|
ಜಯಪುರ (ರಾಜಸ್ಥಾನ) – ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಕಾಂಗ್ರೆಸ್ಸಿನ ಮುಖಂಡರಾಗಿರುವ ಸಚಿನ ಪೈಲಟ್ ಇವರು ಟೀಕಿಸಿದ್ದಾರೆ. ಸರಕಾರ ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಕೊಳ್ಳುತ್ತಿಲ್ಲವೆಂದು ಆರೋಪಿಸುತ್ತಾ, ಅವರು ಎಪ್ರಿಲ್ 11 ರಂದು ಒಂದು ದಿನದ ಉಪವಾಸ ಮಾಡುವುದಾಗಿ ಘೋಷಿಸಿದರು.
Gehlot vs Pilot: गहलोत-पायलट जंग से फिर मुश्किल में आलाकमान, जानें CM पद के घमासान से लेकर अब तक क्या-क्या हुआ#AshokGehlot#SachinPilot#RajasthanPoliticshttps://t.co/t6ibbJf9Aw
— Amar Ujala (@AmarUjalaNews) April 10, 2023
ಸಚಿನ ಪೈಲಟ್ ಇವರು ಮುಖ್ಯಮಂತ್ರಿ ಅಶೋಕ ಗೆಹ್ಲೋತ್ ಇವರನ್ನು, ಭಾಜಪದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಅವರು ಭಾಜಪ ಮುಖಂಡರು ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಯವರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭಾಜಪ ಮಾಡಿರುವ ಹಗರಣಗಳನ್ನು ಗೆಹ್ಲೋತ್ ಸರಕಾರ ಮುಚ್ಚಿಡುತ್ತಿದೆಯೆಂದು ಹೇಳಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ ಸರಕಾರ ಭ್ರಷ್ಟಾಚಾರಿಗಳನ್ನು ಯಾವಾಗಲೂ ರಕ್ಷಿಸುತ್ತಿದೆ, ಬೊಫೋರ್ಸ, 2-ಜಿ, ಕಲ್ಲಿದ್ದಲು, ರಾಷ್ಟ್ರಕುಲ, ಆದರ್ಶ ಮುಂತಾದ ಅನೇಕ ಹಗರಣ ಕಂಡು ಬಂದಿದೆ. ಈ ವಿಷಯದಲ್ಲಿ ಸಚಿನ ಪೈಲಟ್ ಮತ್ತು ಇತರೆ ಕಾಂಗ್ರೆಸ್ಸಿಗರು ಎಂದಿಗೂ ಬಾಯಿ ಬಿಡುವುದಿಲ್ಲ ! |