ನವ ದೆಹಲಿ – ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬ ಅನಗತ್ಯ ವಿದೇಶಿ ಉದ್ಯಮಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು ಇದರ ೧೦ ಉದಾಹರಣೆಗಳನ್ನು ನೀಡಬಲ್ಲೆ. ವಿದೇಶದಲ್ಲಿ ಯಾರನ್ನು ಭೇಟಿ ಮಾಡಲು ಹೋಗುತ್ತಾರೆ ಎಂಬುದು ನಮಗೆ ಗೊತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿದ್ದಾರೆ. ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ಸೇರಿದಂತೆ ೫ ನಾಯಕರನ್ನು ರಾಹುಲ್ ಗಾಂಧಿ ಗುರಿಯಾಗಿಸಿದ್ದಾರೆ. ಆಜಾದ್ ಮೇಲಿನ ಹೇಳಿಕೆಯನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದರು.
अवांछित कारोबारियों से हैं राहुल के रिश्ते, मिलने जाते हैं विदेश: आजाद#GhulamNabiAzad #RahulGhandi https://t.co/V1vKMALn2S
— Hindustan (@Live_Hindustan) April 10, 2023
ಆಝಾದ್ ತಮ್ಮ ಮಾತನ್ನು ಮುಂದುವರೆಸುತ್ತಾ, ‘ಭಾರತ್ ಜೋಡೋ’ ಪ್ರವಾಸದ ನಂತರ ರಾಹುಲ್ ಗಾಂಧಿಯವರ ಪ್ರಭಾವ ಹೆಚ್ಚಾಯಿತು ಎಂದು ಹಲವರು ಹೇಳುತ್ತಾರೆ; ಆದರೆ ನಾನು ಹಾಗೆ ಅನಿಸುವುದಿಲ್ಲ; ಏಕೆಂದರೆ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯಕ್ಕೆ ಹೋದಾಗ ಅವರ ಜೊತೆ ಯಾವುದೇ ಯುವಕ ಅಥವಾ ರೈತ ಇರಲಿಲ್ಲ ಎಂದು ಆಜಾದ್ ಅವರು ಹೇಳಿದರು.