ಬ್ರಿಟಿಷರು ಕೊಹಿನೂರ ವಜ್ರ ಅಷ್ಟೇ ಅಲ್ಲದೆ ಪಚ್ಚೆಯ ಸೊಂಟದಪಟ್ಟಿ, ೨೨೨ ಮುತ್ತಿನ ಹಾರ ಮುಂತಾದ ಆಭರಣಗಳನ್ನು ಭಾರತದಿಂದ ಲೂಟಿ ಮಾಡಿದ್ದರು !

‘ಡಿ ಗಾರ್ಡಿಯನ್’ನಿಂದ ಮಾಹಿತಿ

ಲಂಡನ್ (ಬ್ರಿಟನ) – ‘ದಿ ಗಾರ್ಡಿಯನ್’ ಈ ಬ್ರಿಟನ್ ನ ದೈನಿಕದಲ್ಲಿ ನೀಡಿರುವ ವಾರ್ತೆಯ ಪ್ರಕಾರ ಬ್ರಿಟಿಷರು ಕೊಹಿನೂರ ವಜ್ರ ಅಲ್ಲದೆ ಅನೇಕ ಅಮೂಲ್ಯ ರತ್ನದ ಆಭರಣಗಳನ್ನು ಕೂಡ ಭಾರತದಿಂದ ಲೂಟಿ ಮಾಡಿದ್ದರು. ಇದರಲ್ಲಿ ಮೂರ್ತಿಗಳು, ಚಿತ್ರಗಳು, ಇದರ ಜೊತೆಗೆ ೧೯ ಪಚ್ಚೆಸಹಿತ ಬಂಗಾರದ ಒಂದು ಸೊಂಟದಪಟ್ಟಿ ಕೂಡ ಸೇರಿದೆ. ಬ್ರಿಟಿಷರ ಅಧಿಕಾರ ಕಾಲಾವಧಿಯಲ್ಲಿ ಸರಕಾರಿ ಇಲಾಖೆ ‘ಇಂಡಿಯಾ ಆಫೀಸ್’ ನ ದಾಖಲೆಗಳಲ್ಲಿ ೪೬ ಪುಟಗಳ ಪೈಲ್ಸ್ ಗಳ ಸಾಕ್ಷಿಯಿಂದ ದಾವೆ ಮಾಡಲಾಗಿದೆ. ಇದರಲ್ಲಿ ಒಂದು ಪರಿಶೀಲನೆಯ ಉಲ್ಲೇಖವಿದೆ. ಅದರಲ್ಲಿ ಮಹಾರಾಣಿ ಮ್ಯಾರಿ (ಎಲಿಜಾಬೇತ ದ್ವಿತೀಯ ಇವರ ಅಜ್ಜಿ) ಇವರ ಉಲ್ಲೇಖದಿಂದ ಅವರ ರಾಜರ ಆಭರಣಗಳ ಮೂಲದ ಉಲ್ಲೇಖ ಮಾಡಲಾಗಿದೆ. ಈ ರತ್ನಗಳು ರಾಣಿ ವಿಕ್ಟೋರಿಯಾದ ಬಳಿ ಕಳೆಸುವ ಮೊದಲು ಅನೇಕ ಮೊಗಲ ಶಾಸಕರ ಬಳಿ ಇದ್ದವು. ೧೯೮೭ ರಲ್ಲಿ ರಾಯಲ್ ಜ್ಯುವೆಲ್ಲರಿಯ ಅಭ್ಯಾಸದಲ್ಲಿ ಲೆಸ್ಲಿ ಫೀಲ್ಡ್ ಇವರು ಮುತ್ತಿನ ಎರಡು ಸರಗಳ ಉಲ್ಲೇಖಿಸಿದ್ದರು. ಅದರಲ್ಲಿ ೨೨೨ ಮುತ್ತುಗಳು ಮತ್ತು ವಜ್ರ, ವೈಡೂರ್ಯಗಳು ಕೂಡ ಇದ್ದವು. ಇದು ಮಹಾರಾಜ ರಣಜಿತ ಸಿಂಹ ಇವರದಾಗಿತ್ತು, ಎಂದು ದಾವೆ ಇದೆ.

ಸಂಪಾದಕೀಯ ನಿಲುವು

ಭಾರತ ಸರಕಾರ ಈ ಆಭರಣಗಳನ್ನು ಹಿಂತರಲು ಪ್ರಯತ್ನ ಮಾಡುವುದೇ ?