ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿದರೆ ಶೂರ್ಪಣಕಿಯಂತೆ ಕಾಣಿಸುತ್ತಾರೆ ! – ಭಾಜಪನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ

ಇಂದುರ್ (ಮಧ್ಯಪ್ರದೇಶ) – ಈಗಲೂ ನಾನು ಹೊರಗೆ ಹೋದಾಗ, ಸುಶಿಕ್ಷಿತ ಯುವಕ-ಯುವತಿಯರು ಕುಣಿಯುವುದನ್ನು ನೋಡಿ ಅವರ ಕೆನ್ನೆಗೆ ಬಾರಿಸಬೇಕು ಎಂದೆನೀಸುತ್ತದೆ. ಹೀಗೆ ಮಾಡಿದರೆ, ಅವರ ನಶೆ ಇಳಿಯಬಹುದು. ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿ ಹೊರಬರುತ್ತಾರೆ. ನಾವು ಸ್ತ್ರೀಯರನ್ನು ದೇವತೆ ಎಂದು ಕರೆಯುತ್ತೇವೆ; ಆದರೆ ಈ ಹುಡುಗಿಯರಲ್ಲಿ ದೇವಿಯ ರೂಪ ಕಾಣಿಸದೇ ಅವರಲ್ಲಿ ಶೂರ್ಪಣಕಿ ಕಾಣುತ್ತಾಳೆ. ನಿಜಕ್ಕೂ, ದೇವರು ಅವರಿಗೆ ಎಷ್ಟು ಸುಂದರವಾದ ದೇಹವನ್ನು ನೀಡಿದ್ದಾನೆ. ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳಿ. ಮಕ್ಕಳಲ್ಲಿ ಸಂಸ್ಕೃತಿಯನ್ನು ಬಿಂಬಿಸಿ. ನಾನಗೆ ತುಂಬಾ ಚಿಂತೆಯಾಗುತ್ತದೆ ಎಂದು ಭಾಜಪನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಹೇಳಿದ್ದಾರೆ. ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

೧. ವಿಜಯವರ್ಗಿಯ ಅವರ ಹೇಳಿಕೆಯನ್ನು ಟೀಕಿಸುತ್ತಾ ಕಾಂಗ್ರೆಸ್ ನ ಮಾಧ್ಯಮ ಮುಖ್ಯಸ್ಥ ಪಿಯೂಷ್ ಬಬೆಲೆ ಇವರು, ‘ಈಗ ಹುಡುಗಿಯರು ಏನು ಧರಿಸುತ್ತಾರೆ ಎಂಬುದನ್ನು ಭಾಜಪದವರು ನಿರ್ಧರಿಸುತ್ತಾರೆ’, ಎಂದು ಹೇಳಿದ್ದಾರೆ.

೨. ಟೀಕೆಗೊಳಗಾದ ನಂತರ, ವಿಜಯವರ್ಗಿಯವರು ಸ್ಪಷ್ಠೀಕರಣ ನೀಡುತ್ತಾ, ನನ್ನ ಹೇಳಿಕೆಯನ್ನು ಅಪಹಾಸ್ಯ ಮಾಡಲಾಗಿದೆ. ರಸ್ತೆಯಲ್ಲಿ ಬಿಗಿಯಾದ ಬಟ್ಟೆಯಲ್ಲಿ ಯುವತಿಯೊಬ್ಬಳು ಕುಡಿದ ನಶೆಯಲ್ಲಿ ಓಡಾಡುತ್ತಿದ್ದಳು. ಅವಳಿಗೆ ಶೂರ್ಪಣಕಿ ಅಲ್ಲದೆ ಮತ್ತೇನು ಹೇಳಬೇಕು ? ಹುಡುಗಿಯರಿಗೆ ಅವರು ಆಯ್ಕೆ ಮಾಡಿದ ಬಟ್ಟೆಗಳನ್ನು ಧರಿಸುವ ಹಕ್ಕಿದೆ; ಆದರೆ ನಾನು ನೋಡಿದ್ದೆಲ್ಲವೂ ಇಂದೋರ್ ನಗರದ ಸಂಸ್ಕೃತಿಗೆ ಹೊಂದಿಕೆಯಾಗಲಿಲ್ಲ. ಇದರಿಂದ ಇಡೀ ನಗರವೇ ಯೋಚನೆಗೆ ಒಳಗಾಗಿದೆ ಎಂದು ಹೇಳಿದರು.