ಬೆಂಗಳೂರಿನಲ್ಲಿನ ಕಾಂಗ್ರೆಸ್ಸಿನ ಮುಸಲ್ಮಾನ ಶಾಸಕರಿಂದ ೩೬೦ ಕ್ಕಿಂತಲೂ ಹೆಚ್ಚು ಹಿಂದೂಗಳ ಸಮಾಧಿಗಳು ಧ್ವಂಸ !

ಸ್ಮಶಾನದಲ್ಲಿ ಅಕ್ರಮ ಕಾಮಗಾರಿ ನಡೆಸುವಾಗ ಸಮಾಧಿಗಳು ಧ್ವಂಸ

ಬೆಂಗಳೂರು – ಜೆ.ಜೆ.ಆರ್. ನಗರ ಇಲ್ಲಿಯ ವಾರ್ಡ್ ನಂಬರ ೧೩೬ ರಲ್ಲಿ ಹಿಂದೂಗಳ 4 ಸ್ಥಳಗಳಲ್ಲಿ ಸ್ಮಶಾನಭೂಮಿ ಇದೆ. ಅಲ್ಲಿಯ ೩೬೦ ಕ್ಕಿಂತಲೂ ಹೆಚ್ಚಿನ ಹಿಂದೂಗಳ ಸಮಾಧಿಗಳನ್ನು ಕಾಂಗ್ರೆಸ್ಸಿನ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ನ ಮಾಜಿ ನಗರಸೇವಕಿ ಸೀಮಾ ಅಲ್ತಾಫ್ ಖಾನ್ ಇವರ ಪತಿ ಅಲ್ತಾಫ್ ಖಾನ್ ಇವರು ದ್ವಂಸ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಆರೋಪ ಮಾಡಿವೆ. ಜೆ.ಜೆ.ಆರ್. ನಗರದಲ್ಲಿಯ ಬಿಬಿಎಂಪಿ ಕಾಂಗ್ರೆಸ್ ನ ಕೈಯಲ್ಲಿದೆ.

ಆರ್‌.ಟಿ.ಐ. ನ ಎಸ್. ಭಾಸ್ಕರನ್ ಇವರು, ”ಇಲ್ಲಿಯ ಒಂದು ಸ್ಮಶಾನ ಭೂಮಿಯಲ್ಲಿ ಬೆಂಗಳೂರ ಮಹಾನಗರ ಪಾಲಿಕೆಯ ಕಟ್ಟಡವನ್ನು ಕಾನೂನುಬಾಹಿರವಾಗಿ ಕಟ್ಟಲಾಗಿದೆ. ಅದಕ್ಕಾಗಿ ೩೬೦ ಕ್ಕಿಂತಲೂ ಹೆಚ್ಚಿನ ಸಮಾಧಿಗಳನ್ನು ಧ್ವಂಸಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಕಳೆದ ನವಂಬರ್ ನಲ್ಲಿ ದೂರು ದಾಖಲಿಸಲಾಗಿದೆ. ಮಾರ್ಚ್ ೬ ರಂದು ಲೋಕಾಯುಕ್ತ ಅಧಿಕಾರಿಗಳಿಗೆ ಸಮೀಕ್ಷೆ ಮಾಡಲು ಮನವಿ ನೀಡಲಾಗಿದೆ ಹಾಗೂ ಇದರ ಬಗ್ಗೆ ವಿಚಾರಣೆ ನಡೆಸುವುದಕ್ಕಾಗಿ ಗೃಹ ಸಚಿವರಿಗೆ ಮನವಿ ನೀಡಲಾಗಿದೆ. ಇಷ್ಟು ಮಾಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. (ಮನವಿಯನ್ನು ಕಸದ ಬುಟ್ಟಿಗೆ ಹಾಕುವ ಸರಕಾರ ಏನು ಪ್ರಯೋಜನ ? – ಸಂಪಾದಕರು) ಇದರಲ್ಲಿ ಸಹಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. (ಈ ರೀತಿಯ ಬೇಡಿಕೆ ಏಕೆ ಸಲ್ಲಿಸಬೇಕಾಗುತ್ತದೆ ? ಸರಕಾರದ ಗಮನಕ್ಕೆ ಇದು ಬರುವುದಿಲ್ಲವೇ ? ಸಂಪಾದಕರು)

ಸಂಪಾದಕರ ನಿಲುವು

ಕಾಂಗ್ರೆಸ್ ನ ಮತಾಂಧ ಶಾಸಕರಿಂದ ಇದಲ್ಲದೆ ಬೇರೆ ಏನು ಅಪೇಕ್ಷೆ ಮಾಡಲು ಸಾಧ್ಯ ? ಮತಾಂಧ ಲ್ಯಾಂಡ್ ಜಿಹಾದಿಗಾಗಿ ಸ್ಥಾನ ಮತ್ತು ಅಧಿಕಾರದ ಉಪಯೋಗ ಮಾಡುತ್ತಾರೆ, ಇದೇ ಇದರಿಂದ ತಿಳಿದು ಬರುತ್ತದೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !