ ಬೇರೆ ಯಾವುದೇ ಕಲಂ ಅನ್ವಯಿಸುವುದಿಲ್ಲ. ‘ಜೈ ಶ್ರೀರಾಮ’ ಘೋಷಣೆ ಕೂಗುವುದು ಅಪರಾಧವಾಗಿದ್ದರೆ, ಪ್ರತಿದಿನ ಬೋಗಾದ ಮೇಲೆ ಅಜಾನ್ ನಿಂದ ಹಿಂದೂಗಳಿಗೆ ಪೂಜೆಯಲ್ಲಿ ಅಡಚಣೆ ಉಂಟಾಗುತ್ತದೆ ಹಾಗೂ ಶಬ್ದ ಮಾಲೀನ್ಯದಿಂದ ಎಲ್ಲಾ ನಾಗರಿಕರಿಗೆ ತೊಂದರೆ ನೀಡುವ ಈ ಪ್ರಕರಣದಲ್ಲಿ ಮಸೀದಿಯ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು.

೨. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ ದೇಶ ‘ಪ್ರಾದೇಶಿಕ ದೃಷ್ಟಿಯಿಂದ ಜಾತ್ಯತೀತ’ ಎನ್ನುತ್ತಾರೆ. ಆದ್ದರಿಂದ ‘ಇಂತಹ ಕ್ಷೇತ್ರದಲ್ಲಿ ಮುಸಲ್ಮಾನ ಬಹುಸಂಖ್ಯಾತರಿದ್ದಾರೆ’, ಈ ಕಾರಣ ನೀಡಿ ಅಲ್ಲಿ ವಾಸಿಸುವ ಹಿಂದೂ ಧರ್ಮದ ಅಥವಾ ಬೇರೆ ಪಂಥದ ಜನರ ವಿರುದ್ಧ ದೂರು ದಾಖಲಿಸುವುದು ತಪ್ಪಾಗಿದೆ.

೩. ದೂರು ದಾಖಲಿಸಿ ಹಿಂದೂಗಳಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡುವವರ ವಿರುದ್ಧ ನಾವು ಕಾನೂನ ರೀತಿಯ ಹೋರಾಟ ಮುಂದುವರೆಸುವೆವು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ದೇಶದಲ್ಲಿ ಹಿಂದೂಗಳಿಗೆ ಅವರ ದೇವತೆಯ ಜೈ ಘೋಷವನ್ನೂ ಮಾಡಲು ಕೂಡ ಸಾಧ್ಯವಿಲ್ಲ. ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಮುಸಲ್ಮಾನರ ಒತ್ತಡದಿಂದ ಪೋಲೀಸರು ಹಿಂದೂಗಳನ್ನು ಕೂಡಲೇ ಬಂಧಿಸುತ್ತಾರೆ. ಆದರೆ ಹಿಂದೂಗಳು ಪೊಲೀಸರಲ್ಲಿ ಎಷ್ಟೇ ಬೇಡಿದರೂ ಪೊಲೀಸರು ಮತಾಂಧರ ವಿರುದ್ಧ ದೂರು ದಾಖಲಿಸಿಕೊಳ್ಳುವುದಿಲ್ಲ, ಇದನ್ನು ತಿಳಿಯಬೇಕು !

ಹಿಂದೂತ್ವನಿಷ್ಠ ಸರಕಾರದ ಕಾಲದಲ್ಲಿ ದೇವರ ಜೈ ಘೋಷ ಮಾಡುವ ಯುವಕರ ಮೇಲೆ ದೂರು ದಾಖಲಾಗಿ ಅವರಿಗೆ ೫ ದಿನ ಜೈಲಿನಲ್ಲಿ ಇರಬೇಕಾಗುವುದು, ಇದು ದುರ್ದೈವ ! ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರದಲ್ಲಿ ಈ ರೀತಿ ನಡೆಯುವುದು, ಇದು ಖೇದಕರವಾಗಿದೆ !