|
ನಾಲಂದಾ – ಬಿಹಾರದಲ್ಲಿ ರಾಮನವಮಿಯ ಸಮಯದಲ್ಲಿ ಮತಾಂಧರು ನಡೆಸಿದ ಹಿಂಸಾಚಾರದಿಂದ ಹಿಂದೂಗಳಿಗೆ ಆಗಿರುವ ಹಾನಿಯ ವಿಷಯದ ಮಾಹಿತಿಯನ್ನು ಮುಂದೆ ಬರುತ್ತಿದ್ದೇವೆ. `ನಗರದಲ್ಲಿ ರಾಮನವಮಿಯ ದಿನದಂದು ನಡೆದ ಗಲಭೆಯಲ್ಲಿ ಸುಮಾರು 50-60 ಮತಾಂಧರ ಗುಂಪು ಪೆಟ್ರೋಲ್ ಬಾಂಬ್ ನಿಂದ ಹಿಂದೂಗಳ ಮೇಲೆ ದಾಳಿ ನಡೆಸಿತು. ಈ ಪೆಟ್ರೋಲ ಬಾಂಬ್ ನಿಂದ ಅವರು ಹಿಂದೂಗಳ ಅಂಗಡಿ ಮತ್ತು ಗೊದಾಮಗಳಿಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ಧ್ವಂಸಗೊಳಿಸಿದರು’, ಎಂದು ಈ ದಾಳಿಯಲ್ಲಿ ಪೀಡಿತ ಹಿಂದೂ ಮಾಹಿತಿ ನೀಡಿದನು. ಈ ಗಲಭೆಯಲ್ಲಿ ಹಿಂದೂಗಳ ಕೋಟಿಗಟ್ಟಲೆ ರೂಪಾಯಿಗಳಷ್ಟು ನಷ್ಟವಾಗಿದೆ.
Shocking videos from Bihar of Hindus leaving their houses after violent riots by Peacefuls.
Peacefuls are only 25% here. Still, they are hounding Hindus out.
Peacefuls survive on Government doles worth thousands of crores, ultimately from Hindu taxpayer money. Otherwise,… pic.twitter.com/xzlDI5Bkp2
— True Indology (@TrueIndology) April 1, 2023
ಹಿಂದೂಗಳ ಅಂಗಡಿಗಳನ್ನು ಲೂಟಿ ಮಾಡಿ ಸುಡಲಾಯಿತು !
ಜನರು ರಾಮನವಮಿಯ ಉತ್ಸವವನ್ನು ಆಚರಿಸುತ್ತಿರುವಾಗ ಬಿಹಾರಿನ ನಾಲಂದಾ ಜಿಲ್ಲೆಯಲ್ಲಿ ಮತಾಂಧರು ಈ ಉತ್ಸವವನ್ನು ವಿರೋಧಿಸಿ ಹಿಂಸಾಚಾರ ನಡೆಸಿದರು. ಈ ಹಿಂಸೆಗೊಳಗಾದ ಓರ್ವ ಪೀಡಿತ ಉಮೇಶ ಪ್ರಸಾದ ಗೋಸ್ವಾಮಿ ಇವರು, `ನನ್ನ 10 ಅಂಗಡಿಗಳಿಗೆ ಹಾನಿಯಾಗಿದೆ. ನನ್ನ ಅಂಗಡಿಯ ವಸ್ತುಗಳನ್ನು ಲೂಟಿ ಮಾಡಿ ಅಂಗಡಿಗಳನ್ನು ಸುಟ್ಟರು. ಎಂದರು. ಮತ್ತೋರ್ವ ಪೀಡಿತ ವ್ಯಕ್ತಿ `ನನ್ನ ಕೋಟಿಗಟ್ಟಲೆ ರೂಪಾಯಿಗಳ ಹಾನಿಯಾಗಿದೆ’, ಎಂದು ಹೇಳಿದರು.
ಅಗ್ನಿಶಾಮಕ ವಾಹನಗಳು ಸಮಯಕ್ಕೆ ಸರಿಯಾಗಿ ತಲುಪಲಿಲ್ಲ !
ಅಂಗಡಿಗಳಿಗೆ ಬೆಂಕಿ ಹಚ್ಚಿದ 2-3 ಗಂಟೆಗಳ ಬಳಿಕ ಅಗ್ನಿಶಾಮಕ ವಾಹನಗಳು ಘಟನಾ ಸ್ಥಳವನ್ನು ತಲುಪಿದವು. ಅಲ್ಲಿಯವರೆಗೆ ಅಂಗಡಿಗಳು ಸುಟ್ಟ ಭಸ್ಮವಾಗಿದ್ದವು. ಅಗ್ನಿಶಾಮಕ ವಾಹನಗಳನ್ನು ಕಳುಹಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ, ಅವರು ಸಮಯಕ್ಕೆ ಸರಿಯಾಗಿ ತಲುಪಲಿಲ್ಲ, ಎಂದು ಪೀಡಿತ ನಾಗರಿಕನು ಹೇಳಿದನು. ಹಿಂದೂಗಳ ಒಂದು ದೇವಸ್ಥಾನವೂ ಬೆಂಕಿಗೆ ಆಹುತಿಯಾಯಿತು.
ಹಿಂದೂಗಳ ದೂರುಗಳೆಡೆಗೆ ಪೊಲೀಸರ ನಿರ್ಲಕ್ಷ !
ಮತಾಂಧರು ಹಿಂಸಾಚಾರ ನಡೆಸಿರುವ ಮಾಹಿತಿ ಸಿಗುತ್ತಲೇ ಕೆಲವು ಹಿಂದೂಗಳು ಸಹಾಯಕ್ಕಾಗಿ ಪೊಲೀಸ ಠಾಣೆಯನ್ನು ತಲುಪಿದರು; ಆದರೆ ಅವರ ದೂರನ್ನು ನಿರ್ಲಕ್ಷಿಸಲಾಯಿತು ಎಂದು ಓರ್ವ ಪೀಡಿತನು ಹೇಳಿದನು. (ಇಂತಹ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ ?- ಸಂಪಾದಕರು)
ಸಂಪಾದಕೀಯ ವಿಭಾಗಬಿಹಾರದಲ್ಲಿ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವುಗಳ ಹಿಂದು ವಿರೋಧಿ ಯುತಿಯಿಂದಗಿ ಮತಾಂಧರು ರಾಜಾರೋಷವಾಗಿ ತಿರುಗಾಡುತ್ತಿರುವುದರಲ್ಲಿ ಆಶ್ಚರ್ಯವೇನಿದೆ ? |