ಬೋಟಾದ (ಗುಜರಾತ) – ದೇಶಾದ್ಯಂತ ಶ್ರೀ ಹನುಮಾನ ಜಯಂತಿಯ ಉತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ ಶಾ ಇವರು ಗುಜರಾತ್ ನ ಬೊಟಾದ ಜಿಲ್ಲೆಯ ಸಾಲಂಗಪುರ ದೇವಸ್ಥಾನದಲ್ಲಿ ಭಗವಾನ ಶ್ರೀ ಹನುಮಂತನ 54 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದರು. ಇದಲ್ಲದೇ ಅಮಿತ ಶಾ ಇವರು ಸಾಲಂಗಪುರ ದೇವಸ್ಥಾನದ ಪರಿಸರದಲ್ಲಿ ಶ್ರೀ ಕಷ್ಟಭಂಜನದೇವ ಭೋಜನಾಲಯವನ್ನು ಉದ್ಘಾಟಿಸಿದರು. ಈ ದೇವಸ್ಥಾನದ ಬಗ್ಗೆ ಜನರಲ್ಲಿ ಇಲ್ಲಿನ ಶ್ರೀ ಹನುಮಂತನ ದರ್ಶನದಿಂದ ಜನರಿಗೆ ಶನಿದೇವರ ಕ್ರೋಧದಿಂದ ಮುಕ್ತಿ ಸಿಗುತ್ತದೆಯೆನ್ನುವ ಶ್ರದ್ಧೆಯಿದೆ.
Statue of Lord Hanuman: 54 ಅಡಿ ಎತ್ತರದ ಹನುಮಂತನ ಪ್ರತಿಮೆ ಅನಾವರಣಗೊಳಿಸಿದ ಅಮಿತ್ ಶಾ..#HanumanStatue #HanumanJayanti2023 #Hanuman #HTKannada #KannadaNews https://t.co/JOnt5mATeW
— Hindustan Times Kannada (@HTKannadaNews) April 6, 2023
ಈ ಮೂರ್ತಿಯನ್ನು ಪಂಚಧಾತುವಿನಿಂದ ಸಿದ್ಧಪಡಿಸಲಾಗಿದ್ದು ಅದು 30 ಸಾವಿರ ಕಿಲೋ ತೂಕವಿದೆ. ಈ ಮೂರ್ತಿ 7 ಕಿಲೋಮೀಟರ ದೂರದಿಂದಲೂ ಕಾಣಿಸುತ್ತದೆ. ಈ ಮೂರ್ತಿಯನ್ನು ತಯಾರಿಸಲು 6 ಕೋಟಿ ರೂಪಾಯಿ ವೆಚ್ಚವಾಗಿದೆ. ಸದ್ಗುರು ಗೋಪಾಲನಂದ ಸ್ವಾಮಿಯವರು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಈ ಹನುಮಂತನನ್ನು ಭಕ್ತರು `ಹನುಮಾನದಾದಾ’ ಎನ್ನುವ ಹೆಸರಿನಿಂದ ಸಂಬೋಧಿಸುತ್ತಾರೆ.