ಭಾಜಪ ಕವ್ವಾಲಿಯ ಮೂಲಕ ಸರಕಾರಿ ಕೆಲಸಗಳನ್ನು ಮುಸಲ್ಮಾನರ ವರೆಗೆ ತಲುಪಿಸಲಿದೆ !

ಭಾಜಪದ ಅಲ್ಪಸಂಖ್ಯಾತ ಇಲಾಖೆಯಿಂದ `ಸೂಫಿ ಸಂವಾದ ಮಹಾಅಧಿವೇಶನ’ದ ಆಯೋಜನೆ !

ನವ ದೆಹಲಿ – 2024 ರಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚೆಚ್ಚು ಮುಸಲ್ಮಾನರು ಪಕ್ಷಕ್ಕೆ ಮತವನ್ನು ನೀಡಬೇಕೆಂದು ಭಾಜಪ ಅಲ್ಪಸಂಖ್ಯಾತ ಇಲಾಖೆಯು `ಸೂಫಿ ಸಂವಾದ ಮಹಾಅಧಿವೇಶನ’ದ ಸಿದ್ಧತೆಯನ್ನು ಪ್ರಾರಂಭಿಸಿದೆ. ಈ ಚಳುವಳಿಯನ್ನು ಸಂಪೂರ್ಣ ದೇಶಾದ್ಯಂತ ಹಮ್ಮಿಕೊಳ್ಳಲಿದೆ. ಈ ಚಳುವಳಿಯ ಅಡಿಯಲ್ಲಿ ಭಾಜಪದಲ್ಲಿರುವ ಮುಸಲ್ಮಾನ ಮುಖಂಡರು, ಕೇಂದ್ರ ಸಚಿವರು, ರಾಜ್ಯಸಚಿವರು ವಿವಿಧ ದರ್ಗಾಗಳಿಗೆ ಭೇಟಿ ನೀಡಿ ಕವ್ವಾಲಿಯಲ್ಲಿ ಭಾಗವಹಿಸಲಿದ್ದಾರೆ. ಕವ್ವಾಲಿಯ ಮಾಧ್ಯಮದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರಚಾರ ಮಾಡಲಿದ್ದಾರೆ. ಮುಸಲ್ಮಾನ ಸಹೋದರರು ಕವ್ವಾಲಿಯ ಮಾಧ್ಯಮದಿಂದ ಸರಕಾರದ ಕೆಲಸಗಳನ್ನು ಮುಸಲ್ಮಾನರ ವರೆಗೆ ತಲುಪಿಸಲಿದೆ.

ಈ ಚಳುವಳಿಯನ್ನು ಉತ್ತರಪ್ರದೇಶದಿಂದ ಪ್ರಾರಂಭಿಸಲಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿರುವ ದರ್ಗಾಗಳಲ್ಲಿ ಕವ್ವಾಲಿಯನ್ನು ಆಯೋಜಿಸಲಾಗುವುದು. ಈ ರೀತಿಯ ಪ್ರಯೋಗ ಭಾರತೀಯ ಜನತಾ ಪಕ್ಷದಿಂದ ನಡೆಸುತ್ತಿರುವುದು ಮೊಲನೇ ಬಾರಿಯಾಗಿದೆ. ಭಾಜಪ ಈ ಚಳುವಳಿಯ ಮುಖಾಂತರ ಮುಸಲ್ಮಾನರ ಮತಗಳೂ ಅವರಿಗೆ ಮಹತ್ವದ್ದಾಗಿದೆಯೆನ್ನುವ ಸಂದೇಶವನ್ನು ಸಾರಲಿದೆ.

`ಮನ್ ಕಿ ಬಾತ್’ ನ ಉರ್ದು ಭಾಷೆಯಲ್ಲಿ ಪ್ರತಿಗಳನ್ನು ವಿತರಿಸಲಿದ್ದಾರೆ !

ಭಾಜಪ ಉತ್ತರಪ್ರದೇಶದ ಮದರಸಾದಲ್ಲಿ `ಮನ್ ಕಿ ಬಾತ್’ ನ ಉರ್ದು ಭಾಷೆಯ ಪ್ರತಿಗಳನ್ನು ವಿತರಿಸಲು ನಿರ್ಣಯ ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಸ್ಲಿಂ ವಿದ್ವಾಂಸರೊಂದಿಗೆ ನಡೆದ ಚರ್ಚೆಗಳನ್ನು ಉರ್ದು ಭಾಷೆಗೆ ಭಾಷಾಂತರಿಸಿ ಅವುಗಳ ಪ್ರತಿಗಳನ್ನು ಮದರಸಾಗಳಿಗೆ ವಿತರಿಸಲಾಗುವುದು. ಇದರೊಂದಿಗೆ ಭಾಜಪ ಉತ್ತರಪ್ರದೇಶದ ಅಲ್ಪಸಂಖ್ಯಾತ ಮೋರ್ಚಾದ ಕುಂವರ ಬಾಸಿತ ಅಲಿಯವರು `ಮನ್ ಕಿ ಬಾತ್’ನ ಮೋದಿಯವರ 12 ರೇಡಿಯೋ ಸಂವಾದಗಳನ್ನು ಉರ್ದು ಭಾಷೆಗೆ ಭಾಷಾಂತರಗೊಳಿಸಿ ಅದರ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಸಂಪಾದಕೀಯ ನಿಲುವು

ಭಾಜಪ ಮುಸಲ್ಮಾನರನ್ನು ಎಷ್ಟೇ ಹತ್ತಿರ ಮಾಡಿದರೂ, ಅವರು ಭಾಜಪಗೆ ಮತ ನೀಡುವುದಿಲ್ಲ. ಆದ್ದರಿಂದ ಭಾಜಪ ಹಿಂದೂಗಳನ್ನು ಹತ್ತಿರ ಮಾಡಿಕೊಂಡು ವಿಶ್ವಾಸವನ್ನು ಸಂಪಾದನೆ ಮಾಡಿಕೊಂಡರೆ ಹಿಂದೂಗಳು ಭಾಜಪಕ್ಕೆ ಬಹುಮತ ನೀಡಿ ಖಂಡಿತವಾಗಿಯೂ ಚುನಾಯಿಸುವರು !