ಬಂಗಾಲದಲ್ಲಿ ಭಾಜಪದ ಪ್ರದೇಶಾಧ್ಯಕ್ಷರಿಂದ ಮಹಿಳೆಯರ ವಿಡಿಯೋ ಪ್ರಸಾರ ಮಾಡಿದ ಆರೋಪ
(ಸಾಷ್ಟಾಂಗ ಪ್ರದಕ್ಷಿಣೆ ಎಂದರೆ ಸ್ವಲ್ಪ ಸ್ವಲ್ಪ ಅಂತರದಲ್ಲಿ ಸಾಷ್ಟಾಂಗ ನಮಸ್ಕಾರ ಹಾಕುತ್ತ ಮುಂದೆ ಹೋಗುವುದು)
ಕೊಲಕಾತಾ – ಬಂಗಾಲದಲ್ಲಿ ಆಢಳಿತಾರೂಢ ತೃಣಮೂಲ ಕಾಂಗ್ರೆಸ್ ಆದಿವಾಸಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಬಂಗಾಲದ ಪ್ರದೇಶಾಧ್ಯಕ್ಷ ಸುಕಾಂತ ಮುಜುಮದಾರ ಇವರು ಆರೋಪಿಸಿದರು. ಕೆಲವು ಆದಿವಾಸಿ ಮಹಿಳೆಯರು ಭಾಜಪದಲ್ಲಿ ಪ್ರವೇಶ ಮಾಡಿದ್ದರು. ಆದ್ದರಿಂದ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು ಅವರಿಗೆ ಸಾಷ್ಟಾಂಗ ಪ್ರದಕ್ಷಣೆ ಹಾಕುವ ಶಿಕ್ಷೆ ವಿಧಿಸಿದರು. ನಂತರ ಅವರಿಗೆ ಬಲವಂತವಾಗಿ ತೃಣಮೂಲ ಕಾಂಗ್ರೆಸ್ ನಲ್ಲಿ ಪ್ರವೇಶ ಪಡೆಯಲು ಅನಿವಾರ್ಯಗೊಳಿಸಿದರು.
ಮುಜುಮದಾರ ಇವರು, ಸಂತ್ರಸ್ತ ಮಹಿಳೆಯರು ಸಾಷ್ಟಾಂಗ ಪ್ರದಕ್ಷಿಣೆ ಹಾಕುತ್ತಿರುವ ವಿಡಿಯೋ ಪ್ರಸಾರ ಮಾಡಿದ್ದಾರೆ. ಅವರು, ‘ತೃಣಮೂಲ ಕಾಂಗ್ರೆಸ್ಸಿನವರು ಆದಿವಾಸಿಗಳನ್ನು ಅವಮಾನಿಸಿದ್ದಾರೆ’. ನಾನು ಭಾರತಾದ್ಯಂತದಲ್ಲಿ ಆದಿವಾಸಿಗಳಿಗೆ ತೃಣಮೂಲ ಕಾಂಗ್ರೆಸ್ಸನ್ನು ವಿರೋಧಿಸುವ ಕರೆ ನೀಡುತ್ತೇನೆ. ಕೆಲವು ದಿನಗಳ ಹಿಂದೆ ತಪನ ಗೊಫಾನಗರ ಇಲ್ಲಿಯ ಮಾರ್ಟಿನ ಕಿಸಕೂ, ಶಿವುಲಿ ಮಾರ್ಡಿ, ಠಕರಾನ ಸೋರೆನ ಮತ್ತು ಮಾಲತಿ ಮುರ್ಮಿ ಇವರು ಭಾಜಪದಲ್ಲಿ ಪ್ರವೇಶ ಪಡೆದಿದ್ದರು. ಅದರ ನಂತರ ಅದರಲ್ಲಿನ ಮೂವರಿಗೆ ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳು ಸಾಷ್ಟಾಂಗ ಪ್ರದಕ್ಷಣೆ ಹಾಕಲು ಅನಿವಾರ್ಯಗೊಳಿಸಿದರು.
Punishment for joining the BJP! Three tribal women of Bengal have been circled? The video went viral https://t.co/EALLLCFK3K
— YET NEWS (@YETNEWS1) April 8, 2023
ಸಂಪಾದಕೀಯ ನಿಲುವು
|