ಡೆಹರಾಡೂನ (ಉತ್ತರಾಖಂಡ) – ಭೂಮಿ ಜಿಹಾದ್ ಇರಲಿ ಅಥವಾ ಗೋರಿ ಜಿಹಾದ ಇರಲಿ, ದೇವಭೂಮಿ ಉತ್ತರಾಖಂಡದಲ್ಲಿ ಕಾನೂನಿನ ವಿರುದ್ಧ ಯಾವುದೇ ಕಾರ್ಯ ನಡೆಯಲು ಬಿಡುವುದಿಲ್ಲ. ನಾವು ರಾಜ್ಯದ 1 ಸಾವಿರ ಸ್ಥಳಗಳ ಸಮೀಕ್ಷೆ ನಡೆಸಿದ್ದೇವೆ. ಈ ಸ್ಥಳಗಳಲ್ಲಿ ಅತಿಕ್ರಮಣ ನಡೆಸಿ ಗೋರಿಗಳನ್ನು ಕಟ್ಟಲಾಗಿದೆ. ಒಂದು ವೇಳೆ ಸಂಬಂಧಿಸಿದವರು ಮುಂಬರುವ 6 ತಿಂಗಳಿನಲ್ಲಿ ಅವುಗಳನ್ನು ತಾವಾಗಿಯೇ ತೆಗೆದು ಹಾಕದಿದ್ದರೆ, ಸರಕಾರವು ಆ ಗೋರಿಗಳ ಮೇಲೆ ಸೂಕ್ತ ಕ್ರಮ ನಡೆಸಲಿದೆಯೆಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಎಚ್ಚರಿಕೆ ನೀಡಿದ್ದಾರೆ.
“किसी भी अवैध मजार को छोड़ा नहीं जाएगा , सभी अवैध मजार को तोड़ा जाएगा।”
: पुष्कर सिंह धामी , मुख्यमंत्री , उत्तराखंड pic.twitter.com/dgmcyiWYvG
— Panchjanya (@epanchjanya) April 7, 2023
ರಾಜ್ಯದಲ್ಲಿ ಸರಕಾರಿ ಭೂಮಿಯ ಮೇಲೆ ಅನಧಿಕೃತವಾಗಿ ಗೋರಿ ಕಟ್ಟಲಾಗಿರುವುದು ಬಹಿರಂಗವಾದ ಬಳಿಕ ಮುಖ್ಯಮಂತ್ರಿಗಳು ಈ ಹೇಳಿಕೆಯನ್ನು ನೀಡಿದ್ದಾರೆ. ಸರಕಾರವು ಇಂತಹ ಅನಧಿಕೃತ ಗೋರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕಳೆದ 20 ವರ್ಷಗಳಲ್ಲಿ ಈ ಗೋರಿಗಳನ್ನು ಕಟ್ಟಲಾಗಿದೆಯೆಂದು ಕಂಡುಬಂದಿದೆ. ಈ ಗೋರಿಗಳಲ್ಲಿ ಕೆಲವು ಗೋರಿಗಳ ಮೇಲೆ ಕ್ರಮ ಕೈಕೊಂಡಾಗ ಅವುಗಳ ಬುಡದಲ್ಲಿ ಯಾವುದೇ ಮಾನವ ಅವಶೇಷಗಳು ಕಂಡು ಬರಲಿಲ್ಲ. ಇದರರ್ಥ ಅವು ಸುಳ್ಳು ಗೋರಿಗಳಾಗಿದ್ದು, ಕೇವಲ ಭೂಮಿಯನ್ನು ಕಬಳಿಸುವ ಸಲುವಾಗಿಯೇ ಅವುಗಳನ್ನು ಕಟ್ಟಲಾಗಿದೆಯೆಂದು ಬಹಿರಂಗವಾಗಿದೆ. ಡಿಸೆಂಬರ 2022 ರಿಂದ ಮಾರ್ಚ 2023 ಈ ಕಾಲಾವಧಿಯಲ್ಲಿ 41 ಅನಧಿಕೃತ ಗೋರಿಗಳನ್ನು ಸರಕಾರದಿಂದ ಧ್ವಂಸಗೊಳಿಸಲಾಗಿದೆ.
ಸಂಪಾದಕೀಯ ನಿಲುವು
|