(ಇಮಾಮ್ ಅಂದರೆ ಮಸೀದಿಯಲ್ಲಿ ಪ್ರಾರ್ಥನೆಯನ್ನು ನಡೆಸುವ ನಾಯಕ)
ಇಸ್ಲಾಂ ನನ್ನು ಅವಮಾನಿಸಿದ ಆರೋಪ
ನ್ಯೂಜೆರ್ಸಿ – ನಗರದ ಪ್ಯಾಟರ್ಸನ್‌ನಲ್ಲಿರುವ ಒಮರ್ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆಯ ವೇಳೆ ಮುಸ್ಲಿಂ ಯುವಕ ಶೆರಿಫ್ ಜೋರಬಾ ಯುವಕನು ಇಮಾಮ್ ಸಯ್ಯದ್ ಎಲ್ನಾಕಿಬ್‌ಗೆ ಚಾಕುವಿನಿಂದ ಇರಿದಿದ್ದಾನೆ. ಈ ಯುವಕ ತುರ್ಕಿ ಮೂಲದವನು. ‘ಇಮಾಮ್ ಸೈಯ್ಯದ್ ಎಲ್ನಾಕಿಬ್ ಇಸ್ಲಾಂ’ನ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರಿಂದ ನಾನು ಹೀಗೆ ಮಾಡಿದೆ. ನಾನು ಇಮಾಮ್‌ನ ಮನೆಗೆ ನುಗ್ಗಿ ಅವನನ್ನು ಕೊಲ್ಲಲು ಬಯಸಿದ್ದೆ. ಅವನು ಇಸ್ಲಾಂನ ಅವಮಾನಿಸಿದ್ದಾನೆ’ ಎಂದು ಆರೋಪಿಸಿದರು. ದಾಳಿಯ ವೇಳೆ ೨೦೦ ಮಂದಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು. ಜನರು ಜೋರ್ಬಾನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಎಲ್ನಾಕಿಬ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಒಮರ್ ಮಸೀದಿ ಇರುವ ಪ್ರದೇಶದ ಸುತ್ತಲೂ ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಈ ಘಟನೆಯ ನಂತರ ಸ್ಥಳೀಯ ಮುಖಂಡ ಅಬ್ದೆಲ್ ಅಝೀಝ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ‘ಮುಸ್ಲಿಮರು ಒಗ್ಗೂಢಬೇಕೆಂದು’ ಮನವಿ ಮಾಡಿದ್ದಾರೆ.