ಬಾಂಗ್ಲಾದೇಶದಲ್ಲಿ ಎರಡು ಜನಾಂಗೀಯ ಗುಂಪುಗಳ ನಡುವೆ ಹಿಂಸಾಚಾರ : 8 ಮಂದಿ ಸಾವು, ಹಲವರಿಗೆ ಗಾಯ

ಢಾಕಾ – ಬಾಂಗ್ಲಾದೇಶದ ಬಂದರಬನ ಜಿಲ್ಲೆಯಲ್ಲಿನ ರೋವಾಂಗಛರಿ ಉಪಜಿಲ್ಲೆಯಲ್ಲಿನ ದುರ್ಗಮ ಪ್ರದೇಶದಲ್ಲಿನ ಎರಡು ಜನಾಂಗೀಯ ಗುಂಪುಗಳಲ್ಲಿ ಇತ್ತೀಚಿಗೆ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರದಲ್ಲಿ ೮ ಜನರು ಹತರಾಗಿದ್ದೂ ಅನೇಕರು ಗಾಯಗೊಂಡರು. ಪೊಲೀಸ ಅಧಿಕಾರಿ ಅಬ್ದುಲ್ ಮನ್ನಾನ ಇವರು, ಘಟನಾ ಸ್ಥಳದಿಂದ ಎಂಟು ಶವಗಳನ್ನು ವಶಕ್ಕೆ ಪಡೆದು ಅವುಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಎಂದು ಹೇಳಿದರು.

ಪೊಳಿಸರು, ಹಿಂಸಾಚಾರದ ನಂತರ ಸುಮಾರು ೨೦೦ ಜನರು ಅವರ ಮನೆಗಳನ್ನು ತೊರೆದಿದ್ದಾರೆ ಮತ್ತು ರೋವಾಂಗಛರಿ ಇಲ್ಲಿ ಸೈನ್ಯದ ನೆಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ‘ಯುನೈಟೆಡ್ ಪೀಪಲ್ಸ್ ಡೆಮೊಕ್ರಟಿಕ್ ಫ್ರಂಟ್’ ಇದರಿಂದ ಬಂಡಾಯ ಎದ್ದು ಹೊರ ಬಂದಿರುವ ‘ಕುಕಿ ಚೀನ ಫ್ರಂಟ್’ ಎಂದು ಹೊಸದಾಗಿ ಸ್ಥಾಪನೆ ಮಾಡಿರುವ ಸಂಘಟನೆಯ ಸದಸ್ಯರು ಈ ಹಿಂಸಾಚಾರದಲ್ಲಿ ಸಹಭಾಗಿ ಆಗಿರುವ ಅನುಮಾನ ಇದೆ. ಎಂದು ಹೇಳಿದರು.

ಸುರಕ್ಷಾ ಅಧಿಕಾರಿಗಳು, ‘ಕುಕಿ ಚೀನ ಫ್ರಂಟ್’ ಇದು ಒಂದು ಸಶಸ್ತ್ರ ಗುಂಪು ಎಂದು ಉದಯಿಸಿದೆ. ಇದರಲ್ಲಿ ಹೆಚ್ಚಿನವರು ಬೋಮ ಜಾತಿಯ ಜನರ ವರ್ಚಸ್ವ ಇದೆ ಮತ್ತು ಅವರು ಇಸ್ಲಾಮಿ ಭಯೋತ್ಪಾದಕ ಗುಂಪಿನ ಜೊತೆ ಮೈತ್ರಿ ಮಾಡಿಕೊಂಡಿದೆ. ‘ಕುಕಿ ಚೀನ ಫ್ರಂಟ್’ ದ ಭಯೋತ್ಪಾದಕ ಚಟುವಟಿಕೆಯಿಂದ ಅನೇಕರಿಗೆ ತಮ್ಮ ಮನೆಗಳನ್ನು ತೊರೆದು ಹೋಗಲು ಅನಿವಾರ್ಯಗೊಳಿಸಿದ್ದಾರೆ.