ತಮಿಳುನಾಡಿನಲ್ಲಿ ಲವ್ ಜಿಹಾದ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರ ಮೀನಮೇಷ !

ಹಿಂದೂ ಯುವತಿಯಿಂದ ಮಸೀದಿಯ ಎದುರು ಧರಣಿ ಆಂದೋಲನ

ಕೂಡಾಲೋರ್ – ಮಹೇಶ್ವರಿ ಎಂಬ ಹಿಂದೂ ಯುವತಿಯ ಬಂಕಿನ ಅಸ್ಸಲಾಂ ಇವನು ಲೈಂಗಿಕ ಶೋಷಣೆ ಮಾಡಿದನು. ಅದರಿಂದ ಆಕೆ ಗರ್ಭಿಣಿ ಆಗಿದ್ದಾಳೆ. ಆಕೆಯ ಕುಟುಂಬದವರು ಹಿಂದೆ ಬಿದ್ದ ನಂತರ ಅಸ್ಲಂನು ಆಕೆಯನ್ನು ಮತಾಂತರಿಸಿ ಆಕೆಯ ಜೊತೆ ವಿವಾಹ ಮಾಡಿಕೊಂಡನು. ಆಕೆ ಮಗುವಿಗೆ ಜನ್ಮ ನೀಡಿದ ನಂತರ ಅವನು ಪರಾರಿ ಆಗಿದ್ದಾನೆ. ಅವನ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಹಾಗೂ ಆಕೆಯ ಮತಾಂತರ ಮಾಡಲಾಗಿದ್ದ ಅಲ್ಲಿ ಮಾಹೇಶ್ವರಿ ಹೋಗಿದ್ದಾಗ ಅಲ್ಲಿಯ ಜನರು ಆಕೆಯ ಮಾತನ್ನು ಕೇಳಲಿಲ್ಲ. ಆದ್ದರಿಂದ ಮಾಹೇಶ್ವರಿ ಮಸೀದಿಯ ಎದುರು ಧರಣಿ ನಡೆಸಿದಳು. ಅದರ ನಂತರ ಪೊಲೀಸರು ಮಾಹೇಶ್ವರಿಗೆ ಅಸ್ಲಾಮ ಜೊತೆ ಮಾತನಾಡುತ್ತೇವೆ ಮತ್ತು ಅವನಿಗೆ ತಿಳಿಸಿ ಹೇಳುತ್ತೇವೆ, ಎಂದು ಆಶ್ವಾಸನೆ ನೀಡಿದ್ದಾರೆ.

೧. ಚಿದಂಬರದಲ್ಲಿಯ ನಿವಾಸಿಯಾಗಿರುವ ಮಹೇಶ್ವರಿ ಇವಳು ಬಂಕಿಮ ಅಸ್ಲಾಂ ನಡೆಸುವ ಐಸ್ ಕ್ರೀಮ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಸ್ಲಾಂ ಇವನು ಮಹೇಶ್ವರಿಗೆ ಪ್ರೇಮದ ಜಾಲಕ್ಕೆ ಸಿಲುಕಿಸಿದನು. ಅವನು ಆಕೆಗೆ ಮದುವೆಯ ಆಮಿಷ ತೋರಿಸಿ ಆಕೆಯ ಲೈಂಗಿಕ ಶೋಷಣೆ ಮಾಡಿದನು.ಆಕೆ ಗರ್ಭಿಣಿ ಆದ ನಂತರ ಆಕೆಯ ಜೊತೆ ವಿವಾಹವಾಗಲು ನಿರಾಕರಿಸಿದನು.

೨. ಅದರ ನಂತರ ಮಹೇಶ್ವರಿ ಅವರ ಕುಟುಂಬದವರು ವಿವಾಹಕ್ಕಾಗಿ ಹಿಂದೆ ಬಿದ್ದರೂ. ಆ ಸಮಯದಲ್ಲಿ ಅಸ್ಲಾಂ ಇವನು ಮಹೇಶ್ವರಿ ಮತಾಂತರ ಮಾಡಿದರೆ ಮಾತ್ರ ಆಕೆಯ ಜೊತೆ ವಿವಾಹ ಮಾಡಿಕೊಳ್ಳುವೆ ಎಂದು ಶರತ್ತು ವಿಧಿಸಿದನು. ಆಕೆಯ ಕುಟುಂಬದವರು ಈ ಶರತ್ತು ಒಪ್ಪಿದರು. ಅದರ ನಂತರ ಕೂಡಾಲೋರ ಇಲ್ಲಿಯ ಲಬ್ಬೇ ಸ್ಟ್ರೀಟ್ ಪರಿಸರದಲ್ಲಿ ಇರುವ ಮಸೀದಿಯಲ್ಲಿ ಆಕೆಯ ಮತಾಂತರ ಮಾಡಿದರು. ಅದರ ನಂತರ ಆಕೆಯ ಜೊತೆ ವಿವಾಹ ಮಾಡಲಾಯಿತು.

೩. ವಿವಾಹದ ನಂತರ ಕೆಲವು ದಿನದಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದಳ ; ಆದರೆ ಅದರ ನಂತರ ಅಸ್ಲಾಂ ಪರಾರಿ ಅದನು. ಅದರ ನಂತರ ಅವಳು ಮಸೀದಿಗೆ ಹೋಗಿ ವಿಚಾರಿಸಿದಳು. ಆದರೆ ಮಸೀದಿಯಲ್ಲಿ ಆಕೆಗೆ ಉಡಾಫೆಯ ಉತ್ತರ ನೀಡಿದರು. ಮಸೀದಿಗೆ ಹೋಗಿ ಆಕೆ ಅಸ್ಲಾಮಗೆ ತಿಳಿಸಿ ಹೇಳಲು ಒತ್ತಾಯಿಸಿದಳು.

೪. ಮಸೀದಿಯ ವ್ಯವಸ್ಥಾಪಕರು ಮಹಿಳಾ ಪೊಲೀಸರಿಗೆ ಕರೆಸಿದರು ಮತ್ತು ಮಹೇಶ್ವರಿಯನ್ನು ಮಸೀದಿ ಪರಿಸರದಿಂದ ಹೊರಹಾಕಲು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂದ್ವೇಷಿ ದ್ರಮುಕದ ರಾಜ್ಯದಲ್ಲಿ ಪೊಲೀಸರು ಲವ್ ಜಿಹಾದಿಗಳನ್ನು ರಕ್ಷಿಸುವುದರಲ್ಲಿ ಆಶ್ಚರ್ಯವೇನು ?