ಉದಯಪುರ (ರಾಜಸ್ಥಾನ) – ಉದಯಪುರ ಜಿಲ್ಲಾಧಿಕಾರಿ ತಾರಾಚಂದ್ ಮೀಣಾ ಅವರು ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜಗಳನ್ನು ಹಾರಿಸುವುದನ್ನು ನಿಷೇಧಿಸಿದ್ದಾರೆ ಹಾಗೂ ಸಂಚಾರ ನಿಷೇಧದ ಆದೇಶವನ್ನೂ ಹೊರಡಿಸಿದ್ದಾರೆ. ಈ ನಿಷೇಧವು ೨ ತಿಂಗಳವರೆಗೆ ಇರುತ್ತದೆ. ಹನುಮಾನ ಜಯಂತಿಯ ಹಿಂದಿನ ದಿನ ಈ ಆದೇಶವನ್ನು ಹೊರಡಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಲ್ಲಿ ರಾಜಕೀಯ ಕಟ್ಟಡಗಳು, ಸರಕಾರಿ ಕಚೇರಿಗಳು, ಸಾರ್ವಜನಿಕ ಉದ್ಯಾನವನಗಳು, ವೃತ್ತಗಳು, ವಿದ್ಯುತ್ ದೀಪದ ಕಂಬಗಳು, ಟೆಲಿಫೋನ್ ಕಂಬಗಳು ಇತ್ಯಾದಿಗಳಲ್ಲಿ ಈ ಧ್ವಜಗಳನ್ನು ನೇತುಹಾಕುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
#Udaipur bans religious flags, symbols at public properties for 2 months#Rajasthan
Read here: https://t.co/P723R4PYTR pic.twitter.com/Srj3adxV2j
— Zee News English (@ZeeNewsEnglish) April 6, 2023
ಸಂಪಾದಕೀಯ ನಿಲುವುರಾಜಸ್ಥಾನದ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ತುಘಲಕ್ ನಿರ್ಧಾರ ! ಭಾರತದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿರುವಾಗ ಇಂತಹ ನಿಷೇಧವನ್ನು ಹೇಗೆ ಹೇರಲು ಸಾಧ್ಯ ? ಭಾರತದ ಬಹುಸಂಖ್ಯಾತ ಹಿಂದೂಗಳು ವರ್ಷವಿಡೀ ಅನೇಕ ಹಬ್ಬಗಳನ್ನು ಮತ್ತು ಉತ್ಸವಗಳನ್ನು ಆಚರಿಸುವಾಗ, ಈ ನಿಷೇಧವು ಹಿಂದೂಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವುದರಿಂದ, ಹಿಂದೂಗಳು ಕಾನೂನುಬದ್ಧವಾಗಿ ಪ್ರತಿಭಟಿಸುವ ಅವಶ್ಯಕತೆ ಇದೆ ! |