ಭಿಂಡ – ನಾನು ಭಾಜಪದ ಬೆಂಬಲಿಗನೆಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ಇದು ತಪ್ಪು. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ. ಯಾರು ಸನಾತನ ಧರ್ಮ ಮತ್ತು ಹಿಂದೂ ರಾಷ್ಟ್ರದ ವಿಷಯದಲ್ಲಿ ಮಾತನಾಡುತ್ತಾರೆಯೋ, ಅವರನ್ನು ನಾನು ಬೆಂಬಲಿಸುತ್ತೇನೆ ಎಂದು ಯೋಗ ಋಷಿ ರಾಮದೇವಬಾಬಾರವರು ಹೇಳಿದರು. `ನಾನು ವೈರಾಗಿಯಾಗಿದ್ದೇನೆ. ನನಗೆ ಯಾರೊಂದಿಗೂ ಏನೂ ಕೊಡು-ಕೊಳ್ಳುವಿಕೆಯಿಲ್ಲ. ಯಾರು ಅಧಿಕಾರದಲ್ಲಿದ್ದಾರೆಯೋ ಮತ್ತು ಅವರು ಸನಾತನ ಧರ್ಮದೊಂದಿಗೆ ನಿಷ್ಠೆಯನ್ನು ಹೊಂದಿದ್ದಾರೆಯೋ ಅವರನ್ನು ನೀವು ಬೆಂಬಲಿಸಿರಿ’, ಎಂದೂ ಅವರು ಜನತೆಗೆ ಕರೆ ನೀಡಿದರು. ಭಿಂಡ ಜಿಲ್ಲೆಯ ಲಹರನಲ್ಲಿ ಸ್ವಾಮಿ ಚಿನ್ಮಯಾನಂದ ಬಾಪು ಇವರು ಆಯೋಜಿಸಿದ್ದ 7 ದಿನಗಳ ಭಾಗವತ ವಾಚನದ ಕಾರ್ಯಕ್ರಮದಲ್ಲಿ ರಾಮದೇವಬಾಬಾ ಭಾಗವಹಿಸಿದ್ದರು.
बाबा रामदेव बोले- हमारे और मुस्लिमों के पूर्वज एक: कहा-मैं भाजपा का समर्थक नहीं, जो हिंदू राष्ट्र का समर्थन करे उसका साथ दें#BabaRamdev #MadhyaPradesh https://t.co/Q6gGfOQD8G pic.twitter.com/LxVNaHsmyK
— Dainik Bhaskar (@DainikBhaskar) April 11, 2023
ಅವರು ಮಾತನ್ನು ಮುಂದುವರಿಸುತ್ತಾ, ಹಿಂದೂ ಮತ್ತು ಮುಸಲ್ಮಾನರ ಪೂರ್ವಜರು ಒಂದೇ ಆಗಿದ್ದರು. ಅವರು (ಮುಸಲ್ಮಾನರು) ಒಪ್ಪದಿದ್ದರೂ ಹಿಂದೂಗಳು ಅವರನ್ನು ತಮ್ಮವರೆಂದು ತಿಳಿಯುತ್ತಾರೆ. ಭಾರತದಲ್ಲಿ ಔರಂಗಜೇಬನ ಆಡಳಿತದ ಕಾಲಾವಧಿಯಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಿಸಿತು. ಅದಕ್ಕಿಂತ ಮೊದಲು ಇಲ್ಲಿ ಎಲ್ಲರೂ ಹಿಂದೂಗಳಾಗಿದ್ದರು ಎಂದು ಹೇಳಿದರು.